ಗಗನ ಕುಸುಮ (ಕಾದಂಬರಿ) ಸಂಚಿಕೆ-೬೦


ಹಿಂದಿನ ಸಂಚಿಕೆಯಲ್ಲಿ


ಸಂಜಯನ ತಂದೆಗೆ ಯಾರೋ ಹೊಡೆದಿದ್ದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದು ಇನ್ಸ್ ಪೆಕ್ಟರ್ ರವರು ಹೇಳಿಕೆ ಪಡೆಯಲು ಬಂದಾಗ ನಿದ್ರಿಸಿತ್ತಿರುತ್ತಾರೆ


ಕಥೆಯನ್ನು ಮುಂದುವರೆಸುತ್ತಾ


ರಘುರಾಂ ರವರ ಹೇಳಿಕೆ ಪಡೆಯಲು ಬಂದಿದ್ದ ಇನ್ಸ್ ಪೆಕ್ಟರ್ ರವರು ಸ್ವಲ್ಪ ಹೊತ್ತು ಕಾದಿದ್ದು ನಂತರ ವೈದ್ಯರ ಬಳಿಗೆ ಹೋಗಿ ಮೂರು ಜನರ ಹೇಳಿಕೆ ಪಡೆಯಬೇಕು ಯಾವಾಗ ಎಚ್ಚರವಾಗಬಹುದು?

ಸರ್ ಅವರಿಗೆ ಪೈನ್ ಕಿಲ್ಲರ್ ಮಾತ್ರೆ ನೀಡಿದ್ದೇವೆ ಯಾವಾಗ ಎಚ್ಚರವಾಗುತ್ತದೋ ತಿಳಿಯುವುದಿಲ್ಲ ನೀವು ಬೆಳಿಗ್ಗೆ ಬಂದು ಹೇಳಿಕೆ ಪಡೆಯಬಹುದು ಎನ್ನಲು

ಓ ಕೆ ಸಾರ್ ಎಂದು ಹೇಳಿ ಠಾಣೆಗೆ ವಾಪಸ್ಸಾಗಿ 

ಮಾರನೇ ದಿನ ಬೆಳಿಗ್ಗೆ ಎಂಟು ಗಂಟೆಗೆ ಪುನಃ ರಘುರಾಮ್ ಇರುವ ವಾರ್ಡಿಗೆ ಬಂದು ನಿಂತಾಗ

ರಘುರಾಂ ಇನ್ಸ್ ಪೆಕ್ಟರ್ ರವರನ್ನು ನೋಡಿ ನಮಸ್ಕಾರ ಹೇಳಿ ಏಳಲು ಹೋದಾಗ

ನೋ ನೋ ಏಳಬೇಡಿರಿ ಮಲಗಿಕೊಂಡೇ ನನಗೆ ನಿಮ್ಮ ಹೇಳಿಕೆ ನೀಡಿರಿ ಎನ್ನುತ್ತಾ ನಿಮಗೆ ಹೇಗೆ ಪೆಟ್ಟು ಬಿತ್ತು ? ಯಾರಾದರೂ ಹೊಡೆದ್ರಾ? 

ನಾನು ನಿಧಾನವಾಗಿ ಮಾತನಾಡುತ್ತೇನೆ ಬೇಸರ ಬೀಳಬೇಡಿರಿ ಸರ್

ಇಲ್ಲಾ ಹೇಳಿ ನಮಗೆ ಕಾರಣ ಬೇಕು 

ಯಾರೋ ನಾಲ್ಕು ಜನ ಬಂದು ನನಗೆ ನನ್ನ ಜೊತೆಯಲ್ಲಿದ್ದವರಿಗೆ ಹಿಗ್ಗಾ ಮುಗ್ಗಾ ಹೊಡೆದು ರಸ್ತೆಯ ಪಕ್ಕಕ್ಕೆ ತಂದು ಹಾಕಿದರು ಸಾರ್ 

ಏತಕ್ಕೆ ನಿಮಗೆ ಹೊಡೆದ್ರು? ನಿಮ್ಮ ಮೇಲೆ ಅವರಿಗೇನು ದ್ವೇಷ? ನಿಮಗೆ ಯಾರಾದರೂ ಮೇಲೆ ಅನುಮಾನವಿದೆಯಾ?

