ಹೆಮ್ಮೆಯ ಪತ್ರಕರ್ತರಾಗೋಣ

 ಹೆಮ್ಮೆಯ ಪತ್ರಕರ್ತರಾಗೋಣ

ಜನರ ಕಷ್ಟ ಅರಿಯೋಣ

ಸತ್ಯ ಬಿತ್ತರಿಸಿ ಜನರಿಗೆ ಧ್ವನಿ ಆಗೋಣ

ಜನರ ಬಾಳಿಗೆ ಬೆಳಕಾಗಿ

ಹೆಮ್ಮೆಯ ಪತ್ರಕರ್ತರೆನಿಸಿಕೊಳ್ಳೋಣ


ನ್ಯಾಯದ ಪರ ಹೋರಾಡೋಣ

ನ್ಯಾಯವೇ ನಮ್ಮ ಉಸಿರೆನ್ನೋಣ

ನ್ಯಾಯ ಕೊಡಿಸುವುದಕ್ಕಾಗಿ ಧ್ವನಿ ಎತ್ತಿ

ಹೆಮ್ಮೆಯ ಪತ್ರಕರ್ತರೆನಿಸಿಕೊಳ್ಳೋಣ


ಕಷ್ಟ ಪಡೋಣ  , ಪ್ರಜಾಪ್ರಭುತ್ವದ ಮೌಲ್ಯಗಳು

ನಮ್ಮ ಜೀವನದ ಭಾಗ ಮಾಡಿಕೊಳ್ಳೋಣ

ಪ್ರಜಾಪ್ರಭುತ್ವ ಗಟ್ಟಿಗೊಳಿಸಿ

ಹೆಮ್ಮೆಯ ಪತ್ರಕರ್ತರೆನಿಸಿಕೊಳ್ಳೋಣ


ನೀತಿ ನಿಯಮ ಪಾಲಿಸೋಣ

ಕಾನೂನಿಗೆ ತಲೆಬಾಗೋಣ

ಸಮಾಜದ ನೈತಿಕತೆ ಹೆಚ್ಚಿಸೋಣ

ಎಲ್ಲರ ಹಿತ ಕಾಯಲು ಶ್ರಮ ಪಡೋಣ ಶ್ರಮಪಟ್ಟು  ಹೆಮ್ಮೆಯ

ಪತ್ರ ಕರ್ತನೆನಿಸಿಕೊಳ್ಳೋಣ


ಪೆನ್ನು ಹಿಡಿಯೋಣ ಮನುಜ ಕುಲ

ಒಂದು ಎನ್ನುವದು ತಿಳಿಸೋಣ

ಮಾನವರೆಲ್ಲ ಸಮಾನರೆಂದು ಬಿತ್ತರಿಸೋಣ

ಮನುಜ ಕುಲ ಬೆಳವಣಿಗೆಗೆ ಪಾತ್ರರಾಗಿ

ಹೆಮ್ಮೆಯ ಪತ್ರಕರ್ತರೆನಿಸಿಕೊಳ್ಳೋಣ


ನೈಜತೆ ಬಿತ್ತೋಣ

ನೈಜತೆ ಸಮಾಜದ ಭಾಗ ಮಾಡಲು ಬರೆಯೋಣ

ಸಮಾಜವನ್ನು ಮೂಢನಂಬಿಕೆಯಿಂದ

ಹೊರತರಲು ಪ್ರಯತ್ನಿಸಿ

ಹೆಮ್ಮೆಯ ಪತ್ರಕರ್ತರೆನಿಸಿಕೊಳ್ಳೋಣ


ಬರವಣಿಗೆಯ ಮುಖಾಂತರ ಘರ್ಜಿಸೋಣ

ಧರ್ಮದ ಹೆಸರಲ್ಲಿ ಅಧರ್ಮ ಮಾಡುವವರ

ವಿರುದ್ಧ ಧ್ವನಿ ಎತ್ತೋಣ

ಮಾನವ ಧರ್ಮ ಬೆಳೆಯಲು  ಸಹಕಾರಿಯಾಗಿ

ಹೆಮ್ಮೆಯ ಪತ್ರಕರ್ತರೆನಿಸಿಕೊಳ್ಳೋಣ


ಸತ್ಯ ಸತ್ಯ ಎನ್ನೋಣ

ಸುಳ್ಳು ಸುಳ್ಳು ಎನ್ನೋಣ

ಕಳ್ಳರನ್ನು ಕಳ್ಳರೆನೊನ

ಮಹಾಪುರುಷರನ್ನು ಮಹಾಪುರುಷರೆಂದು

ಹೆಮ್ಮೆಯ ಪತ್ರಕರ್ತರೆನಿಸಿಕೊಳ್ಳೋಣ


ಬದುಕಿನ ಅರ್ಥ ತಿಳಿಯೋಣ

ಸರಿ ತಪ್ಪು ಮನವರಿಕೆ ಮಾಡಿಸೋಣ

ಆರೋಗ್ಯ ಸಮಾಜ ನಿರ್ಮಾಣ ಮಾಡೋಣ

ಸಮಾಜದ ಆಸ್ತಿಯಾಗಿ

ಹೆಮ್ಮೆಯ ಪತ್ರಕರ್ತರೆನಿಸಿಕೊಳ್ಳೋಣ


ದೇಶ ಎಂದರೆ ಮಾನುಷ ರೆನೊನ 

ಎಲ್ಲ ಮನುಜ ಕುಲಕೆ  ಬದುಕುವ ಹಕ್ಕು ಇದೆಯಂದು ತಿಳಿಸೋಣ , 

ರಾಷ್ಟ್ರೀಯತೆ ಎಂದರೆ  ದೇಶದ ಜನರನ್ನು 

ಗೌರವಿಸುದೆಂದ ಮನವರಿಕೆ ಮಾಡಿಸೋಣ

ದೇಸದ ಆಸ್ತಿಯೆನ್ನು ಕಾಪಾಡುವದು 

ರಾಷ್ಟ್ರೀಯತೆ ಎಂದು  ತಿಳಿಹೇಳಿ 

ಹೆಮ್ಮೆಯ ಪತ್ರಕರ್ತರೆನಿಸಿಕೊಳ್ಳೋಣ

_________________


ರಚನೆ 

ಡಾ.ಎಸ್.ಬಿ. ಆಕಾಶ್, ಪ್ರಾಧ್ಯಾಪಕರು , ವಾಣಿಜ್ಯ ವಿಭಾಗ, 

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ


Image Description

Post a Comment

0 Comments