ನಾನೇನು ಮರೆತುಬಿಟ್ಟೆ ??
--------------------------------
ಮನೆಯಲ್ಲಿ ಟಿವಿ ಬಂತು. ನಾ ಓದುವುದನ್ನೇ ಮರೆತುಬಿಟ್ಟೆ. !!
ಮನೆಯಲ್ಲಿ ಗಾಡಿ ಬಂತು. ನಾ ನಡೆಯುವುದನ್ನೇ ಮರೆತುಬಿಟ್ಟೆ. !!
ಕೈಯಲ್ಲಿ ಮೊಬೈಲ್ ಬಂತು. ನಾ ಪತ್ರ ಬರೆಯುದನ್ನೇ ಮರೆತುಬಿಟ್ಟೆ. !!
ಕ್ಯಾಲ್ಕುಲೇಟರ್ ಬಳಸಹತ್ತಿದೆ.ಆಗ ನಾ
ಮಗ್ಗಿ ಅನ್ನೋದನ್ನೇ ಮರೆತುಬಿಟ್ಟೆ. !!
ಎ ಸಿಯ ಸಹವಾಸದಿಂದ, ಮರದ ಬುಡದಲ್ಲಿಯ ತಂಗಾಳಿಯನ್ನೇ ನಾ ಮರೆತುಬಿಟ್ಟೆ !!
ನಗರದಲ್ಲಿ ಇರಲಾರಂಭಿಸಿದ್ದರಿಂದ, ಮಣ್ಣಿನ ಸುವಾಸನೆಯನ್ನೇ ನಾ ಮರೆತುಬಿಟ್ಟೆ !!
ಬ್ಯಾಂಕಿನ ಖಾತೆ ನಿರ್ವಹಿಸುವ ಭರದಲ್ಲಿ,
ಹಣದ ಬೆಲೆಯನ್ನೇ ನಾ ಮರೆತುಬಿಟ್ಟೆ !!
ಭಿಬತ್ಸ ಚಿತ್ರಗಳಿಂದಾಗಿ, ಸೌಂದರ್ಯ ನೋಡುವುದನ್ನೇ ನಾ ಮರೆತುಬಿಟ್ಟೆ !!
ಕೃತ್ರಿಮ ಸೆಂಟಿನ ವಾಸನೆಯಿಂದ ,ಪುಷ್ಪಗಳ ಸುಗಂಧವನ್ನೇ ನಾ ಮರೆತುಬಿಟ್ಟೆ !!
ಫಾಸ್ಟ್ ಫುಡ್ ನ ಜಗದಲ್ಲಿ ಸಂತೃಪ್ತಿಯ ಡೇರಿಕೆಯನ್ನೇ ನಾ ಮರೆತುಬಿಟ್ಟೆ !!
ಸ್ವಾರ್ಥ ಸಂಬಂಧಗಳ ಉಳಿಸಲು ಹೋಗಿ ನಾ, ನೈಜ್ ಸಂಪ್ರೀತಿ ಮಾಡುವುದನ್ನೇ ಮರೆತುಬಿಟ್ಟೆ !!
ಕ್ಷಣ ಸುಖದ ಲೋಭಕ್ಕಾಗಿ ನಾ,
ಸತ್ಕರ್ಮದಲ್ಲಿಯ ಆನಂದವನ್ನೇ ಮರೆತುಬಿಟ್ಟೆ !!
ನನ್ನ ಹೊಟ್ಟೆ ತುಂಬಿದಾಗ ಬೇರೆಯವರ ವಿಚಾರ ಮಾಡುವುದನ್ನೇ ನಾ ಮರೆತುಬಿಟ್ಟೆ !!
ಸತತ ಧಾವಂತದಲ್ಲಿಯು ನಾ ಅರೆ ಗಳಿಗೆಯಾದರೂ ನಿಲ್ಲುವುದನ್ನೇ ಮರೆತೆಬಿಟ್ಟೆ,
ನಿಲ್ಲುವುದನ್ನೇ ನಾ ಮರೆತುಬಿಟ್ಟೆ !!
🌺✍️✍️✍️...@ ಅರ್ಜುನ್ ನಿಡಗುಂದೆ. ಸದಲಗಾ.
➖➖➖➖➖➖➖

.gif)

.gif)


0 Comments