ಸಾರ್ ಇದು ದೊಡ್ಡ ಕಥೆ ಸಾರ್ ನಿಮಗೆ ಅದನ್ನು ಕೇಳುವಷ್ಚು ತಾಳ್ಮೆ ಇರಬಹುದು ಆದರೆ ಸಮಯವಿದೆಯೋ ಇಲ್ಲವೋ ಗೊತ್ತಿಲ್ಲಾ ಸರ್

ಏನು ಹೇಳಿ ಪರವಾಗಿಲ್ಲಾ ನಿಮಗೆ ಹೊಡೆದವರು ಸಿಕ್ಕಿದರೆ  ಸಾಕು 

ಇದು ರಮೇಶದೇಸಾಯಿದ್ದೇ ಕೆಲಸ ಸಾರ್

ಅವರು ಯಾರು ಅವರಿಗೂ ನಿಮಗೂ ಹೇಗೆ ಪರಿಚಯ? ಅವರೇಕೆ ನಿಮಗೆ ಹೊಡೆಸುತ್ತಾರೆ?

ನಾನು ಅವನು ಮೊದಲಿನಿಂದಲೂ ಪರಿಚಯ ಸಾರ್ ಅವನು ದೊಡ್ಡ ಬಿಲ್ಡರ್ ನನಗೆ ಕಟ್ಟಡ ಕಟ್ಟಲು ಪ್ರಾಜೆಕ್ಟ್ ಕೊಡುತ್ತಿದ್ದ ನಾನು ಪ್ರಾಜೆಕ್ಟ್ ಕೆಲಸ ಮಾಡಿಕೊಡುತ್ತಿದ್ದೆ ಹತ್ತು ವರ್ಷಗಳ ಹಿಂದೆ ಗಗನ ಮತ್ತು ಆಕಾಶ್ ಎಂಟರ್ ಪ್ರೈಸಸ್ ಎಂಬ ಹೆಸರಿನಲ್ಲಿ  ಬಿಲ್ಡಿಂಗ್ ವರ್ಕ್ ಮಾಡುತ್ತಿದ್ದ ನಾನು ಎರಡರಲ್ಲೂ ಕಟ್ಟಡದ ಪ್ರಾಜೆಕ್ಟ್ ವರ್ಕ್ ಮಾಡಿಕೊಡುತ್ತಿದ್ದೆ ಅವನ ಮಗ ವಿದೇಶಕ್ಕೆ ಹೋಗಿದ್ದರಿಂದ ಅವನ ಹೆಸರಿನಲ್ಲಿದ್ದ ಆಕಾಶ್ ಕಂಪೆನಿಯನ್ನು ಗಗನ ಕಂಪೆನಿಗೆ ವಿಲೀನ ಮಾಡ್ದ ಆಕಾಶ್ ಕಂಪೆನಿಯಿಂದ ನನಗೆ ಬರಬೇಕಾದ ಹಣವನ್ನು ನೀಡಲು ಕೇಳಿದೆ ಅದಕ್ಕೆ ಒಪ್ಪಿ ಗಗನ ಕಂಪೆನಿಯಲ್ಲಿ ಪ್ರಾಜೆಕ್ಟ್  ಕೆಲಸ ಮುಂದುವರೆಸಲು ಹೇಳಿದ್ದ ನಾನು ಕೆಲಸ ಮುಂದುವರೆಸಿದ್ದೆ ನನಗೆ ಸುಮಾರು ಐದು ಕೋಟಿ  ರೂಪಾಯಿ ಅವನಿಂದ ಬರಬೇಕಾಗಿತ್ತು. ಹಣ ಕೊಡಲು ಕೇಳಿದಾಗ ಕೊಡುತ್ತೇನೆಂದು ಸಬೂಬು ಹೇಳುತ್ತಿದ್ದ ಆ ವೇಳೆಗೆ ನನ್ನ ಮಗನಿಗೆ ಅವನ ಮಗಳು ಹೇಗೋ ಪರಿಚಯವಾಗಿ ಇಬ್ಬರೂ ಪ್ರೀತಿಸಲು ಶುರು ಮಾಡಿದರು ಇದು ಅವನ ಕೆಂಗಣ್ಣಿಗೆ ಗುರಿಯಾಯ್ತು ನಾನು ಒಂದು ದಿನ ಇಬ್ಬರಿಗೂ ವ್ಯಾವಹಾರಿಕ ಸಂಬಂಧ ಇದೆ ನನ್ನ ಮಗ ನಿನ್ನ ಮಗಳು ಇಬ್ಬರೂ ಒಬ್ಬರನ್ನೆೊಬ್ಬರು  ಪ್ರೀತಿಸುತ್ತಿದ್ದಾರೆ ನಾವೇಕೆ ತಾಂಬೂಲ ಬದಲಿಸಿಕೊಂಡು ಬೀಗರಾಗಬಾರದು ಎಂದು ಹೇಳಿದೆ

ನೋ ನೋ ಇದೆಲ್ಲವೂ ಆಗುವುದಿಲ್ಲ ಹಣ ಕಾಸಿನ ವ್ಯವಹಾರವೇ ಬೇರೆ ಮದುವೆ ಸಂಬಂಧವೇ ಬೇರೆ ನಿನ್ನ ಅಂತಸ್ತೇನು ನನ್ನ ಅಂತಸ್ತೇನು ?ನಾನು ಕೊಡುವ ಪ್ರಾಜೆಕ್ಟ್ ವರ್ಕ್ ಮಾಡುತ್ತಿರುವ ನಿನಗೆ ನನ್ನ ಸಂಬಂಧ ಬೆಳೆಸುವ ಯೋಗ್ಯತೆ ಇದೆಯಾ ಹೋಗು ಹೋಗು ನನ್ನ ಮಗಳನ್ನು ನಿನ್ನ ಮಗನಿಗೆ  ಕೊಟ್ಟು ಮದುವೆ ಮಾಡಿಕೊಡಲು ಇಷ್ಟವಿಲ್ಲ ಎಂದ

ನಾನು ಒಂದೆರಡು ಸಲ ನನ್ನ ಮಗನ ಬಲವಂತಕ್ಕೆ ಒತ್ತಾಯ ಮಾಡಿದೆ ಅದಕ್ಕೆ ಕೋಪಗೊಂಡಿದ್ದ

ಒಂದು ದಿನ ನನ್ನ ಮಗನ ಕಾರಿಗೆ ಡಿಕ್ಕಿ ಹೊಡೆಸಿ ಕೊಲ್ಲಲು ಪ್ರಯತ್ನಿಸಿದ್ದ ಆ ಕಾರಿನಲ್ಲಿ ಅವನ ಮಗಳು ಇದ್ದಳು ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿದ್ದಾಗ

ಬೇರೆ ಒಳ್ಳೆಯ ಆಸ್ಪತ್ರೆಗೆ ಸೇರಿಸುತ್ತೇನೆಂದು ಮಗಳನ್ನು ಡಿಸ್ ಚಾರ್ಜ್ ಮಾಡಿಸಿಕೊಂಡು ಹೋದ

ಕೆಲವು ದಿನಗಳ ನಂತರ ನನ್ನ ಮಗ ಹುಷಾರಾದ ನಂತರ ಈಗಲಾದರೂ ನಿನ್ನ ಮಗಳನ್ನು ನನ್ನ ಮಗನಿಗೆ ಕೊಟ್ಟು ವಿವಾಹ ಮಾಡು ಎಂದಿದ್ದಕ್ಕೆ 

 ನನ್ನ ಮಗಳು ಆಕ್ಸಿಡೆಂಟಿಂದ ಸತ್ತು ಹೋದಳು ನಿನ್ನ ಸಹವಾಸವೇ ಬೇಡಾ ನಿನಗೆ ಬರಬೇಕಾದ ಹಣವನ್ನು ಕೊಟ್ಟು ಬಿಡುತ್ತೇನೆ ಇನ್ನು ನನ್ನ ಕಂಪೆನಿಗೆ ಬರಲೇ ಬೇಡವೆಂದು ಐದು ಕೋಟಿ ರೂಪಾಯಿ ಚೆಕ್ ನನ್ನ ಹೆಸರಿಗೆ ನೀಡಿದ ನಾನು ಆ ಚೆಕ್ಕನ್ನು ಬ್ಯಾಂಕಿಗೆ ಕೊಟ್ಟು ನನ್ನ ಅಕೌಂಟ್ ಗೆ ಹಣ ಟ್ರಾನ್ಸ್ ಫರ್ ಮಾಡಲು ಬ್ಯಾಂಕಿಗೆ ಕೊಟ್ಟೆ ಇನ್ನು ಐದು ನಿಮಿಷ ಇದ್ದಿದ್ದರೆ ನನ್ನ ಹೆಸರಿಗೆ ಹಣ

ಟ್ರಾನ್ಸ್ ಫರ್ ಆಗುತ್ತಿತ್ತು . ಚೆಕ್ ನ ಮೊತ್ತ ಜಾಸ್ತಿ ಇದ್ದುದ್ದರಿಂದ ಬ್ಯಾಂಕ್ ಮ್ಯಾನೇಜರ್ ಚೆಕ್ ನೀಡಿದವರಿಗೆ ಫೋನ್ ಮಾಡಿ ಕನ್ಫರ್ಮ್ ಮಾಡಿಕೊಳ್ಳುತ್ತೇನೆಂದು ರಮೇಶ ದೇಸಾಯಿಗೆ ಫೋನ್ ಮಾಡಿದಾಗ

ರಮೇಶ ದೇಸಾಯಿ ನನಗೆ ಫೋನ್ ಕೊಡಲು ಹೇಳಿದಾಗ

ನಾನು ಮ್ಯಾನೇಜರ್ ನಿಂದ ಫೋನ್ ಪಡೆದು ಏನು ಎಂದೆ

ರಘುರಾಂ ನನಗೆ ಅರ್ಜಂಟಾಗಿ ಒಂದು ದೊಡ್ಡ ಮೊತ್ತದ ಆಫರ್ ಬಂದಿದೆ ದಯವಿಟ್ಟು ಹಣ ಪಡೆಯಬೇಡ ಅದಕ್ಕೆ ಬದಲಾಗಿ ನಾನು ನಿನಗೆ ಇಪ್ಪತ್ತು ಎಕರೆ ನನ್ನ ಫಾರಂನಲ್ಲಿರುವ ಜಮೀನು ಕೊಡುತ್ತೇನೆ ಎಂದ ಆಗ ನಾನು ಜಮೀನಿದ್ದರೆ ಹಣವಿದ್ದಂತೆ ಎಂದು ಒಪ್ಪಿ ಅವನಿಗೆ ಚೆಕ್ ವಾಪಸ್ ಕೊಡಬೇಕೆಂದು ಬ್ಯಾಂಕಿಂದ ಚೆಕ್ ವಾಪಸ್ ಪಡೆದೆ ಚೆಕ್ ನಲ್ಲಿ ಬ್ಯಾಂಕ್ ನವರು ಟ್ರಾನ್ಸ್ ಫರ್ ಅಮೌಂಟ್ ಎಂದೆಲ್ಲಾ ಸೀಲು ಹಾಕಿದ್ದರೂ ನನ್ನ ಬಲವಂತಕ್ಕೆ ವಾಪಸ್ ಕೊಟ್ಟರು . ನನ್ನ ಹೆಸರಿಗೆ ಜಮೀನು ರಿಜಿಸ್ಟರ್ ಮಾಡಿಕೊಟ್ಟರೆ ನಾನು ಚೆಕ್ ವಾಪಸ್ ಕೊಡುತ್ತೇನೆಂದು ಹೇಳಿದೆ ಅದಕ್ಕೆ ಒಪ್ಪಿಕೊಂಡು ನನಗೆ ಇಪ್ಪತ್ತು ಎಕರೆ ಜಮೀನು ರಿಜಿಸ್ಟರ್ ಮಾಡಿಕೊಟ್ಟ. ನನಗೆ ಸಂತೋಷವಾಗಿ ಚೆಕ್ ಅವನಿಗೆ ವಾಪಸ್ ಕೊಟ್ಟೆ. ನಂತರವೇ ನನಗೂ ಅವನಿಗೂ ನಿಷ್ಠೂರ ಶುರುವಾಯ್ತು..

ಏತಕ್ಕೆ ಶುರುವಾಯ್ತು?

ನನ್ನನ್ನು ಜಮೀನಿಗೆ ಬಿಡುತ್ತಿರಲಿಲ್ಲ. ನಾನು ಪೋಲೀಸ್ ಪ್ರೊಟೆಕ್ಷನ್ ತೆಗೆದುಕೊಂಡು ಹೋದರೂ ಅವನ ಹಣದ  ಮುಂದೆ ಏನೂ ಪ್ರಯೋಜನವಾಗಲಿಲ್ಲ. ಕಡೆಗೆ ನನ್ನನ್ನು ಜಮೀನಿಗೆ ಸೇರಿಸುತ್ತಲೇ ಇರಲಿಲ್ಲ. ನನಗೆ ಜಮೀನು ಎಲ್ಲಿದೆ ಎಂದು ತೋರಿಸಿರಲಿಲ್ಲ.  ನನ್ನ ಸ್ನೇಹಿತ ಅವನ ಇನ್ನೂರ ಎಕರೆ ಫಾರಂ ನಲ್ಲಿ ಕೆಲಸ ಮಾಡುತ್ತಿದ್ದಾನೆ ಒಂದು ದಿನ ಅವನ ಫಾರಂ ಗೆ ನನ್ನನ್ನು ಕರೆದುಕೊಂಡು ಹೋಗಿದ್ದ ನಾನು ಅವನ ಫಾರಂ ನೋಡುತ್ತಾ ಸ್ವಲ್ಪ ಮುಂದೆ ಹೋದಾಗ ಅಲ್ಲಿಗೆ ಹೋಗಬೇಡ ಅದು ಬೇರೆಯವರ ಜಮೀನು ಎಂದ ಆ ಜಮೀನಿನಲ್ಲಿ ಒಂದು ಹಳೆಯ ಲಾರಿ ನಿಂತಿತ್ತು ಆ ಲಾರಿ ಹತ್ತು ವರ್ಷಗಳ ಹಿಂದೆ ನನ್ನ ಮಗನ ಕಾರಿಗೆ ಡಿಕ್ಕಿ ಹೊಡೆದಿದ್ದ ಲಾರಿಯೆಂದು ನನಗೆ ತಿಳಿದು ನನ್ನ ಹೆಸರು ಮುಂದಲೆಗೆ ಬರಬಾರದೆಂದು ನನ್ನ ಸ್ನೇಹಿತನ ಮೂಲಕ ಕಂಪ್ಲೇಂಟ್ ಕೊಡಿಸಿದ್ದೆ . ಆದರೆ ಆ ಲಾರಿಯ ಮಾಲೀಕನೇ ಸತ್ತುಹೋದನೆಂದು ಅದರಿಂದ ತಪ್ಪಿಸಿಕೊಂಡ ನನ್ನ ಜಮೀನಿನಲ್ಲಿ ಗಾಂಜಾ ಬೆಳೆಯುತ್ತಿರುವುದನ್ನು ಪೋಲೀಸ್ ರವರು ಕಂಡು ಹಿಡಿದರು ಆದರೆ ಅವನು ನನ್ನ ಜಮೀನಲ್ಲಾ ಎಂದು ಆ ಗಾಂಜಾ ಬೆಳೆಯನ್ನು ಎಲ್ಲೋ ಸಾಗಿಸಿ    ನಾಶಪಡಿಸಿದ ಅದರಿಂದಲೂ ಬಚಾವಾದ ಸಾರ್ .  