ವರುಣನ ಆಗಮನ


ಮತ್ತೆ ವರುಣನ ಆಗಮನ ಬಂದೇಬಿಟ್ಟಿತ್ತು, ಆರ್ಭಟಿಸುತ್ತಾ, ಘರ್ಜಿಸುತ್ತಾ ತನು ಮನವನ್ನು ಉಲ್ಲಾಸಗೊಳಿಸುಲು ಧರೆಗೆ.

ಅಪ್ಪಳಿಸುತ್ತಾ,  ಭಯಂಕರವಾದ ಸ್ವರೂಪವನ್ನ ತೊರಿಸಲು


ಧರೆಗೆ ನೀ ಬರಲು ಮನುಕುಲವೇ ಸಜ್ಜಾಗಿದೆ ಕಾಯುವ, ಬೇಡುವ, ಪೂಜಿಸುವಲ್ಲಿ ನಿರಂತರವಾಗಿದೆ, ಬಂದೇ ಬಿಟ್ಟಿತು

 ಈ ವರುಣ? 

ರೈತರನ್ನ ಉಲ್ಲಾಸಗೊಳಿಸಲು  ಇಡಿ ಜೀವನಾಡಿಗೆ ನಿನೆ ಬಲಾಬಲ

ರೈತರು ನಿನಗಾಗಿ ಪ್ರಾರ್ಥನೆ ಮಾಡುವಲ್ಲಿ ತಲ್ಲಿನರಾಗಿದ್ದಾರೆ

ಮುನಿಸಬೇಡ ಈ  ಜೀವ ಸಂಕುಲಕ್ಕೆ.....


ಬಾ ಧರೆಗೆ ಆದರೆ ಪ್ರಳಯಾಂತಕನಾಗಬೇಡ

ಪ್ರಳಯ-ಗಿಳಯೆನ್ನದೇ ಹಿತಮಿತವಾಗಿ ಬಾ

ಜೀವರಾಶಿಗೆ ಸಂತೃಪ್ತಿ ಗೊಳಿಸುವಂತೆ

ಹಾನಿ ಮಾಡದೇ ನಿನ್ನ ಪೌರುಷಕ್ಕೆ ದಕ್ಕೆಯನುಂಟು ಮಾಡದೆ

ಧರೆಗೆ ಪ್ರಜ್ವಲಿಸಲು ನಿನ್ನ ಆಗಮನ....


ಡಾ ಪೂರ್ಣಿಮಾ

ಅತಿಥಿ ಉಪನ್ಯಾಸಕರು

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಪಿ,ಜಿ ಸೆಂಟರ್ ವಿಜಯಪುರ


Image Description

Post a Comment

0 Comments