*ಡಾ. ವಾಣಿಶ್ರೀ ಕಾಸರಗೋಡು*
*ಗಡಿನಾಡ ಕನ್ನಡತಿ*
ನಾನು - ನೀನು
ಕಣ್ಣ ಮುಂದೆ ಬಂದು ಹಾದು ಹೋದ ಮಿಂಚ ಕಂಡೆ ನಾನು
ಹೊನ್ನ ಬೆಳಕ ತೆರದಿ ಇಹುದು ಅಲ್ಲಿ ಮಿಂದು ಬಂದೆ ನೀನು
ಹಾಲ ಮೈಯ್ಯ ಬಣ್ಣ ಹೊಳೆದು ಕ್ಷಣ ಬೆರಗುಗೊಂಡೆ ನಾನು
ಚೂಪು ನೋಟ ಬೀರಿ ನನ್ನ ಮನವ ನಿನ್ನೆಡೆಗೆ ಸೆಳೆದೆ ನೀನು
ನಯನ ಬೆರೆತು ಒಲವು ಮೂಡಿ ಹರುಷ ಗೊಂಡೆ ನಾನು
ಪ್ರೀತಿ ಚಿಗುರು ಮೂಡಲು ಮನದಿ ಪುಳಕ ಗೊಂಡೆ ನೀನು
ಜೋಡಿ ಪಯಣ ಮೊದಲು ಗೊಂಡು ರಸಿಕ ನಾದೆ ನಾನು
ಹುರುಪಿನಿಂದ ಜಗವ ಮರೆತು ಸೇರಿ ಜೊತೆ ಯಾದೆ ನೀನು
ಕಳೆವ ದಿನವು ಸೊಗಸು ತುಂಬಿ ಸರ್ವ ಸುಖ ಪಡೆದೆ ನಾನು
ಮನ್ಮಥ ರತಿ ಜೋಡಿ ನಾವೆಂದು ಹಿರಿ ಹಿಗ್ಗಿ ಕುಣಿದೆ ನೀನು
ನಿನ್ನ ಜೀವದ ಒಡಲ ಪ್ರೀತಿ ಪ್ರೇಮಕೆ ಭಾವುಕ ನಾದೆ ನಾನು
ಅರಿತು ಬೆರೆತು ಸುಂದರ ಬದುಕು ಸಾಗಿಸಿ ಮನ ಗೆದ್ದೆ ನೀನು

.gif)

.gif)


0 Comments