ನಂತರ ಅವನ ಮಗಳು ನನಗೆ ನೀಡಿದ್ದ ಐದು ಕೋಟಿ ರೂಪಾಯಿ ಚೆಕ್ಕನ್ನು ನನ್ನ ಮಗನಿಗೆ ತೋರಿಸಿ ನಿಮ್ಮಪ್ಪ ಮದುವೆ ಮುರಿದು ಬೀಳಲು ಐದು ಕೋಟಿ ರೂಪಾಯಿ ತೆಗೆದುಕೊಂಡಿದ್ದಾರೆಂದು ನನ್ನ ಮಗನ ನಂಬಿಸಿ ನನ್ನ ಮಾತು ಕೇಳದಂತೆ ಮಾಡಿದ್ದಾಳೆ ಈಗ ನನ್ನ ಮಗ ಐವತ್ತು ಕೋಟಿ ರೂಪಾಯಿ ಪ್ರಾಜೆಕ್ಟ್ ಗೆ ಅಪ್ಲೈ ಮಾಡಿದ್ದ . ನಿನ್ನ ಹೆಂಡತಿಗೆ ಡೈವೋರ್ಸ್ ಕೊಟ್ಟು ನನ್ನನ್ನು ಮದುವೆಯಾದರೆ ಆ ಪ್ರಾಜೆಕ್ಟನ್ನು  ನಿನಗೇ ಸಾಂಕ್ಷನ್ ಮಾಡಿಸುತ್ತೇನೆಂದು ಅವನ ಮಗಳು ನನ್ನ ಮಗನನ್ನು ನಂಬಿಸಿದ್ದಾಳೆ ನನ್ನ ಮಗ ಅವಳ ಮಾತನ್ನು ನಂಬಿ ಅವನ ಹೆಂಡತಿಗೆ  ಡೈವೋರ್ಸ್ ಕೊಡಲು ಕೋರ್ಟಿಗೆ ಹಾಕಿದ್ದಾನೆ ಸಾರ್ ನಮ್ಮದೇ ಜಮೀನು ಈಗ ಮಾರಾಟ ಮಾಡಿದರೂ ಹತ್ತು ಕೋಟಿ ರೂಪಾಯಿ ಬರುತ್ತದೆ ಐದು ಕೋಟಿ ಆದಾಯಕ್ಕೆ ನಿನ್ನ ಸಂಸಾರ ಹಾಳು ಮಾಡಿಕೊಳ್ಳಬೇಡವೆಂದು ಎಷ್ಟೇ ಹೇಳಿದರೂ ನನ್ನ ಮಾತು ನಂಬದೆ ನಾನು ಅವನ ಮದುವೆ ನಿಲ್ಲಿಸಲು ಐದು ಕೋಟಿ ರೂಪಾಯಿ ಪಡೆದೆನೆಂದು ಅವನ ಮಗಳು ಹೇಳಿದ್ದನ್ನು ನಂಬಿ ಈಗ ನನ್ನ ಮೇಲೆ ಕೋಪಗೊಂಡು ನನ್ನ ಮಾತನ್ನು ಕೇಳುತ್ತಿಲ್ಲಾ ಸಾರ್ ಹತ್ತು ಕೋಟಿ ಯ ಇಪ್ಪತ್ತು ಎಕರೆ ಜಮೀನು ನಾನು ಹಗಲಿರುಳೂ ಕಷ್ಟಬಿದ್ದು ಸಂಪಾದಿಸಿದ ಜಮೀನನ್ನು ಅವನಿಗೇಕೆ ಬಿಡಬೇಕೆಂದು ನಾನೇ ಉಳುಮೆ ಮಾಡಿಸೋಣವೆಂದು ಇಬ್ಬರು ಕೆಲಸಗಾರರನ್ನು ಕರೆದುಕೊಂಡು ಹೋಗಿ ಜಮೀನು ನೋಡುತ್ತಿದ್ದಾಗ ಎಲ್ಲಿದ್ದರೋ ನಾಲ್ರು ಜನ ಧಾಂಡಿಗರು ಬಂದು ಹಿಗ್ಗಾ ಮುಗ್ಗಾ ಥಳಿಸಿ ರಸ್ತೆಯ ಪಕ್ಕದಲ್ಲಿ ಹಾಕಿ ಹೋದರು ಸಾರ್ ನನಗೆ ಆ ರಮೇಶ ದೇಸಾಯಿ ಮೇಲೆ ಅನುಮಾನ ನನಗೆ ಬೇರೆ ಯಾರೂ ದ್ವೇಷಿಗಳಿಲ್ಲ

ಅವನಿಗೆ ತಕ್ಕ ಶಿಕ್ಷೆಯಾಗಬೇಕು ಸಾರ್

ನೀವು ಹೇಳಿದ್ದನ್ನು ನೋಡಿದರೆ ಅವನೇ ನಿಮಗೆ ಹೊಡೆಸಿದ್ದಾನೆ ಎನಿಸುತ್ತಿದೆ ನಾನು ಅವತ್ತೇ ಲಾರಿ ಸೀಸ್ ಮಾಡಿದ ದಿನ ಕೇಸ್ ಹಾಕುತ್ತಿದ್ದೆ ಆದರೆ ಅವನ ವಿರುದ್ದ ಸರಿಯಾದ ಸಾಕ್ಷ್ಯ  ಇರಲಿಲ್ಲ ಆ ಲಾರಿಯ ಮಾಲೀಕ ಸತ್ತಿದ್ದಾನೆಂದು ತಿಳಿದ ಮೇಲೆ ಅದೂ ಅಲ್ಲದೆ ರಾಜಕೀಯದವರ ಪ್ರೆಜರ್ ನಿಂದ ಸುಮ್ಮನಾಗಬೇಕಾಯ್ತು ಗಾಂಜಾ ಬೆಳೆ ಅವನ ಜಮೀನಿನಲ್ಲಿರಲಿಲ್ಲ ಬೆಳಿಗ್ಗೆ ಆಗುವುದರೊಳಗೆ ಎಲ್ಲಾ ಬೆಳೆಯನ್ನು ಎಲ್ಲಿ ಸಾಗಿಸಿದನೋ ಗೊತ್ತೇ ಆಗಲಿಲ್ಲ  ಅದು ನೀವು ಖರೀದಿಸಿರುವ ಜಮೀನೆಂದು ಈಗ ತಿಳಿಯಿತು . ಅವನೇ ಹೊಡೆಸಿದ್ದಾನೆಂದು ಸಾಕ್ಷಿ ಸಿಕ್ಕಿದರೆ ಅವನನ್ನು ಸುಮ್ಮನೆ ಬಿಡುವುದಿಲ್ಲವೆಂದು ಇನ್ನಿಬ್ಬರ ಬಳಿ ಬಂದು ಅವರನ್ನು ಕೇಳಿದಾಗ ರಘುರಾಂ ರವರು ನಮಗೆ ಜಮೀನು ತೋರಿಸುತ್ತಿದ್ದಾಗ ಯಾರೋ ಧಾಂಡಿಗರು ಬಂದು ಹೊಡೆದು ರಸ್ತೆ ಪಕ್ಕದಲ್ಲಿ ಮಲಗಿಸಿ ಹೋದರೆಂದಾಗ

ಎಲ್ಲರೂ ಒಂದೇ ರೀತಿ ಹೇಳುತ್ತಿದ್ದಾರೆ ಇದರಲ್ಲಿ ನಿಜಾಂಶವಿರಬಹುದೆಂದು ಹುಷಾರಾದ ನಂತರ ನಾಳೆ ಮೂರು ಜನರೂ ಕಂಪ್ಲೇಂಟ್ ಕೊಡಿ ನಿಮಗೆ ಹೊಡೆದವರನ್ನು ಹುಡುಕಲು ಸಹಾಯವಾಗುತ್ತದೆಂದು ಹೇಳಿ ಹೋಗುತ್ತಾರೆ

ಇನ್ಸ್ ಪೆಕ್ಟರ್ ಹೋದಮೇಲೆ ಅವರ ಪತ್ನಿ ಒಳಗೆ ಬಂದು ಇದೇನ್ರೀ ಇಷ್ಟೊಂದು ತನಕ ನಿಮ್ಮ ಹೇಳಿಕೆ ತೊಗೊಂಡ್ರು?

ನಾನೇ ಅವರಿಗೆ ಎಲ್ಲಾ ವಿಚಾರವನ್ನು ಹೇಳಿದೆ 

ನನಗೆ ಗೊತ್ತಿಲ್ಲದ ವಿಚಾರವೇನಿದೆ?

ನಿನಗೂ ಹೇಳುವುದಕ್ಕೆ ಆಗಿರಲಿಲ್ಲವೆಂದು ಇನ್ಸ್ ಪೆಕ್ಟರ್ ಗೆ ಹೇಳಿದ ವಿಚಾರವನ್ನೆಲ್ಲಾ ಹೇಳಿದಾಗ

ಅಬ್ಬಾ ಇದೇನ್ರೀ? ಈ ವಿಚಾರ ನನಗೆ ಗೊತ್ತೇ ಇರಲಿಲ್ಲ ನೀವೊಬ್ಬರೇ ಏತಕ್ಕೆ ಹೋಗಬೇಕಿತ್ತು? ನಿಮ್ಮ ಮಗನನ್ನೂ ಕರೆದುಕೊಂಡು ಹೋಗಿ ನಿಜಾಂಶ ತೋರಿಸಬೇಕಿತ್ತು

ಈ ಮಾತಿಗೆ ರಘುರಾಮ್ ನಗುತ್ತಾ ಅವನು ನಂಬುತ್ತಾನಾ? ಮದುವೆ ನಿಲ್ಲಿಸಲು ಪಡೆದ ಹಣದಿಂದ  ಕೊಂಡಿದ್ದೀಯಾ ನನಗೆ ಬೇಡ ನಾನು ಬರುವುದೇ ಇಲ್ಲವೆಂದು ಹೇಳುತ್ತಿದ್ದ ಎನ್ನುವ ವೇಳೆಗೆ ಸಂಜಯ ಒಳಗೆ ಬಂದು ಈಗ ಹೇಗಿದ್ಜೀಯಪ್ಪಾ ಎನ್ನಲು

ನಿನ್ನೆಗಿಂತ ಸ್ವಲ್ಪ ಪರವಾಗಿಲ್ಲ ಸಂಜಯ್

ನಿನಗೆ ಯಾರು ಹೊಡೆದರೆಂದು ಗೊತ್ತಾ? 

ಹೇಗೆ ಹೇಳಲೋ ನಾಲ್ಕು ಜನ ಬಂದು ಹೊಡೆದು ಹೋದರು 


 ಅಪ್ಪ ಮಗನ ಸಂಭಾಷಣೆ ಮುಂದುವರೆದಿರುತ್ತದೆ


ಮುಂದುವರೆಯುತ್ತದೆ


ಡಾ. ಎನ್ ಮುರಳೀಧರ್ 

ವಕೀಲರು ಹಾಗೂ ಸಾಹಿತಿ

ನೆಲಮಂಗಲ

Image Description

Post a Comment

0 Comments