ಮಳೆಗಾಲ

 ಮಳೆಗಾಲ.

ಮಳೆ ಬರುವ ಕಾಲಕ್ಕ.

ಮಳೆ ಬರುವ ಕಾಲಕ್ಕ

ಕರಿ ಮೋಡ ಕಟ್ಟಿತ್ತ,

ಸುಮ್ಮನಿದ್ದ ಗಿಡ ಮರ

ಗಾಳಿಗೆ ಮೈ ಒಡ್ಡಿ ಉಲಿದಿತ್ತು.


ಮೊದಲ ಮಳೆ ಹನಿಗೆ

ಸುಗಂಧ ಸೂಸಿ ಹರಿದಾಡಿತ್ತು,

ಮಲಗಿದ್ದ ಕಸ ಕಡ್ಡಿ

ಚಿಗುರೊಡೆದು ಹಸಿರು ಸೂಸಿತ್ತು.


ಜಡಿ ಮಳೆ ರಭಸಕ್ಕ

ಹರನಾಳಿಗೆ ನೀರು ನೆಲಕ್ಕೆ,

ಎದುದು ಬದುರಾಗಿ ಹರಿದಾಗ

ನಡೆದಾಡೊ ಜನಗಳ ತೋಯಿಸುತ್ತು.


ಬೀಳುವ ಮಳೆಗೆ ಹೆದರಿ

ಮಕ್ಕಳು ಮುದುಕರು ಮೂಲಿಗೆ,

ಮಳೆ ನಿಂತ ಕಾಲಕ್ಕ

ಜನಗಳ ಓಡಾಟ ಅತ್ತಿತ್ತ.


ಮಳೆ ಕ್ಷೀಣ ಕಾಲಕ್ಕ

ಕರಿಮೋಡ ಕರಗಿ ಬಿಳಿಯಾತ,

ಮರಗಳ ಹನಿಗಳು ಬೀಸುವ

ಗಾಳಿಗೆ ಮುತ್ತುಗಳಂತೆ ಬಿದ್ದಾವು.


ಮಳೆ ನಿಂತ ಕಾಲಕ್ಕ

ಕಾಮನ ಬಿಲ್ಲು ಬಾನೊಳಗ,

ಬೀಳುವ ಎಳೆ ಬಿಸಿಲು

ಮೈಸೋಕಿ ಅಹ್ಲಾದ ದೇಹಕ್ಕ.


ಶಿರೂರ ಶ್ರೀಶೈಲ..


Image Description

Post a Comment

0 Comments