➿➿➿➿➿➿➿➿➿


👁‍🗨ಪೂಜಿಸಬೇಡಿ ನನ್ನನ್ನು....!!!


ನನ್ನೆಲ್ಲಾ ಬಹುಜನ ಬಂಧುಗಳೇ,

ಪೂಜಿಸಬೇಡಿ ನೀವು ನನ್ನನ್ನು,

ಅಗರಬತ್ತಿ ಹಾಗೂ ಹೂವನ್ನು ಹಾಕಿ.

ತೊಲಗಿಸಬೇಕಾಗಿದೆ ಈಗ   ಅಂಧಕಾರವನು.


ಶಾಸನ ಮಾಡುವವರೆ ಒಗ್ಗಟ್ಟಾಗಿ,

ಇದನ್ನೇ ಸದಾ ನಿಮ್ಮ ಮೆದುಳಲ್ಲಿ ಇಟ್ಟುಕೊಳ್ಳಿ,

ನನ್ನನ್ನು ಹುಡುಕಬೇಕೆಂದರೆ 

ಹುಡುಕಿ ಕೇವಲ ಪುಸ್ತಕ ಎಂಬ ಮಸ್ತಕದಲಿ.


ಆ ಜನ್ಮಪರ್ಯಂತ ನಾನು ವಿದ್ಯಾರ್ಥಿಯಾಗಿದ್ದೇನೆ,

ಇದನ್ನೆ ನಿಮ್ಮ ಮನದಲ್ಲಿ ಇಟ್ಟುಕೊಳ್ಳಿ,

ಒಳ್ಳೆಯ ಕೆಲಸ ಮಾಡುತ್ತ ನೀವೂ,

ಹರಡಿ ಈ ದೇಶದ ತುಂಬೆಲ್ಲ ದಯೆಯನು. 


ಸ್ವಲ್ಪವು ಅವಕಾಶ ಇಲ್ಲವಾಗಿತ್ತು ನಿಮಗೆ,

ಮುಕ್ತಗೊಳಿಸಿದೆ ಎಲ್ಲ ದಾರಿಯನು,

ಕೇವಲ ನನ್ನ ಪೂಜೆಯನ್ನು ಮಾಡಿ

ಹುದುಗಬೇಡಿ ನನ್ನ ವಿಚಾರಗಳನ್ನು.


ನಾನು ಪ್ರಸನ್ನ ಆಗುವುದಿಲ್ಲ ಯಾರ ಮೇಲೆಯೂ,

ಎಷ್ಟೇ ನೀವು ಪೂಜೆ ಮಾಡಿದರು.

ಅದಕ್ಕಿಂತ ಒಳ್ಳೆಯ ಅಧ್ಯಯನಗೈದು ,

ಸಮ್ಮೇಕ ವಿಚಾರಗಳ ಪೀಟಕವ ಮುಂದಿನ ಪೀಳಿಗೆಗೆ ನೀಡಿರೈ.


ಪೂಜಿಸಿ ನನ್ನನ್ನು ನೀವು, 

ದೇವ ಧರ್ಮದಲ್ಲಿ ಬಂಧಿಯನ್ನಾಗಿ 

ಮಾಡಬೇಡಿ ಅಪ್ಪಿತಪ್ಪಿಯು. 

ನನ್ನನ್ನು ದೇವ ಅಂತ ತಿಳಿದು ಕುಂತರೆ, ನಿಮ್ಮ ಮುಂದಿನ ಪೀಳಿಗೆಯ ಎಲ್ಲ ಅವಕಾಶದ ಬಾಗಿಲುಗಳು ಮುಚ್ಚುವವು, ಇದನ್ನು ಒಮ್ಮೆಯಾದರೂ ತಿಳಿಯಿರಿ..

             💐 ಜೈ ಭೀಮ 💐

✍✍.......

ಶ್ರೀ ಅರ್ಜುನ್ ನಿಡಗುಂದೆ .

ಡಾ ಬಿ ಆರ್ ಅಂಬೇಡ್ಕರ್ ನಗರ, ಸದಲಗಾ.

ತಾಲೂಕ್ :- ಚಿಕ್ಕೋಡಿ 

ಜಿಲ್ಲಾ :- ಬೆಳಗಾವಿ. 

9743711213.

♾♾♾♾♾♾♾♾♾♾♾


Image Description

Post a Comment

0 Comments