ದಿನಾಂಕ ೦೭/೧೦/೨೦೨೩ ಶನಿವಾರದಂದು ಉನ್ನತಿ_ಟ್ರಸ್ಟ್ (ರಿ) ವತಿಯಿಂದ ಚಾಮರಾಜನಗರ ಜಿಲ್ಲೆಯ [ಬಿ ಆರ್ ಟಿ] ವಲಯ ಅರಣ್ಯಾಧಿಕಾರಿಗಳು ಕೆ.ಗುಡಿ ವನ್ಯಜೀವಿ ವಲಯ ನಲ್ಲೂರು. ಇವರ ಸಹಯೋಗದೊಂದಿಗೆ ಪ್ಲಾಸ್ಟಿಕ್_ಮುಕ್ತ_ಅರಣ್ಯ_ವಲಯ ಮತ್ತು ೬೯ನೇ_ವನ್ಯಜೀವಿ_ಸಪ್ತಾಹ - ೨೦೨೩ ಕಾರ್ಯಕ್ರಮದ ಜೊತೆಗೆ (ರಾಷ್ಟ್ರೀಯ_ಹೆದ್ದಾರಿ_೯೪೧) ರಾಮಪುರ ಕ್ರಾಸ್ ಯಿಂದ ಕುಳ್ಳೂರು ಗೇಟ್ ವರೆಗೆ ಹೆದ್ದಾರಿಯ ಎರಡು ಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವಸ್ತುಗಳನ್ನು ಮತ್ತು ನೀರಿನ ಬಾಟಲ್ ಗಳನ್ನು ವಿಲೇವಾರಿ ಮಾಡಲಾಯಿತು.
ಈ ಒಂದು
ಸ್ವಚ್ಚತೆಯ_ಆಯೋಜಕರಾದ_ಉನ್ನತಿ_ಟ್ರಸ್ಟ್ ನ ಅಧ್ಯಕ್ಷರಾದ ರಮೇಶ್ ಎಂ. ಗೌರವ ಅಧ್ಯಕ್ಷರಾದ ಎಸ್.ಆರ್. ಗೋವಿಂದ ರಾಜು. ಉಪಾಧ್ಯಕ್ಷರಾದ ಗುರುಸ್ವಾಮಿ. ಪ್ರಧಾನ ಕಾರ್ಯದರ್ಶಿಯಾದ ಡಾ|| ಶಿವಕುಮಾರ ಕೆ. ಖಜಾಂಚಿಯಾದ ಶಿವಬಸವಣ್ಣ ಸಿ. ಮತ್ತು ನಿರ್ದೇಶಕರಾದ ತಿರುಮಲ್ಲೇಶ್, ರಘುಪತಿ ಎಸ್. ಶಿವರಾಜ್ ಎಸ್. (ಮಾಧು) ಮಹದೇವಸ್ವಾಮಿ ಎಸ್.ಎಂ. ಮಹೇಶ್ ಎಸ್.ಹೆಚ್. ಉನ್ನತಿ ಟ್ರಸ್ಟ್ ನ ಸದಸ್ಯರುಗಳು ಹಾಗೂ ಅರಣ್ಯ ವಲಯ ಅರಣ್ಯಾಧಿಕಾರಿಯಾದ ವಿನೋದ್_ಗೌಡ ರವರು ಅಧಿಕಾರಿ ಸಿಬ್ಬಂದಿ ವರ್ಗದವರು ಜೊತೆಗೆ ಮಹಾನಾಯಕ ಡಾ|| ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷರಾದ ಚಂದ್ರಕಾಂತ್ ಎಸ್.ಬಿ. ಹಾಗೂ ಪದಾಧಿಕಾರಿಗಳು ಮತ್ತು ಕನಸು ಸಾಂಸ್ಕೃತಿಕ ಟ್ರಸ್ಟ್ ನ ಅಧ್ಯಕ್ಷರಾದ ಪುಷ್ಪಲತಾ ಕಾರ್ಯದರ್ಶಿಯಾದ ನಾಗರತ್ನ ರವರು ಮತ್ತು ಪುನಜನೂರು ಗ್ರಾಮ ಪಂಚಾಯಿತಿಯ ಅಧಿಕಾರಿಯಾದ ಬಸವಣ್ಣ ರವರು ಹಾಗೂ ಅಟ್ಟುಗೂಳಿಪುರ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ವರ್ಗದವರು ಸರ್ವಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ 80 ರಿಂದ 90 ಚೀಲಗಳು ಸರಿಸುಮಾರು 600 ಕೆಜಿ ಎಷ್ಟು ಪ್ಲಾಸ್ಟಿಕ್ ಗಳು ನೀರಿನ ಬಾಟಲ್ ಗಳು ಗಾಜಿನ ಬಾಟಲ್ ಗಳು ದೊರೆತ ಒಂದು ಅಂದಾಜಿನ ಮಾಹಿತಿಯೊಂದಿಗೆ.
ಆದ್ದರಿಂದ
ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಳಕೆಯ ತ್ಯಾಜ್ಯವಸ್ತುಗಳನ್ನು ಬಿಸಾಡುವುದು ಪರಿಸರಕ್ಕೆ ವಿರುದ್ಧವಾದ ನಡೆಯಾಗಿದೆ...
ಪ್ರಕೃತಿಯ ಒಂದು ಭಾಗವು ಪ್ರಾಣಿ ಮತ್ತು ಪಕ್ಷಿಗಳ ಸಂಕುಲವಾದರೆ ಮತ್ತೊಂದು ಭಾಗವೇ ಈ ಮಾನವ ಸಂಕುಲ...
ರಾ.ನಾ.ಮಾಂಕ್...
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments