*"ಅಂತಾರಾಷ್ಟ್ರೀಯ ಮಟ್ಟದ ಶ್ರೀ "ಗುರು ತಿಲಕ ಪುರಸ್ಕಾರ"ಕ್ಕೆ ನಿಜಗುಣಯ್ಯ ಹೆಚ್ ಎಸ್ ಆಯ್ಕೆ*
ದಾವಣಗೆರೆ- ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ ಆಯೋಜಿಸಿರುವ ವಿಶ್ವ ಶಿಕ್ಷಕರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಅಂತಾರಾಷ್ಟ್ರೀಯ ಮಟ್ಟದ 2023 ನೇ ಸಾಲಿನ " ಶ್ರೀ ಗುರು ತಿಲಕ ಪುರಸ್ಕಾರ" ಪ್ರಶಸ್ತಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಕಾಯಕದಲ್ಲಿ ನಿತ್ಯ ನಿರತರಾಗಿರುವ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುವ ಮೂಲಕ ಸಾವಿರಾರುವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುತ್ತಿರುವ ಅವರ ನಿಷ್ಕಲ್ಮಶ ಸೇವೆಯನ್ನು ಗುರುತಿಸಿ ಸಾಧಕರಾದ ಶ್ರೀ ನಿಜಗುಣಯ್ಯ ಹೆಚ್ ಎಸ್ ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ಸಮಾಜ ವಿಜ್ಞಾನ ಶಿಕ್ಷಕರು ಡಾ ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ನೊಣವಿನಕೆರೆ ತಿಪಟೂರು ತಾಲ್ಲೂಕು ತುಮಕೂರು ಜಿಲ್ಲೆ ಇವರನ್ನು 2023 ನೇ ಸಾಲಿನ ಶ್ರೀ ಗುರು ತಿಲಕ ಪುರಸ್ಕಾರ ನೀಡಿ ಗೌರವಿಸಲಾಗಿದೆ ಎಂದು ವೇದಿಕೆಯ ಸಂಯೋಜಿತ ಕವಿತ್ತ ಕರ್ಮಮಣಿ ಪ್ರೊ ಎಲ್ ಎಚ್ ಪೆಂಡಾರಿ ತಿಳಿಸಿದ್ದಾರೆ ಇವರಿಗೆ ಸಮಸ್ತ ವೇದಿಕೆ ಬಳಗ .ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದ ಶುಭಾಶಯ ತಿಳಿಸಿದ್ದಾರೆ.
ವರದಿ :ಡಾ. ವಿಲಾಸ್ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments