*ಯಾರು ಶ್ರೇಷ್ಠ*
ಗಾಳಿ, ನೀರು, ಬೆಳಕು, ಬೆಂಕಿ
ಭೂಮಿ, ಆಕಾಶ ಎಲ್ಲವೂ ಶ್ರೇಷ್ಠವೇ
ಆದರೆ ಯಾರು ಶ್ರೇಷ್ಠರೆಂದು
ವಾದಕ್ಕಿಳಿದು ಜಗಳಕ್ಕಿಳಿದರು
ಗಾಳಿ ಅಂತು ನಾನಿಲ್ಲದೆ ಉಸಿರು
ಇಲ್ಲ, ಉಸಿರುಕೊಟ್ಟವನೆ ಶ್ರೇಷ್ಠ ಅಂತು
ನೀರು ಹೇಳಿತು ನೀನು ಉಸಿರು ಕೊಡಲು ಮೊದಲು ಹಸಿರಾಗಬೇಕು
ನನ್ನಿಂದಲೇ ಹಸಿರು ಆ ಮೇಲೆ ನಿನ್ನ
ಉಸಿರು ಅದಕ್ಕೆ ನಾನು ಶ್ರೇಷ್ಠ ಅಂತ
ಬೆಳಕು ಹೇಳಿತು ಉಸಿರಿದ್ದರೇನು
ಹಸಿರಿದ್ದರೇನು ನೋಡಲು, ಆನಂದಿಸಲು ನಾನು ಬೇಕು
ಅದಕ್ಕೆ ತಾನು ಶ್ರೇಷ್ಠ ಅಂತು
ಬೆಂಕಿ ಹೇಳಿತು ಇಲ್ಲಿ ಯಾರು
ಶ್ರೇಷ್ಠ ರಲ್ಲ ನನ್ನ ಬಿಟ್ಟರೆ
ಸೂರ್ಯನಾದ ನನ್ನಿಂದಲೇ ಎಲ್ಲ
ನಾನೇ ಶ್ರೇಷ್ಠ ಅಂತು
ಭೂಮಿ ಹೇಳಿತು ಎಲ್ಲರೂ ಶ್ರೇಷ್ಠರೇ
ಆದರೆ ನಾನಿದ್ದಾಗಲೇ ನೀವೆಲ್ಲ
ಸಕಲವೂ ನನ್ನಿಂದಲೇ ಸಾಧ್ಯ ಅಂದಮೇಲೆ ಯಾರು ಶ್ರೇಷ್ಠ ಹೇಳಿ?ಅಂತು
ಆಕಾಶ ಹೇಳಿತು ಗ್ರಹ,ತಾರೆ,ನಕ್ಷತ್ರ
ಸೌರ ಮಂಡಲವೆಲ್ಲ ಈ ನಭೋ
ಮಂಡಲದ ಆಶ್ರಯದಲ್ಲಿರುವಾಗ
ನಾನೇ ಶ್ರೇಷ್ಠ ಅಂತು
ಈ ವಾದ ಆಲಿಸಿದ ಭಗವಂತ ಹೇಳಿದ
ಇಲ್ಲಿ ನಾನೂ ಶ್ರೇಷ್ಠ ಅಲ್ಲ
ಎಲ್ಲರೂ ಶ್ರೇಷ್ಠರೇ ಆದರೆ
ಯಾರು ಶ್ರೇಷ್ಠ ರಲ್ಲ
ಸೃಷ್ಟಿಯಲ್ಲಿ ಶ್ರೇಷ್ಠ ವಾದದೊಂದೆ
ಸಮಯ-ವೇಳೆ-ಟೈಮ್ ಅಂತಂದ
ಸಮಯವೇ ಶ್ರೇಷ್ಠ ಅಂದ ಮೇಲೆ
ಸಮಯದ ಅರಿವು ಸಾಧನೆಯ, ಬದುಕಿನ, ಜೀವನದ ಅಮೂಲ್ಯ ರತ್ನ
ಸಮಯ,ಸಮಯ, ಸಮಯ
ಡಾ. ಮಹಾದೇವ ಪೋತರಾಜ್
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments