ಒಂದು ಪೇಸ್ಬುಕ್ ಕವಿತೆಯ ಓದು
ಬೆಳಗಾವಿ ಜಿಲ್ಕೆಯ ರಾಯಬಾಗದ ಹಿರಿಯ ಕವಿಗಳಾದ ಶ್ರೀ ಶಿವಾನಂದ ಬೆಳಕೋಡ ಸರ್ ಪೇಸ್ ಬುಕ್ ಮಾಧ್ಯಮದಲ್ಲಿ ತುಂಬ ಸಕ್ರಿಯರು.ಅವರು ಆಗಾಗ ಪೊಸ್ಟ ಮಾಡುವ ಕವಿತೆಗಳನ್ನು ನಾನು ಓದುತ್ತ ಬಂದಿದ್ದೇನೆ.ನಿನ್ನೆ ಅವರು ಹಾಕಿದ ಒಂದು ಕವಿತೆ ಇಷ್ಟವಾಯಿತು.ಆ ಕವಿತೆಯ ನನ್ನ ಓದಿನ ಖುಷಿಯನ್ನು ನಿಮ್ಮೊಳಗೆ ಹಂಚಿಕೊಳ್ಳುವದು ನನ್ನ
ಆಸೆ.
.ಒಂದುಕವಿತೆ ನಮ್ಮನ್ನು ಮನತಟ್ಟಲು ಅದರೊಳಗಿನ ರಮ್ಯಾಂಶ ಒಂದೆ ಅಲ್ಲ,ಅಲ್ಲಿನ ಸಾಮಾಜಿಕ ಆಯಾಮವು ಖಂಡಿತವಾಗಿಯೂ ಕಾರಣವಾಗುತ್ತದೆ.ಇದೊಂದು ಕಾಣೆಯಾಗಿರುವ ಮನುಷ್ಯತ್ವದ ಹುಡುಕಾಟದ ವಿತೆ.ಕವಿಯ ನಿರಂತರ ಹುಡುಕಾಟ ಅದು ಮನುಷ್ಯತ್ವವೇ ಆಗಿದೆ.
ನಿಜಕ್ಕೂ ಮನುಷ್ಯತ್ವದ ಹುಡುಕಾದಲ್ಲಿ ಇರುವ ಎಲ್ಲರ ಚಿಂತನೆಯನ್ನು ಮತ್ತೊಮ್ನೆ ಕೆಣಕುವ ಉತ್ತಮ ಕವಿತೆಯೊಂದನ್ನು ಬೆಳಕೋಡ ಸರ್ ಅವರು ಒದಗಿಸಿದ್ದಾರೆ.
ಕವಿತೆಯನ್ಜು ನೀವು ಮೊದಲು ಓದಿಯೆ ನನ್ಮೆರಡು ಮಾತು ಓದನೇಕೆಂಬುದು ನವ್ನ ಆಸೆ ಏಕೆಂದರೆ ವಿನರ್ಶಕ ಎಂದೂ ಮುಂದೆ ಬರದೆ ಕವಿತೆ ಮುಂದೆ ಸದಾ ಇರಬೇಕೆಂಬುದು ನನ್ನ ವಿಚಾರ ಮೊದಲು ಕವಿತೆ ಹೀಗಿದೆ ನೋಡಿ
ಚಿಕ್ಕಂದಿನಲ್ಲಿ
ನಾನು ಕಾಣುತ್ತಿದ್ದ ,
ಎಲ್ಲರ ಬಾಳಿಗೆ
ನೆಮ್ಮದಿಯ ನೆರಳಾಗಿದ್ದ
ಆ ಮನುಷ್ಯ
ನಾನು ಬೆಳೆದು
ದೊಡ್ಡವನಾಗುತ್ತಿದ್ದಂತೆಯೇ
ಎಲ್ಲಿಯೋ ಕಳೆದು ಹೋಗಿದ್ದಾನೆ!
ಮತ್ತೆ ಅವನನ್ನೊಮ್ಮೆ
ನೋಡಬೇಕೆಂಬ
ಉತ್ಕಟ ಇಚ್ಚೆಯಿಂದ
ಗುಡಿ ಗುಂಡಾರು
ಮಸೀದೆ, ಚರ್ಚು
ಅಲ್ಲದೆ, ದೇಶದ ತುಂಬೆಲ್ಲ
ಸುತ್ತಿ ಸುತ್ತಿ ಎಲ್ಲಿಬೇಕೆಂದರಲ್ಲಿ
ಅವನಿಗಾಗಿ ಹುಡುಕಾಡಿದೆ,
ಹಗಲಿರುಳೂ ತಡಕಾಡಿದೆ.
ಉ, ಹುಂ, ಕೊನೆಗೂ
ಆತ ಸಿಗಲೇ ಇಲ್ಲ.
ಆತ ಸಿಗಲೇ ಇಲ್ಲ.
ಅವನಿಲ್ಲದ ಬದುಕು
ಬದುಕೇ ಅಲ್ಲವೆನ್ನಿಸಿ ತುಂಬೆಲ್ಲ
ಬಣ್ಣ ಬಣ್ಣದ ಧ್ವಜಗಳ ಹಾರಾಟ,
ಏರಾಟದ ಮೇಲೆ ಏರಾಟ.
ಕೆಳಗೆ ಮುಳ್ಳು ಕಂಟಿಗಳ ನಡುವೆ
ಒಂದು ಸುಂದರವಾದ ಸಮಾಧಿ.
ಅದರೊಳಗಿಂದ
ಮೈ ಜುಮ್ಮೆನಿಸುವಂಥ
ಭಯಾನಕವಾದ ನರಳಾಟ!
ಆ ನರಳಾಟ ಬಹುಶ :
ಅದೇ ಮನುಷ್ಯನದು
ಇದ್ದಿರಬೇಕೆನ್ನಿಸಿ ಬೆಚ್ಚಿಬಿದ್ದು
ನೋಡ ನೋಡುತ್ತಿದ್ದಂತೆಯೇ
ಸಮಾಧಿಯ ಸುತ್ತಲೂ
ಕೊಳ್ಳಿಯ ದೆವ್ವಗಳು
ಕೇ ಕೇ ಹಾಕುತ್ತ
ಕೋರೆ ಹಲ್ಲಿನ
ದಟ್ಟ ಕೂದಲಿನ ರಾಕ್ಷಸರು
ಜಿಗಿಜಿಗಿದಾಡುತ್ತ
ಕತ್ತಿ , ಹಿಲಾಲ್ ಹಿಡಿದುಕೊಂಡು
ಕುಣಿಯುತ್ತಿರುವುದನ್ನು ಕಂಡು
ಹೌಹಾರಿದೆ !
ಮರುಕ್ಷಣವೇ ಅವುಗಳೆಲ್ಲ ತಿರುಗಿ
ನನ್ನತ್ತಲೇ ಬರುವಂತೆ ಅನ್ನಿಸಿ
ಹೆದರಿ ಚೀರುತ್ತ
ಒಮ್ಮೆಲೇ ಎಚ್ಚರಗೊಂಡೆ ,.
ಹಾಸಿಗೆಯನ್ನೆಲ್ಲ
ಒದ್ದೆ ಮಾಡಿಕೊಂಡು
ಯಾರಿಗೂ ಹೇಳಲಾಗದೆ
ಚಡಪಡಿಸುತ್ತ
ನನ್ನಷ್ಟಕ್ಕೆ ನಾನೇ
ಮುಜುಗರಗೊಂಡೆ !
"""""""""''''""""""""""""""""""""""""""""""''"""
ಶಿವಾನಂದ ಬ. ಬೆಳಕೂಡ
ಕವಿ ಬಾಲ್ಯದಲ್ಲಿ ಕಾಣುತ್ತಿದ್ದ ಮನುಷ್ಯತ್ವ, ಪರಸ್ಪರ ಪ್ರೀತಿ ಇಂದು ಕಾಣೆಯಾಗಿರುವದನ್ನು ಕವಿತೆ ಯೋಚಿಸುತ್ತಿದೆ.. ಇದು ಬರಡು ಯುಗ,ಇಂದು ಎಲ್ಲೆಡೆ ರಾರಾಜಿಸುತ್ತಿರುವದು ಸ್ವಾರ್ಥ,ಅಪನಂಬಿಕೆಗಳೇ.ಆದರೆ ಭಾವಜೀವಿನಕವಿಗೆ ಆ ಕಾಲ ನೆನಪಾಗುತ್ತದೆ.ಆತ ಹಳಹಳಿಸುತ್ತಲೇ ಕವಿತೆ ಹೆಣೆಯುತ್ತಾನೆ.
ಎಲ್ಲಿ ಹೋದ ಆ ಮನುಷ್ಯ ಎಂದು ಹುಡುಕುತ್ತಾನೆ.ಬಾಲ್ಯದಲ್ಕಿ ಎಲ್ಕೆಂದರಲ್ಲಿ ಕಾಣುತ್ತಿದ್ದ ಅವನನ್ನು ಕವಿ ಈಗ ಹುಡುಕುತ್ತಿದ್ದಾನೆ.ಆದರೆ ಆ ವ್ಯಕ್ತಿ ಸಿಗುತ್ತಿಲ್ಲ.ಹೀಗಾಗಿ ಅವನನ್ನು ಈ ಗ ಹುಡುಕಬೇಕೆಂದು ದೇಶದ ಮೂಲೆ ಮೂಲೆಯಕ್ಲಿ ಕವಿ ಹುಡುಕುತ್ತಾನೆ. ಅವನ ಸುಳಿವೆ ಸಿಗದೆ ಒದ್ದಾಡುತ್ತಾನೆ
ಮುಖ್ಯವಾಗಿ ಮನುಷ್ಯತ್ವವನ್ನು ಹುಡುಕಿದ್ದು ಗುಡಿ ಗುಂಡಾರದಲ್ಲಿ.ಆದರೆ ಅಲ್ಲೆಲ್ಲೂ ಅವನ ಸುಳಿವಿಲ್ಲ ಅಂದರೆ ನಾವು ಕಟ್ಟಿದ ಗುಡಿ ಹುಂಡಾರಗಳೂ ಈಗ ಮಾನವೀಯೆತೆ ಕಳೆದುಕೊಂಡು ಅವು ಸ್ವಾರ್ಥದ ಚಿಂತನೆಯ ತಾಣಗ ಳಾಗಿರುವದು ಕವಿಗೆ ವಿಷಾದ ಮೂಡಿಸಿದೆ. .ಇಂದಿನವರು ಮಾಡುತ್ತಿರುವ ಜಾತ್ರೆ ಆಚರಣೆಗಳು ಜಾತಿ ಆಚರಣೆಗಳಾಗಿರುವದು ಕವಿಗೆ ಆತಂಕ ಮೂಡಿಸಿದೆ.
ಹೀಗಾಗಿ ಅವನನ್ನು ಹುಡುಕಿ ಹುಡುಕಿ ಸುಸ್ತಾದ ಕವಿಮನೆಗೆ ಹೋಗಬೇಕೆಂದು ಹೊರಡುತ್ತಾನೆ.ಅವನು ಸಿಗದೆ
ಉ, ಹುಂ, ಕೊನೆಗೂ
ಆತ ಸಿಗಲೇ ಇಲ್ಲ.
ಅವನಿಲ್ಲದ ಬದುಕು
ಬದುಕೇ ಅಲ್ಲವೆನ್ನಿಸಿ
ಕಂಗಾಲಾಗಿ ಮನೆಗೆ ಹೊರಟಾಗ ದಾರಿಯಲ್ಲಿ ಯಾರೋ ನರಳಿದ ಧ್ವನಿ ಕವಿಯ ಕಿವಿಗೆ ಬೀಳುತ್ತದೆ.ಕುತೂಹಲದಿಂದ ಹೋಗಿ ನೋಡಿದರೆ ಅವನು ಇವನು ಹುಡುಕುವವನೇ ಆಗಿರುತ್ತಾನೆ.ಅವನ ಸ್ಥಿತಿಗೆ ಮಮ್ಮಲ ಮರುಗಿದ ಕವಿ.
ಅವನಿಲ್ಲದ ಬದುಕು
ಬದುಕೇ ಅಲ್ಲವೆನ್ನಿಸಿ ತುಂಬೆಲ್ಲ
ಬಣ್ಣ ಬಣ್ಣದ ಧ್ವಜಗಳ ಹಾರಾಟ,
ಏರಾಟದ ಮೇಲೆ ಏರಾಟ.
ಇವನ್ನೆಲ್ಲ ತಡಕುತ್ತ ಮುಂದೆ ಸಾಗುತ್ತಾನೆ. ಕೊನೆಗೂ ಒಂದು ಮುಳ್ಳುಕಂಟಿ ಯ ನಡುವೆ ನರಳುತ್ತ ಬಿದ್ದ ಅವನ ಚಿತ್ರ.ಕಾಣುತ್ತದೆ. ಆದರೆ ಆ ಮನುಷ್ಯ ಭಯಂಕರ ಸ್ಥಿತಿಯಲ್ಲಿದ್ದಾನೆ
ಕೆಳಗೆ ಮುಳ್ಳು ಕಂಟಿಗಳ ನಡುವೆ
ಒಂದು ಸುಂದರವಾದ ಸಮಾಧಿ.
ಅದರೊಳಗಿಂದ
ಮೈ ಜುಮ್ಮೆನಿಸುವಂಥ
ಭಯಾನಕವಾದ ನರಳಾಟ!
