ಒಡಪುಗಳು


 ಒಡಪುಗಳು.

೧ ಏನ ಅಂತ ಕರಿತಾರ

ಖಾಲಿ ಇದ್ದಾಗ ನನ್ನ

ತಲ್ಯಾನ ಹೇನ ತಗಿತಾರ...


೨ ನಮ್ಮವರು ಹಾಕಿದರ ಕನ್ನಡಕ

ಚೆಂದ ಕಾಣ್ತಾರ ನೋಡಾಕ

ಕನ್ನಡಕ ತಕದರ ಕಣ್ಣಿದ್ದೂ

ಇಲ್ಲದ ಕುರಡರು ನನ್ನ ಸವರಕೋತ

ಬಗಲಾಗ ಸೇರತಾರ..


೩ ಸೇದು ಭಾವಿ ನೀರು

ಸಡು ಇಲ್ಲದ ತರತಾರ

ನಾನು ಬಾಯಾರುವ ಮದಲ 

ನೀರ ಸುರಿತಾರ....


೪ ಪೋಟೋದಾಗ ಇರೂದು ದೇವರು

ನನ್ನ ಮುಂದ ಇರಾವರು ಯಜಮಾನರು

ಕರದರ ಸಾಕು ಬಗಲಾಗ ಬರತಾರ.


೫ ಬ್ಯಾಸಗಿ ಬಿಸಲಿಗೆ

ಹೆಂಡತಿ ಸಿಟ್ಟಿಗೆ

ಬಾಯಿ ಒಣಗತ್ತ

ಅವಳು ನಕ್ಕರೆ

ಒಣಗಿದ ಬಾಯಾಗ

ನೀರ ಬರುತ್ತೆ

ಅಕಿನ ಹೆಸರ ಹೇಳಿದರ

ಖುಷಿನೂ ಆಗತ್ತ....


೬ ವಡಗಾಂವ ಬೆಳಗಾಂವ

ನನ್ನ ಹೆಂಡತಿ ಊರು ಖನನಗಾಂವ

ನನ್ನ ನೋಡಿದರ ಮ್ಯಾಂವ 

ಅಂತಾಳ ಮೀನಾಕ್ಷಿ....


೭ ನಮ್ಮಾಕಿ ಬೆಳಿಗ್ಗೆ ದೇವರ ಎದುರು ಮಂತ್ರ ಹೇಳತಾಳ,

ಮದ್ಯಾಹ್ನ ತನ್ನ ಕಥಿ ಹೇಳತಾಳ,

ರಾತ್ರಿ ಆದರ ನನ್ಮುಂದ ಒದರತಾಳ....


೮. ರೋಡಿನ್ಯಾಗ ಬರೂದು ಗಾಡಿ

ಮುಖದ ಮ್ಯಾಗ ಬರೂದು ದಾಡಿ

ನಮ್ಮಾಕಿ ನೀನಗ ಏನಾಗೇತಿ ಅಂತಾಳ ದಾಡಿ....


೯. ಜವಾರಿ ಜ್ವಾಳಾ

ನೋಡಾಕ ಮುತ್ತಿನ ಕಳಾ

ಸಮೀಪ ಹೋದರ ಹತ್ತತ್ತ ಜಳಾ

ಅಕಿ ಹೆಸರಿಲ್ಲ ಹೇಳಾಕಿಲ್ಲ ಸರಳ....


೧೦. ಹಗೆದಾಗ ಹಾಕತಾರ ಜ್ವಾಳಾ

ಹೆಂಗಸರ ಕೊಳ್ಳಾಗ ಹಾಕತಾರ ಬೋರಮಾಳ

ನನ್ನ ಹೆಂಡತಿ ಹೆಸರು ಪರಿಮಳ.


ಶಿರೂರ ಶ್ರೀಶೈಲ...

Image Description

Post a Comment

0 Comments