ಜನಸ್ನೇಹಿ ಫೌಂಡೇಶನ್ ಹಾಗೂ ಶ್ರೀನಿಧಿ ಫೌಂಡೇಶನ್ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ವಿವಿದ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಮಹಾತ್ಮಾ ಗಾಂಧಿ ಸದ್ಭಾವನಾ ಪ್ರಶಸ್ತಿ ಕಾರ್ಯಕ್ರಮವನ್ನು 8-10-2023 ಬಾನುವಾರದಂದು ಬೆಳಿಗ್ಗೆ 10 . 30 ಗಂಟೆಗೆ ಜಿಲ್ಲಾ ಕನ್ನಡ ಸಾಹಿತ್ಯ ಭವನ ಧಾರವಾಡದಲ್ಲಿ ನಡೆಸಲಾಯಿತು. *ವಿಜಯಪುರದ ಉದಯೋನ್ಮುಖ ಬರಹಗಾರ್ತಿ ಲೇಖಕಿಯಾದ ಶ್ರೀಮತಿ ಮಮತಾ ಮುಳಸಾವಳಗಿ* ಇವರಿಗೆ ವಿಶೇಷ ಗೌರವ ಸನ್ಮಾನದೊಂದಿಗೆ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದ ಸರ್ವಾಧ್ಯಕ್ಷರಾದ ಜಿಲ್ಲಾ ಧಾರವಾಡ ಕ ಸಾ ಪ ದ ಅಧ್ಯಕ್ಷರಾದ ಡಾ,ಲಿಂಗರಾಜ ಅಂಗಡಿಯವರು ಹಾಗೂ ದಿವ್ಯ ಸಾನಿಧ್ಯ ವಹಿಸಿದಂತ ಶ್ರೀ 108 ಷ .ಬ್ರ ಗುರುಶಾಂತಲಿಂಗ ಮಹಾ ಸ್ವಮಿಗಳು ಇಟಗಿ, ಮುಖ್ಯ ಅಥಿತಿಗಳಾದ ಶ್ರೀ ಎ ಬಿ ಉಪ್ಪಿನ್ ರವರು ಮತ್ತು ಇನ್ನೂ ಅನೇಕ ಪ್ರಮುಕ ಗಣ್ಮರಿದ್ದು ಕಾರ್ಯಕ್ರಮವು ಬಲು ಅಚ್ಚುಕಟ್ಟಾಗಿ ನೇರವೇರಿಸಲಾಯಿತು. ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿದ ಎರಡು ಫೌಂಡೇಶನ್ ಅಧ್ಯಕ್ಷರು ಮತ್ತು ಗೌರವಾಧ್ಯಕ್ಷರಾದ ಮಂಜುನಾಥ ಶಿವಕ್ಕನವರು ಈ ಕಾರ್ಯಕ್ರಮವನ್ನ ಯಶಸ್ವಯಾಗಿ ಜರುಗವಂತೆ ಕಾರ್ಯ ನಿರ್ವಹಿಸಿದರು.
ವರದಿ :ಡಾ. ವಿಲಾಸ್ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments