*ಶೀರ್ಷಿಕೆ : "ವಿಜಯದಶಮಿ" * ನವರಾತ್ರಿ ಭಕ್ತಿ ಗೀತೆ*

 ನವರಾತ್ರಿ ಭಕ್ತಿ ಗೀತೆ 



ಶೀರ್ಷಿಕೆ : ವಿಜಯದಶಮಿ

ವಿಜಯದಶಮಿ ನವರಾತ್ರಿ ವೈಭವ

ತಾಯಿ ಚಾಮುಂಡೇಶ್ವರಿಯ ಉತ್ಸವ

ಸಂಸ್ಕೃತಿ ಸಂಪ್ರದಾಯ ಸಾರುವ

ಸಾಂಸ್ಕೃತಿಕ ನಗರಿಯಲ್ಲಿ ವಿಜಯೋತ್ಸವ||ಪ||


ನವರಾತ್ರಿ ನವ ದೇವಿಯ ವೈಭವ

ನವ ದಿವಸ ನವ ಹರುಷದಿ ತುಂಬುವ

ನಮಿಸಿ ಪ್ರಾರ್ಥಿಸಿ ಆಚರಿಸುವ

ವಿಜಯದಶಮಿ ಹಬ್ಬದ ಉತ್ಸವ||ಪ||


ಮಹಿಷಾಸುರ ನಾ ತಾಯಿ ಸಂಹರಿಸಿ

ವಿಜಯದಶಮಿಗೆ ತಾಯಿ ಸಾರಥಿ 

ಚಾಮುಂಡಿ ಬೆಟ್ಟದ ತಪ್ಪಲಲ್ಲಿ ನೆಲಸಿ

ವಿಜಯದಶಮಿಯ ಸಂಭ್ರಮದಿ ಆಚರಿಸಿ||ಪ ||


ವಿಶ್ವ ವಿಖ್ಯಾತ ಜಂಬೂಸವಾರಿ ವೈಭವ

ಅಭಿಮನ್ಯು ಹೊತ್ತು  ಚಿನ್ನದ ಅಂಬಾರಿ ನೋಡುವ

ತಾಯಿ ಚಾಮುಂಡೇಶ್ವರಿ ದರುಶನ ಪಡೆಯುವ

ವಿಜಯದಶಮಿ ದಿನಕೆ ವಿಜಯೋತ್ಸವ||ಪ||


ಸಾಹಿತ್ಯ ರಚನೆ :ಬಸವೇಶ ಎಸ್ ಯುವ

ಸಾಹಿತಿ(ಶಿಕ್ಷಕರು )

ತಿ. ನರಸೀಪುರ 


Image Description

Post a Comment

0 Comments