*ನಾಗರಿಕ ಸಮಾಜದ ಕಗ್ಗೊಲೆ *


 ನಾಗರಿಕ ಸಮಾಜದ ಕಗ್ಗೊಲೆ

----------------------------------------------


ನಮ್ಮ ಸಮಾಜದಲ್ಲಿ ಧರ್ಮದ ಬಗ್ಗೆ ತಪ್ಪು ತಿಳುವಳಿಕೆಗಳಿವೆ ಅದನ್ನು ಯಾವದು ಸರಿ ಅಂತ ಹೇಳೋದು ಗುರುವಾದವನ ಕರ್ತವ್ಯವಾಗಬೇಕು. 


ಉದಾ:ನಾವು ನಮಗಾಗಿ ನಮ್ಮ ಮನೆಯವರಿಗಾಗಿ ದುಡಿದರೆ ಅದು ನಮ್ಮ ಕರ್ಮ. ಅದೆ ದುಡಿಮೆಯನ್ನ ನಾವು ಬೇರೆಯವರ ಸಲುವಾಗಿ ಮಾಡಿದರೆ ಅದು ನಮ್ಮ ಧರ್ಮ 


"ಸ್ವಾರ್ಥದಿಂದ ದ್ವೇಷದಿಂದ ಮುಕ್ತವಾಗಿದ್ದೆ ದರ್ಮ ಉಳಿದಿದ್ದು ಯಾವ ಹೆಸರೇ ಇರಲಿ ಅದು ಅಧರ್ಮವೇ"


ಈಗ ನೀವು ಯೋಚಿಸಬಹುದು ನಮಗೆ  ಧರ್ಮ ಅಂದರೆ ಯಾವ ತರ  ಹೇಳಿಕೊಟ್ಟಿದೆ ಸಮಾಜ ಅಂತ ಮತ್ತು ಯಾವ ತರ ನಡೆದುಕೊಳ್ಳತಾ ಇದ್ದಾರೆ ಧರ್ಮದ ಹೆಸರಿನಲ್ಲಿ  ಜನ ಇವತ್ತು ಅಂತಾ....


ಇನ್ನೂ ಜಾತಿ ಎಂಬುದು ಇಂತಹದ್ದೆ ಗೊಂದಲದ ಗೂಡಾಗಿದೆ.. ನೀವು ಎಸ್.ಎಸ್.ಎಲ್.ಸಿ ಯಲ್ಲಿ ಜೀವಶಾಸ್ತ್ರ ಓದುವಾಗ ಬೇರೆ ಬೇರೆ ತಳಿಯ ಸಸ್ಯಗಳನ್ನು ಅಧ್ಯಯನ ಮಾಡರ್ತಿರಿ ಈಗ ಮರೆತಿರಬಹುದು. ಆ ಮಾತು ಬೇರೆ ಅಲ್ಲಿ  ಆ ಸಸ್ಯಗಳ ಗುಣ ಸ್ವಭಾವಗಳ ಆಧಾರದ ಮೇಲೆ  ಸಸ್ಯವಿಜ್ಞಾನಿಗಳು ತಳಿ ಅಥವಾ ಜಾತಿ ವಿಂಗಡನೆ ಮಾಡುತ್ತಾರೆ. ಆದರೆ ನಮ್ಮ ಸಮಾಜ ಜಾತಿ ವಿಂಗಡಿಸಿದ್ದು  ಯಾವ ರೀತಿ ಇದೆ ಒಂದೆ ಗುಣ ಸ್ವಭಾವದ ಜನರನ್ನು ಬೇರೆ ಬೇರೆ ತಳಿ ಅಥವಾ ಜಾತಿಗಳಾಗಿ ವಿಂಗಡಿಸಿದ್ದಾರೆ ಇದಕ್ಕೆ ಯಾವುದೆ ವೈಜ್ಞಾನಿಕ ಪುರಾವೆಯಿಲ್ಲ. ಆದರೂ ಜಾತಿ ಜಾತಿ ಅಂತಾರೆ... ಇದೆಲ್ಲ ತಪ್ಪು ಅಂತ ಕೊನೆಪಕ್ಷ ಶಿಕ್ಷಣ ಪಡೆದವರಿಗಾದರೂ ತಿಳಿದರೆ ಒಳ್ಳೆಯದು... ಸಮಾಜ ತಪ್ಪು ಮಾರ್ಗದರ್ಶನ ಮಾಡುತ್ತಿರುವಾಗ ಶಿಕ್ಷಣದ ಮುಖಾಂತರವಾದರೂ ಅದು ಸರಿ ಹೋಗಬೇಕು.. ಇಲ್ಲದಿದ್ದರೆ ನಾವು ಕಲಿತ ಶಿಕ್ಷಣ ಹೊಟ್ಟೆಪಾಡಿಗಷ್ಟೆ ಸಂಬಂಧಿಸಿದ್ದು ಅಂತ ಅರ್ಥಾಗುತ್ತೆ... ಅದಲ್ಲ ಶಿಕ್ಷಣದ ಗುರಿ ಜನರನ್ನು ಸದ್ಭಾವದ ನಯವಿನಯದ ವ್ಯಕ್ತಿಗಳನ್ನಾಗಿ ಮಾಡುವುದು ಆ ಮೂಲಕ ಉತ್ತಮ ವರ್ತನೆಯ ನಾಗರಿಕರನ್ನು ರೂಪಿಸುವುದು ಶಿಕ್ಷಣದ ಗುರಿಯಾಗಬೇಕು.


ಅಷ್ಟೊಂದು ಶಿಕ್ಷಣದ ವ್ಯವಸ್ಥೆ ಇಲ್ಲದ ಕಾಲದಲ್ಲಿ  ಧರ್ಮದ ಜಗಳಗಳು ಜಾತಿಯ ಜಗಳಗಳು ಆಗುತ್ತಿದ್ದವು. ಅದು ಶಿಕ್ಷಣದ ಕೊರತೆ ಇದ್ದ ಕಾಲವದು ಆದರೆ ಈ ಕಾಲದಲ್ಲೂ ಧರ್ಮದ ಜಗಳ ಜಾತಿ ಜಗಳ ಆಗುತ್ತವೆ ಎಂದರೆ ನಾಗರಿಕ ಸಮಾಜದ ಕಗ್ಗೊಲೆ ಅದು.


✍🏻ಪರಸಪ್ಪ ತಳವಾರ

Image Description

Post a Comment

0 Comments