*ನಿಮ್ಮ ಮನೋಮಂದಿರದಲ್ಲಿ ಅಕ್ಷರಗಳ ನೀನಾದವೇ ಅನುರಣಿಸಬೇಕು:*
*ಶ್ರೀ ಕೆ.ಬಿ.ಸಾಯನ್ನವರ*
*ರಾಯಬಾಗ:* ರಾಯಬಾಗ ತಾಲ್ಲೂಕಿನ ಕಪ್ಪಲಗುದ್ದಿಯ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ಕನ್ಯಾ ವಸತಿ ಶಾಲೆಯ 6 ನೇ ವರ್ಗದ ವಿದ್ಯಾರ್ಥಿನಿಯರಿಗೆ ಇಂದು ಬೆಳಿಗ್ಗೆ ಮಕ್ಕಳ ಕಲಿಕೆಗೆ ಪೂರಕವಾಗುವ "ನೋಟಬುಕ್ ಗಳನ್ನು" ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ.ಬಿ.ಸಾಯನ್ನವರ ಅವರು ಮಾತನಾಡಿ "ಮನುಕುಲದ ನಂದಾದೀಪಗಳಾದ ನೀವು, ನಿಮ್ಮೆಲ್ಲರ ಮನೋಮಂದಿರದಲ್ಲಿ ಅಕ್ಷರಗಳ ನೀನಾದವೇ ಅನುರಣಿಸಬೇಕು. ನಿಮ್ಮ ಮನಸ್ಸು ಬಿಳಿ ಹಾಳೆ ಇದ್ದ ಹಾಗೆ, ಅದರಲ್ಲಿ ಸದ್ಗುಣ ಸಂಸ್ಕೃತಿಗಳೆಂಬ ಮೂಲಾಕ್ಷರಗಳೆಂಬ ಅಕ್ಷರಗಳನ್ನು ಮೂಡಿಸಿದಾಗ ಮಾತ್ರ ನೀವೆಲ್ಲರೂ ಭರವಸೆಯ ಬೆಳಕಾಗಿ ಹೊರಹೊಮ್ಮಲು ಸಾಧ್ಯ. ಈ ನಿಟ್ಟಿನಲ್ಲಿ ನೀವೆಲ್ಲರೂ ನಮ್ಮ ಶಾಲೆಯ ಪೂಜ್ಯನೀಯ ಗುರುಗಳ ಹಾಗೂ ನಿಮ್ಮ ಹೆತ್ತ ಪಾಲಕ, ಪೋಷಕರು ಇರಿಸಿದ ಮಹೋನ್ನತ ನಿರೀಕ್ಷೆಗೂ ಮೀರಿ ನೀವು ಸಾಧಿಸಿ ಈ ಶೈಕ್ಷಣಿಕ ಜೀವನದಲ್ಲಿ ವಿಜೃಂಭಿಸಬೇಕು ಎಂದು ನುಡಿದರು. ಈ ಸಂದರ್ಭದಲ್ಲಿ ಸಕಲ ಶಿಕ್ಷಕ ವೃಂದ ಹಾಗೂ ಭೋದಕೇತರ ಸಿಬ್ಬಂದಿ ವಿತರಣಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
*ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments