ಅಮೃತದ ಮಡಿಕೆ

 🖋✒️🖋✒️🖋✒️🖋✒️🖋✒️

🔷  ಅಮೃತದ ಮಡಿಕೆ 🔷

〰〰〰〰〰〰〰〰〰


ನಿನ್ನ ವಿಚಾರ

ವಿಚಾರ ಹಾಗೂ 

ಆಚಾರಾ,

ಆಗಿದೆ ಅಮೃತ ಹೇ ಬುದ್ಧ,


ಕುಡಿಯುವುದು ಎಷ್ಟು ಕುಡಿಯುವವನು,

ನಶೆ ಜೀವನದ್ದು,

ನಿನ್ನ ಪ್ರತಿಯೊಂದು 

ಶಬ್ದ ಶಬ್ದಗಳು ಕೂಡ

ದಮ್ಮಪದವಾಗಿದೆ ಹೇ ಬುದ್ಧ.


ನೀನೊಬ್ಬನೇ ಈ ಭೂವಿಯಲ್ಲಿ,

ವಿಶಾಲವಾದ ಮಹಾಸಾಗರ,

ಮತ್ತೆ 

ನೀನು ಅನಂತ ಆಕಾಶ

ನೀನೇ ಆಗಿದ್ದೀ ಹೇ ಸಂಬುದ್ಧ


ಸಮೃದ್ಧ ಜೀವನದ 

ಕನ್ನಡಿ ನೀನು,

ಮಾನವೀಯ ಮೌಲ್ಯಗಳ ಆಗರ, 

ಇದುವೇ ಸರ್ವೋಚ್ಚ

ಧಮ್ಮ, ನಿನ್ನ ಪ್ರತಿಶಬ್ದ ಶಬ್ದಗಳಲ್ಲಿಯೂ ಸಂಪ್ರೀತಿ  

ಅಡಗಿದೆ ಹೇ ಪ್ರಭುದ್ಧ .


ಬುದ್ಧನೆ ನಿನ್ನನ್ನು 

ಸ್ಮರಿಸುವುದು ಎಷ್ಟು?

ಅಗಣಿತ ನಿನ್ನ ವಿಚಾರ,

ಹಿಮಾಲಯಕ್ಕೆ ವ್ಯಾಪಿಸುವ 

ಆ ನಿನ್ನ ಆಚಾರ ವಿಚಾರ

 ಹೇ ಸಂಬುದ್ಧ .


ಕ್ಷಣ ಕ್ಷಣವು ನೆನಪು ಇಟ್ಟುಕೊಳ್ಳುತ್ತಾ, ನಿನ್ನನ್ನೇ ಅನುಕರಿಸಬೇಕು,

ಶಪಥ ನೀಡಿದರು ಬಾಬಾರು ನಮಗೆ

ಹೇ ಸಂಬುದ್ದ.


ಶಾಂತಿ ಸಹಿಷ್ಣುತೆ ಮಾಡುತಾ,

ಸಮತೆ ,ಸ್ವಾತಂತ್ರ್ಯ , ಬಂಧುತ್ವ

ನ್ಯಾಯದ ಧಮ್ಮ ಜಗಕೆ ನೀ ನೀಡಿದೆ.

ಹೇ ಬುದ್ಧ ಸಂಬುದ್ಧ.


ಭೀಮರಾಯರು ಸ್ವೀಕರಿಸಿಹರು 

ನಿನ್ನಯ ಧಮ್ಮ ನಮಗಾಗಿ,

ನಮ್ಮ ಆಯುಷ್ಯವನ್ನೇ

ಸುಂದರಗೊಳಿಸಿಹರು

ಹೇ ಬುದ್ಧ ಸಂಪ್ರಭುದ್ಧ.



🌺ನಮೋ ತಸ್ಸ ಭಗವತೋ ಅರ್ಹತೋ ಸಮ್ಮಾಸಂ ಬುದ್ಧಸ್ಸ. 🌺


🌹ಜೈ ಭೀಮ್ 🌹


🌸ನಮೋ ಬುದ್ಧಾಯ 🌸


🌼🌼ಜೈ ಸಂವಿಧಾನ.🌼🌼

ರಚನೆ :-

ಶ್ರೀ ಅರ್ಜುನ ನಿಡಗುಂದೆ.

ಕನ್ನಡ ಉಪನ್ಯಾಸಕರು,

ಸದಲಗಾ, 

ತಾಲೂಕ ಚಿಕ್ಕೋಡಿ.

ಜಿಲ್ಲಾ ಬೆಳಗಾವಿ.

ಸಂಚಾರವಾಣಿ :- 9743711213

➖➖➖➖➖➖➖➖➖➖➖➖


Image Description

Post a Comment

0 Comments