🇾🇪🇾🇪🇾🇪🇾🇪🇾🇪🇾🇪🇾🇪🇾🇪🇾🇪🇾🇪🇾🇪🇾🇪

"ಭಾರತ ದೇಶದ ಸಂವಿಧಾನ ನಾನು."

"""""""''''''''"""""'''''''''''''"""""""""""""""""""


ನೀನೇನು ಓದುವೆ ನನ್ನನ್ನು ?

ವಿಷಮತೆ ತುಂಬಿದ ಗೀತೆಯನ್ನೆ ಬಿಟ್ಟಿದ್ದೇನೆ....

ಓದುವುದಿಲ್ಲಲ್ಲವೆ ನೀ ನನ್ನನ್ನು ?

ಸಮತೆಯ ಸಾರಥಿ ನಾನು..

"ಭಾರತ ದೇಶದ ಸಂವಿಧಾನ ನಾನು."


ಸುಡಲು ಆಗುವುದಿಲ್ಲ ನಿನಗೆ ನನ್ನನ್ನು,

ಚೌದಾರ ಕೆರೆಯ ನೀರು ನಾನು..

ಕುಡಿದು ನೋಡು ನೀ ನನ್ನನ್ನು,

ಶಿಕ್ಷಣವೆಂಬ ಹುಲಿಯ ಹಾಲು ನಾನು...

"ಭಾರತ ದೇಶದ ಸಂವಿಧಾನ ನಾನು."


ಆರಿಸಲು ಸಾಧ್ಯವಿಲ್ಲ ನಿನ್ನಿಂದ ನನಗೆ, ಉಷಾಕಾಲದ ದೀಪಸ್ತಂಭ ನಾನು.

ತೆರೆದ ಕಣ್ಣಿನಿಂದ ನೋಡು ನನ್ನನ್ನು,

ನಿರ್ಮಲವಾಗಿ ಹರಿಯುವ ಜ್ಞಾನದ ಜರಿ ನಾನು...

"ಭಾರತ ದೇಶದ ಸಂವಿಧಾನ ನಾನು."


ಅಧರ್ಮಗಳ ಅಂಜಿಕೆ ಹಾಕಬೇಡಿ ನನಗೆ,

ಧರ್ಮ ನಿರಪೇಕ್ಷಯ ಕವಚ ತೊಟ್ಟಿದ್ದೇನೆ ನಾನು,

ಹೇಗೆ ಬಂಧಿಯನ್ನಾಗಿ ಮಾಡುವೆ ನೀ ನನಗೆ ?

ಮಹಾ ಮಾನವತೆಯ ಸಾಗರ ನಾನು,

"ಭಾರತ ದೇಶದ ಸಂವಿಧಾನ ನಾನು ."


ಹಗುರ ಅಂತ ತಿಳಿಯಬೇಡ ನೀನು,

ಸಾಮ್ರಾಟ ಅಶೋಕನ ಶೌರ್ಯವೇ ನಾನು,

ಬಾಬಾಸಾಹೇಬರ ಅಭೂತಪೂರ್ವ ರಚನೆ ನಾನು,

"ಭಾರತ ದೇಶದ ಸಂವಿಧಾನ ನಾನು."


ಭಾರತ ದೇಶದ ಸಂವಿಧಾನ ನಾನು..

ಸಮತೆಯ ಸಾರುವ ಪ್ರಜಾಪ್ರಭುತ್ವವೇ ನಾನು....

"ಭಾರತ ದೇಶದ ಸಂವಿಧಾನ ನಾನು "......


ನಮೋ ಬುದ್ಧಾಯ...

ಜೈ ಭೀಮ್ ...

ಜೈ ಭಾರತ್... 

ಜೈ ಸಂವಿಧಾನ...

@ ....🌹



🌹🌹🌹🌹🌹

ಶ್ರೀ ಅರ್ಜುನ್ ನಿಡಗುಂದೆ.

ಸದಲಗಾ..

🇨🇮🇨🇮🇨🇮🇨🇮🇨🇮🇨🇮🇨🇮🇨🇮🇨🇮🇨🇮🇨🇮🇨🇮🇨🇮🇨🇮

Image Description

Post a Comment

0 Comments