ಆ ನರಳಾಟ ಬಹುಶ :
ಅದೇ ಮನುಷ್ಯನದು
ಇದ್ದಿರಬೇಕೆನ್ನಿಸಿ ಬೆಚ್ಚಿಬಿದ್ದು
ಹೀಗೆ ಕವಿ ಅವನನ್ನು ಬೆಚ್ಚಿ ಬಿದ್ದು ನೋಡುತ್ತಾನೆ.ಅವನನ್ನು ಸುತ್ತಕೊಳ್ಳಿದೇವಗಳು ಕುಣಿಯತೊಡುತ್ತವೆದಟ್ಟ ಕೂದಲಿನ ರಾಕ್ಷಸ ಗಣ ಕುಣಿಯ ತೊಡಗುತ್ತದೆ.ಅವರ ಕೈಯಲ್ಕಿ ಕತ್ತಿ ಹಿಲಾಲುಗಳಿವೆ.ಅವರು ಅವನನ್ನು ಸುತ್ತುವರಿದಿದ್ದಾರೆ.ಅವರು ಹಿಡಿದ ಆ ವಸ್ತುಗಳು ಯಾವುದೊ ಜಾತಿ ಜನಾಂಗದ ಪ್ರತಿನಿಧಿ ಸಭೆಗಳಂತೆ ಕಾಣಿಸುತ್ತವೆ.
ನೋಡ ನೋಡುತ್ತಿದ್ದಂತೆಯೇ
ಸಮಾಧಿಯ ಸುತ್ತಲೂ
ಕೊಳ್ಳಿಯ ದೆವ್ವಗಳು
ಕೇ ಕೇ ಹಾಕುತ್ತ
ಕೋರೆ ಹಲ್ಲಿನ
ದಟ್ಟ ಕೂದಲಿನ ರಾಕ್ಷಸರು
ಜಿಗಿಜಿಗಿದಾಡುತ್ತ
ಕತ್ತಿ , ಹಿಲಾಲ್ ಹಿಡಿದುಕೊಂಡು
ಕುಣಿಯುತ್ತಿರುವುದನ್ನು ಕಂಡು
ಹೌಹಾರಿದೆ !
ಅವರೆಲ್ಲ ಕವಿಯತ್ತಲೆ ದಾಳಿಮಾಡಿದಂತೆನಿಸುತ್ತದೆ.ಅಂದರೆ ಈ ದೇಶದಲ್ಲಿ ಸಮಾನತೆ ಬೋಧಿಸಿದ ಕವಿ,ಅಥವಾ ಧರ್ಮಗಳ ನಡುವೆ ಸಹಿಷ್ಣುತೆ ಇರಲಿ ಎನ್ನುವ ಕವಿಗಳೆಲ್ಲ ಈ ಅಸ್ತ್ರ ಹಿಲಾಲಿಗೆ ಬಲಯುಗಾತಿದ್ದಾರೆ
ಮರುಕ್ಷಣವೇ ಅವುಗಳೆಲ್ಲ ತಿರುಗಿ
ನನ್ನತ್ತಲೇ ಬರುವಂತೆ ಅನ್ನಿಸಿ
ಹೆದರಿ ಚೀರುತ್ತ
ಒಮ್ಮೆಲೇ ಎಚ್ಚರಗೊಂಡೆ ,.
ಹಾಸಿಗೆಯನ್ನೆಲ್ಲ
ಒದ್ದೆ ಮಾಡಿಕೊಂಡು
ಯಾರಿಗೂ ಹೇಳಲಾಗದೆ
ಚಡಪಡಿಸುತ್ತ ನ
ನನ್ನಷ್ಟಕ್ಕೆ ನಾನೇ
ಮುಜುಗರಗೊಂಡೆ !
ಇದನ್ನೆಲ್ಲ ಕನಸಲ್ಕಿ ಕಂಡ ಕವಿ ಕೊನೆಗೂ ಎಚ್ಚರಗೊಂಡಾಗ ಅದನ್ನು ನೆನೆದು ಹೆದರುತ್ತಿದ್ದಾನೆ ಅವನ ಹೆದರಿಕೆ ಅವನಲ್ಲಿ ಚಡಪಡಿಕೆ ಉಂಟುಮಾಡುತ್ತದೆ ಕೊನೆಗೂ ತನ್ನ ಸ್ಥಿತಿಯನ್ಜು ಯಾರ ಮುಂದೆಯೂ ಹೇಳದ ಕವಿ ತನ್ನಷ್ಟಕ್ಕೆ ತಾನು ಮೌನವಾಗುತ್ತಾನೆ ..ಮನುಷ್ಯತ್ವ ಹುಡುಕುವವರಿಗೆ ಕಡೆಗೆ ಸಿಗುವದು ಇಷ್ಟೇ ಎಂಬ ತತ್ವವನ್ಜು ಕವಿತೆ ಸಾರುತ್ತದೆ .
ತುಸು ದೀರ್ಘ,ತುಸು ಜಾಳಜಾಳು ಎನಿಸಿದರೂ ಇಂದಿನ ಪರಸ್ಥಿ ತಿಯನ್ನು ಕವಿತೆ ಸಮರ್ಪಕವಾಗಿ ಧ್ವನಿಸುತ್ತದೆ.
ಡಾ.ವೈ.ಎಂ.ಯಾಕೊಳ್ಳಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments