ಇಂದು ಜಾನಪದ ಕಲೆಗಳ ತವರೂರಾದ ಚಾಮರಾಜನಗರದಲ್ಲಿ ಬಹಳ ಅದ್ದೂರಿಯಾಗಿ ವಿವಿಧ ಕಲಾ ತಂಡಗಳೊಂದಿಗೆ ದಸರಾ ಕಾರ್ಯಕ್ರಮಕ್ಕೆ ವಿಜೃಂಭಣೆಯಿಂದ ಆಚರಿಸಲು
ನಗರದ ಜಿಲ್ಲಾ ಉಸ್ತವಾರಿಯಾದ ಕೆ. ವೆಂಕಟೇಶ್ ರವರು ಕಾರ್ಯಕ್ರಮಕ್ಕೆ
ಚಾಲನೆ ನೀಡಿದರು.
ದಸರಾ ಕಾರ್ಯಕ್ರಮಕ್ಕೆ ಚಾಮರಾಜನಗರದ ವಿವಿಧ ಕಲಾ ಕ್ಷೇತ್ರಗಳಲ್ಲಿನ ಕಲಾ ತಂಡಗಳು ಭಾವಹಿಸಿದ್ದವು ಜೊತೆಗೆ ಸಮಾಜಕಲ್ಯಾಣ ಇಲಾಖೆ, ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ ಚಾಮರಾಜನಗರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಹು ಮುಖ್ಯವಾಗಿ ಜಿಲ್ಲಾಡಳಿತ ಚಾಮರಾಜನಗರ ವತಿಯಿಂದ ಬಹಳ ಅದ್ದೂರಿಯಾಗಿ ಕಾರ್ಯಕ್ರಮ ಜರುಗಿತ್ತು.
ಕಾರ್ಯಕ್ರಮದಲ್ಲಿ - ಕಂಸಾಳೆ ನೃತ್ಯ, ಡೊಳ್ಳು ಕುಣಿತ, ವಾದ್ಯ ಗೋಷ್ಠಿ ವೃಂದ, ಹುಲಿ ವಷಧಾರಿಗಳ ಕುಣಿತ, ವೀರಗಾಸೆ ಕುಣಿತ, ಬ್ಯಾಂಡ್ ಸೆಟ್ ವೃಂದ, ಗಾಡಿ ಗೊಂಬೆಗಳ ವೇಷದಾರಿ ಕುಣಿತ, ಇನ್ನೂ ಹಲವಾರು ಕಾರ್ಯಕ್ರಮಗಳೊಂದಿಗೆ ಸಾಗಿತು.
ಕನಸು ಸಾಂಸ್ಕೃತಿಕ ಟ್ರಸ್ಟ್ (ರಿ) ಚಾಮರಾಜನಗರ ಇವರು
ಜನಪದ ಕಲೆಗಳು ಮತ್ತು ರಂಗ ತರಬೇತಿಗಳ ವೇದಿಕೆಯ ವತಿಯಿಂದ *"ಕಂಸಾಳೆ ನೃತ್ಯ"* ವನ್ನು ಮಕ್ಕಳಿಗೆ ತರಬೇತಿ ನೀಡಿ ಮಲೈ ಮಾದೇಶ್ವರರ ಹಾಡಿಗೆ ಕಂಸಾಳೆ ನೃತ್ಯವನ್ನೂ ಪ್ರಸ್ತುತ ಪಡಿಸಲಾಯಿತು.
ಕಲೆಗೆ ಹೆಸರಾದ ಜಾನಪದ ಸೊಗಡು ನಮ್ಮ ಗಡಿನಾಡು ಚಾಮರಾಜನಗರ.
ರಾ.ನಾ.ಮಾಂಕ್...
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments