"ಹುಲಿಯಂತೆ ಬಾಳಿ ಬದುಕಿದ ದಿ :ಪ್ರತಿಭಾ ಪಾಟೀಲ" ಪ್ರಾಚಾರ್ಯ ಶ್ರೀ ಎಮ್ ವ್ಹಿ ಕೋಳೆಕರ ಅಭಿಮತ


ಸ್ಥಳೀಯ ಹಾರೂಗೇರಿ ಹಾ ವಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಹಾರೂಗೇರಿಯಲ್ಲಿ ದಿವಂಗತ ಕು. ಪ್ರತಿಭಾ ಪಾಟೀಲ (ಅಕ್ಕಾ ) ವಸಂತರಾವ ಪಾಟೀಲ ಅವರ ಇಪ್ಪತ್ತೊಂದನೆಯ ಪುಣ್ಯ ಸ್ಮರಣೆಯ ನಿಮಿತ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಪ್ರಾಚಾರ್ಯರ ಎಮ್ ವ್ಹಿ ಕೋಳೆಕರ ಪತಿಭಾ ಅಕ್ಕಾ ಅವರು ತಂದೆಗೆ ತಕ್ಕ ಮಗಳಾಗಿ ರಾಯಬಾಗ ಮತ್ತು ಗೋಕಾಕ್ ತಾಲೂಕಿನ ಬಡಜನರ ಪಾಲಿನ ಆಶಾ ಕಿರಣವಾಗಿ ಅವರ ಕಷ್ಟಗಳಿಗೆ ಸ್ಪಂದಿಸಿ ಅವರ ಬಾಳಿಗೆ ನಂದಾ ದೀಪಾವಗಿದ್ದರು.ಧೀಮಂತ ವ್ಯಕ್ತಿತ್ವದ ದಿಟ್ಟ ನಾಯಕಿಯಾಗಿ, ಶಿಕ್ಷಣ ಪ್ರೇಮಿಯಾಗಿ ಸಮಾಜ ಸೇವಕಿಯಾಗಿ ಗೋಕಾಕ್ ತಾಲೂಕಿನ ಕೌಜಲಗಿಯಲ್ಲಿ z p ಚುನಾವಣೆಗೆ ಹುಲಿ ಚಿತ್ರಕ್ಕೆ /ಗುರುತಿನ ಚಿನ್ಹೆ ಪಡೆದು, ಸ್ವತಾ ಜೀವಂತ ಹುಲಿ ತಂದು ಪ್ರಚಾರ ಮಾಡಿ ಹುಲಿಯಂತೆ ಬದುಕಿದ ಪ್ರತಿಭಾ ಅಕ್ಕಾರವರು ಇಂದಿನ ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಉಪನ್ಯಾಸಕಿಯರಾದ ಶ್ರೀಮತಿ ಟಿ ಎಸ್ ಹಿಟ್ಟಣಗಿಯವರು ಮಾತನಾಡುತ್ತ ಸ್ತ್ರೀ ಕುಲಕ್ಕೆ ಒಬ್ಬ ಆದರ್ಶ್ ಮತ್ತುಅನುಕರಣಿಯ ವ್ಯಕ್ತಿತ್ವವನ್ನು ಹೊಂದಿದ್ದವರಾಗಿದ್ದರೆಂದು ಅವರ ಸಾಧನೆ ಮತ್ತು ವ್ಯಕ್ತಿತ್ವವನ್ನು ಕೊಂಡಾಡಿದರು.

ಇದೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ "ಮಹಿಳಾ ಸಬಲೀಕರಣ"ಕುರಿತು ಏರ್ಪಡಿಸಿದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರ ಶಬ್ಬೀರ ಅತ್ತಾರ, ದ್ವಿತೀಯ ಸ್ಥಾನ ಕುಮಾರಿ ಭಾಗ್ಯಶ್ರೀ ಬೆಕ್ಕೇರಿ, ತೃತೀಯ ಸ್ಥಾನ ಕುಮಾರ ಬಸವರಾಜ ಖೋತ ಪಡೆದುಕೊಂಡರು,ಈ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಿದರು.

ಸ್ವಾಗತ ಮತ್ತು ಪ್ರಸ್ತಾವಿಕವಾಗಿ ಪ್ರೊ ಎಚ್ ಎಸ್ ಕುರಿಯವರು ನೆರವೇರಿಸಿದರು. ಪ್ರೊ ಎಸ್ ಕೆ ಗುರುನಾಥ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಿರೂಪಿಸಿ ವಂದಿಸಿದರು.

ಇನ್ನುಳಿದಂತೆ ಪ್ರೊ ಪಿ ಎಮ್ ಪಾಟೀಲ, ಡಾ. ಕೆ ಎಸ್ ಕಾಂಬಳೆ, ಪ್ರೊ ಎಮ. ಜೆ ರಾಠೋಡ, ಪ್ರೊ ಕೆ ಎಸ್ ಭಜಂತ್ರಿ, ಪ್ರೊ ಸಿ ಎಮ ಲುಡಬುಡೆ, ಶ್ರೀಮತಿ ವಿಜಯಲಕ್ಷ್ಮಿ, ಶ್ರೀಮತಿ ಬಸವೇಶ್ವರಿ ಕಾಂಬಳೆ, ಸಿಬ್ಬಂದಿ ವರ್ಗ, ವಿದ್ಯಾರ್ಥಿ /ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.


ವರದಿ :ಡಾ. ವಿಲಾಸ್ ಕಾಂಬಳೆ

ಹಾರೂಗೇರಿ

Image Description

Post a Comment

0 Comments