*'ನಮ್ಮ ಭಾರತ ಸಂವಿಧಾನ' ಕುರಿತ ಸ್ವರಚಿತ ಕವನ ರಚನೆ ಸ್ಪರ್ಧೆಯಲ್ಲಿ ಕವಿ ಸುಹೇಚ ಪ್ರಥಮ ಸ್ಥಾನ ಪಡೆದಿದ್ದಾರೆ*
ಧಾರವಾಡದ ಗಣಕರಂಗವು ೧೫ ಸಪ್ಟೆಂಬರ್ ೨೦೨೩ರಂದು ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಗೂಗಲ್ ಮೀಟ್ ನಲ್ಲಿ ಏರ್ಪಡಿಸಿದ್ದ ಅಂತರ್ ರಾಜ್ಯ ಮಟ್ಟದ 'ನಮ್ಮ ಸಂವಿಧಾನ' ಸ್ವರಚಿತ ಕವನ ವಾಚನ ಸ್ಪರ್ಧೆಯಲ್ಲಿ ಸುಹೇಚ ಪರಮವಾಡಿ ಕಾವ್ಯನಾಮದಿಂದ ಸಾಹಿತ್ಯ ಕೃಷಿ ಮಾಡುತ್ತಿರುವ ರಜತ ಕವಿ ಸುಭಾಷ್ ಚವ್ಹಾಣ ಪ್ರಥಮ ಸ್ಥಾನ ಪಡೆದಿದ್ದಾರೆ.
ಕರ್ನಾಟಕ ಸರ್ಕಾರವು ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಪದರತಿದಿನ ಪ್ರಾರ್ಥನೆ ಅವಧಿಯಲ್ಲಿ ಭಾರತ ಸಂವಿಧಾನ ಪೀಠಿಕೆ ಪಠಣವನ್ನು ಖಡ್ಡಾಯಗೊಳಿಸಿ ಆದೇಶಿಸಿದ ಹಿನ್ನೆಲೆಯಲ್ಲಿ ಧಾರವಾಡದ ಗಣಕ ರಂಗ(ರಿ.)ವು ಡಾ. ಬಿ.ಆರ್. ಅಂಬೇಡ್ಕರ್ (ಭೀಮ ರಾವ್ ಬಾಬಾಸಾಹೇಬ) ಕೃತ ಸಮ ಸಮಾನತೆಯ ಭಾರತ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಸ್ವರಚಿತ ಕವನಗಳ ಸ್ಪರ್ಧೆಯನ್ನು ಏರ್ಪಡಿಸಿತ್ತು. ಬಹು ತುರುಸಿನ ಪೈಪೋಟಿಯಲ್ಲಿ ನಡೆದ ಕವನ ರಚನೆ ಮತ್ತು ವಾಚನ ಸ್ಪರ್ಧೆಯಲ್ಲಿ ಹುಬ್ಬಳ್ಳಿಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಭಾಷ್ ಚವ್ಹಾಣ ರವರು ಮೊದಲಿಗರಾಗಿ ಹೊರಹೊಮ್ಮಿದ್ದಾರೆ.
ಸದರಿ ಸ್ಪರ್ಧೆಗೆ ಕರುನಾಡು ಮತ್ತು ಅನ್ಯ ರಾಜ್ಯಗಳಿಂದ ೭೦ ಕ್ಕೂ ಹೆಚ್ಚಿನ ಕವಿ ಕವಯತ್ರಿಯರು ತಮ್ಮ ಸ್ವರಚಿತ ಕವಿತೆಗಳನ್ನು ವಾಚನ ಮಾಡಿದ್ದರು. ಹಿರಿಯ ಸಾಹಿತಿ ಸುಬ್ಬು ಹೊಲೆಯಾರ್ (ಎಚ್. ಕೆ. ಸುಬ್ಬಯ್ಯ) ತೀರ್ಪುಗಾರರಾಗಿ ಉತ್ತಮ ಕವಿತೆಗಳನ್ನು ಆಯ್ಕೆಮಾಡಿದ್ದು; ಗಣಪತಿ ಗೋ. ಚಲವಾದಿ ಕವಿಗೋಷ್ಟಿಯನ್ನು ಸಂಯೋಜಿಸಿದ್ದರು. ವಿಜೇತ ಸುಹೇಚ ಪರಮವಾಡಿ ಇವರಿಗೆ ಭಾರತ ಸಂವಿಧಾನದ ಮೂಲ ಕೃತಿಯ ಕನ್ನಡ ಅವತರಿಕೆ ಮತ್ತು ಅಭಿನಂದನಾ ಪತ್ರವನ್ನು ಅಂಚೆ ಮೂಲಕ ಕಳುಹಿಸಲಾಗಿದೆ ಹಾಗೂ ಎಲ್ಲ ಕವಿಗಳ ಕವನ ವಾಚನ ಧ್ವನಿ ಮುದ್ರಿಕೆಯನ್ನು ಗಣಕರಂಗ ಯೂಟ್ಯೂಬ್ ಚಾನಲ್ ನಲ್ಲಿ ಅಳವಡಿಸಿ ಲಿಂಕ್ಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷರಾದ ಸಿದ್ದರಾಮ ಹಿಪ್ಪರಗಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments