ಮೈಸೂರು ದಸರಾ ಯುವ ಕವಿಗೋಷ್ಠಿಗೆ ಡಾ.ಹೊಂಬಯ್ಯ ಹೊನ್ನಲಗೆರೆ ಆಯ್ಕೆ
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಿಕಿಹಾಳದ ಶ್ರೀಮತಿ ಕುಸುಮಾವತಿ ಮಿರ್ಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಹೊಂಬಯ್ಯ ಹೊನ್ನಲಗೆರೆ ಅವರು ಗುರುವಾರ ಮೈಸೂರು ವಿಶ್ವವಿದ್ಯಾಲಯದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿರುವ ವಿಶ್ವ ವಿಖ್ಯಾತ ಮೈಸೂರು ದಸರಾ ಯುವ ಕವಿಗೋಷ್ಠಿಯಲ್ಲಿ ಕವಿತೆ ವಾಚನ ಮಾಡಲು ಆಯ್ಕೆಯಾಗಿದ್ದಾರೆ ಎಂದು ದಸರಾ ಕವಿಗೋಷ್ಠಿ ಉಪ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೊ.ವಿಜಯಕುಮಾರಿ ಎಸ್ ಕರಿಕಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಾ.ಹೊಂಬಯ್ಯ ಹೊನ್ನಲಗೆರೆ ಅವರು ಯುವ ತಲೆಮಾರಿನ ಲೇಖಕರು, ಸಂಶೋಧಕರು ಸೂಕ್ಷ್ಮ ಸಂವೇದನೆಯ ಬರಹಗಾರರು. ಇದುವರೆಗೆ ಹದಿಮೂರು ಕೃತಿಗಳನ್ನು ರಚಿಸಿದ್ದಾರೆ. ಸಂಶೋಧನೆಯಲ್ಲಿ ಐದು ಕೃತಿಗಳು ಹೊರ ಬಂದಿವೆ. ಅದರಲ್ಲೂ ಮರಾಠಿ ಮತ್ತು ದಲಿತ ಆತ್ಮಕಥೆಗಳನ್ನು ಕುರಿತು ಪಿಡಿಎಫ್ ಸಂಶೋಧನೆ ಮಾಡಿದ್ದಾರೆ. ನೆಲದ ಮಾತು ಎಂಬ ಒಂದು ವಿಮರ್ಶಾತ್ಮಕ ಕೃತಿ. ಕಾಲಕ್ಕೆ ಕನ್ನಡಿ ವಿಶ್ವ ಕವಿ ಕುವೆಂಪು, ಸಾಹಿತ್ಯ ಸಂಸ್ಕೃತಿ ಸಂಕಥನ, ದಲಿತ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು, ನಾ...ಯಾರಿಗಲ್ಲದವಳು ಎಂಬ ಹಲವಾರು ಕೃತಿಗಳನ್ನು ಹೊರತಂದಿದ್ದಾರೆ. ಇವರು 2014,2016,2017ರಲ್ಲಿ ಮೈಸೂರು ದಸರಾ ಕವಿಗೋಷ್ಠಿ ಆಯ್ಕೆ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಡಾ.ಕುಮಾರ್, ಡಾ.ಯೋಗೇಶ್, ಪ್ರೊ.ಅಂಬಳೆ ಮಹಾದೇವ ಸ್ವಾಮಿ, ಡಾ.ಪ್ರಸನ್ನ ನಂಜಾಪುರ, ಡಾ.ಗಿರೀಶ್, ಪ್ರೊ.ತಲಕಾಡು ನಾಗರಾಜ್, ಡಾ.ಚಿಕ್ಕಮಗಳೂರು ಗಣೇಶ್, ಪ್ರೊ.ತಿಮ್ಮಯ್ಯ ಡಾ.ತ್ರಿವೇಣಿ, ಡಾ.ಶಿವಕುಮಾರ್ ಆರ್, ಡಾಶಿವಕುಮಾರ್ ಆರ್ ದಂಡಿನ, ಪತ್ರಕರ್ತ ವಿನೋದ್ ಮಹಾದೇವಪುರ ಅವರು ಅಭಿನಂದಿಸಿದ್ದಾರೆ.
ವರದಿ :ಡಾ. ವಿಲಾಸ್ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments