............ಕರುನಾಡು............


ಕನ್ನಡಮ್ಮನ ಹಿರಿಮೆಯ ಹೇಳಲೆಂತು 

ಕನ್ನಡಮ್ಮನ ನುಡಿಯ ನುಡಿಯಲೆಂತು

ಭವ್ಯ ನಾಡಿದು ನಮ್ಮ ನಾಡು 

ತಲೆ ಎತ್ತಿ ನಿಂತಿಹುದು ಕರುನಾಡು


ಕನ್ನಡ ನುಡಿ ಪುಂಗವರ 

ನೆಮ್ಮದಿಯ ನೆಲೆವೀಡು

ಜಗದ ಸಂಸ್ಕೃತಿಯ ತೊಟ್ಟಿಲು

ನಮ್ಮ ಕರುನಾಡು


ಪ್ರಕೃತಿಯ ವರಮಾನವೀ ನಾಡು

ಶ್ರೀಗಂಧದ ಬೀಡು

ಹಳೆಗನ್ನಡ ನಡುಗನ್ನಡ ಹೊಸಗನ್ನಡದಿ

ಇಂಪು ತುಂಬಿದ ನಾಡಿದು ಕರುನಾಡು


ಜಗಕೆ ಸಮತೆಯ ಸಾರಿದ 

ವಚನ ಸಾಹಿತ್ಯದ ನಾಡಿದು

ಜಗದ ವಾಸ್ತವವ ಹಾಡಿ ಹೊಗಳಿದ

ಹರಿದಾಸರ ಬೀಡಿದು


ಜ್ಞಾನಪೀಠವ ಮುಡಿಗೇರಿಸಿಕೊಂಡ

ಕನ್ನಡ ಕವಿಗಳ ತವರಿದು

ನೃತ್ಯ,ಕಲೆ, ಸಾಹಿತ್ಯದ ಮೆರಗು ತುಂಬಿದ ನಾಡಿದು ನಮ್ಮ ಕರುನಾಡು


ಕೋಟೆ ಕೊತ್ತಲ ಜೀವನದಿ

ಗುಡಿ ಗೋಪುರಗಳ ಶಿಲ್ಪ ವೈಭವದ ನಾಡಿದು

ಸಿರಿ ಮೆರೆದ ಸಾಮ್ರಾಜ್ಯಗಳ ಆಡೊಂಬಲವಿದು 

ಕಲೆಯ ತವರೂರು.


ರಚನೆ :- ಸುರೇಖಾ ಲಕ್ಷ್ಮಣ ಕುಳ್ಳೊಳ್ಳಿ

ವಿಳಾಸ:- ರಾಯಬಾಗ

          (ಹಿಡಕಲ್ ಗ್ರಾಮ)


Image Description

Post a Comment

0 Comments