ಗುರುವೆಂದರೆ.......?
|ಗುರು ದೇವೋ ಭವ ||
||ಓಂ ಶ್ರೀ ಗುರುಭ್ಯೋ ನಮಃ ||
ಗುರುವೆಂದರೆ ಜ್ಞಾನ,ಮಾರ್ಗದರ್ಶನ,ತಾಳ್ಮೆ ಸಹನೆಯ ಗುಣ, ವಿನಯ ಸಂಸ್ಕೃತಿಗಳ ಸದ್ಗುಣ. ಅಜ್ಞಾನವನ್ನು ಹೋಗಲಾಡಿಸಿ ಜ್ಞಾನ ವನ್ನು ಹೆಚ್ಚಿಸುವರು ದ್ವಿಗುಣ . ಗುರುವೆಂದರೆ ಭಕ್ತಿ, ಶಕ್ತಿ, ಯುಕ್ತಿ,ವಿದ್ಯಾರ್ಥಿಗಳ ಬದುಕಿಗೆ ನವ ಚೈತನ್ಯದ ಸ್ಫೂರ್ತಿ. ವಿದ್ಯಾರ್ಥಿಗಳ ಸಾಧನೆಯ ಪಯಣಕ್ಕೆ ದಾರಿ ದೀಪವಾಗಿರುವರು ಗುರುಗಳು.
ವಿದ್ಯಾರ್ಥಿಗಳು ತಮ್ಮ ಗುರಿ ತಲುಪಲು ಗುರುವಿನ ಮಾರ್ಗದರ್ಶನ ಬೇಕೆ ಬೇಕು. ಗುರುವಿಲ್ಲದ ನಡೆ ಸಾಧನೆಯಲ್ಲಿ ಆಗುವುದು ಹಿನ್ನಡೆ. ಅಮ್ಮ ಮನೆಯ ಮೊದಲ ಗುರು ಆದರೆ. ನಮ್ಮ ಜೀವನದಲ್ಲಿ ಕಂಡ ಕನಸು ನನಸು ಮಾಡಿಕೊಳ್ಳಲು, ಗುರಿಯನ್ನು ಮುಟ್ಟಲು ಸಾಧನೆಯ ಶಿಖರವೇರಲು ನೂರಾರು ಮೆಟ್ಟಿಲುಗಳ ಹಾಕಿಕೊಡುವವರು ಗುರುಗಳು. ಗುರುಗಳ ಹಿತನುಡಿ ನಮ್ಮ ಬದುಕಿಗೆ ಮುನ್ನುಡಿ. ಸಾವಿರಾರು ಮಕ್ಕಳಿಗೆ ಗುರುಗಳ ನೀಡುವ ಜ್ಞಾನರ್ಜನೆ ಅದುವೇ ಅವರ ಬಹು ದೊಡ್ಡ ಸಾಧನೆ. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವವರೇ ಗುರುಗಳು ಮಾತ್ರ.
ನನ್ನ ಬದುಕಿನಲ್ಲಿ ನನ್ನ ಗುರುಗಳು ವಿದ್ಯಾರ್ಜನೆ ನೀಡಿದಲ್ಲದೆ, ಜೀವನ ನಡೆಸಲು ದಾರಿ ತೋರಿದ ಧರ್ಮ ಗುರು ಎಂದರೆ ತಪ್ಪಾಗಲಾರದು. ಯಾಕೆಂದರೆ ಶಾಲೆಯ ದಿನದ ಪಾಠವಷ್ಟೇ ಅಲ್ಲದೇ , ಯೋಗಸನಾ ದ ಬಗ್ಗೆ ಮತ್ತು ಯೋಗಾಭ್ಯಾಸ ಮುಖಾಂತರ ಸಂಸ್ಕಾರ, ಸಂಘಟನೆ, ಸೇವೆ ಎಂದರೆ ಏನು? ಸಮಾಜದಲಿ ಹೇಗೆ ನಾವು ಬದುಕಬೇಕು? ಯಾವ ರೀತಿ ನಿಸ್ವಾರ್ಥ ಸೇವೆ ಮಾಡಬೇಕು? ಎಂಬುದನ್ನು ತಿಳಿಸಿದವರು ನಮ್ಮ ಗುರುಗಳು.ಅಂದು ಅವರು ನೀಡಿದ ಶಿಕ್ಷಣದಿಂದಾಗಿ ಇಂದು ನಾನು ಒಬ್ಬ ಯೋಗ ಶಿಕ್ಷಕನಾಗಿ ಮತ್ತು ಗಣಕ ಯಂತ್ರ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಾ ಇದ್ದೇನೆ. ಅಂದರೆ ನಮ್ಮ ಗುರುಗಳು ನೀಡಿದ ಒಂದು ಭಿಕ್ಷೆ ಎಂದರೆ ತಪ್ಪಾಗಲಾರದು. ನಮ್ಮ ಗುರುಗಳಿಗೆ ನೆಚ್ಚಿನ ಶಿಷ್ಯನಾಗಿರುವೇ ಎಂಬುದೇ ಒಂದು ಹೆಮ್ಮೆ ಪಡುವ ಸಂಗತಿ. ನನ್ನ ವಿದ್ಯಾರ್ಥಿ ಇಂದು ಉತ್ತಮ ಮಟ್ಟದಲ್ಲಿ ಜೀವನ ಸಾಗಿಸುತ್ತಿದ್ದಾನೆ ಎಂಬುದು ಅವರ ಸಂತೋಷ. ಗುರುಗಳ ಮಾತು ಕೇಳಿದ ಕ್ಷಣ ಜೀವನ ಸಾರ್ಥಕ ಅನಿಸುತ್ತೆ. ನಮ್ಮ ಬದುಕಿನಲ್ಲಿ ಗುರುವಿನ ಸ್ಥಾನ ತುಂಬುವವರು ಗುರುವಷ್ಟೇ ಅಲ್ಲದೇ ನಮ್ಮ ತಂದೆ ತಾಯಿ ಸಹ ಗುರುವಾಗಿ ನಮಗೆ ಬೆನ್ನೆಲುಬಾಗಿ ನಿಂತಿರುತ್ತಾರೆ.
ಹೈಕು :-
ಶೀರ್ಷಿಕೆ :ಗುರು
ಅಜ್ಞಾನದಿಂದ
ಸುಜ್ಞಾನಿಯಾಗಿ ಮಾಡು
ವಿಜ್ಞಾನಿ ಗುರು
ಬಸವೇಶ. ಎಸ್ (ಯೋಗ ಶಿಕ್ಷಕರು)
ಯುವ ಸಾಹಿತಿ
ತಿ. ನರಸೀಪುರ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments