ಪರೋಪಕಾರಿ.
ಮನುಷ್ಯ ಬದುಕಿದಷ್ಟು
ಭೂಮಿಗೆ ಭಾರ ಆಗಿರಬಾರದು,
ಬೆಳೆದು ನಿಂತ ಮರದಂತೆ
ನೆರಳಿನ ಸಹಾಯ ಮಾಡಬೇಕು.
ಸುಡುವ ಸೂರ್ಯ ನಡು
ಮದ್ಯಾಹ್ನ ನೆರಳಿನಾಸರೆ ಮರದಿಂದ,
ಆಳಕ್ಕಿಳಿದ ಬೇರು ಮಣ್ಣಿಗೆ
ಋಣಿಯಾಗಿ ಉದುರುವ ಎಲೆಗಳು.
ಹಾರಾಡೊ ಹಕ್ಕಿ ಗೂಡು
ಕಟ್ಟಿ ಆಸರೆ ಪಡೆದವು,
ನೀರು ಹಾಕಿ ಬೆಳೆಸಿದವನ
ದಣಿವು ನೀಗಿಸಲು ಬಾಗಿದವು.
ಹಣ್ಣು ಹಂಪಲು ಸಂಪತ್ತು
ಹೊಂದಿ ಧರೆಗೆ ಅರ್ಪಿಸಿದವು,
ಬೆಳಸಿದವನ ಭಾಗ್ಯಕ್ಕೆ ರುಚಿ
ಬಾಗಿದ ಮರದ ನಮಿಸುವಿಕೆ.
ಹೇಳಲಿಲ್ಲವೆ ಮರ ಎಂಬುದು
ಪ್ರಕೃತಿಯ ವರ ಸ್ವೀಕರಿಸಿದರೆ,
ಹಮ್ಮು ಬಿಮ್ಮು ತೋರದೆ
ಧರೆಗೆ ನಮಿಸಿದವು ಫಲದೊಂದಿಗೆ.
ಶಿರೂರ ಶ್ರೀಶೈಲ...
.jpg)
.gif)

.gif)


0 Comments