ಬೆಳಕು
ಪುಸ್ತಕದ ಒಳಗೆಲ್ಲ
ವಾಗ್ದೇವಿಯ ಶಿಶುವಾಗಿ
ಜ್ಞಾನದ ದೀವಿಗೆಯನು ಹಿಡಿದು
ಪ್ರಭೆಯ ಮೂಲಕ ಪ್ರಜ್ವಸಿದ...
ಸಂವಿಧಾನವೆಂಬ ಅದ್ಭುತ
ಹೊತ್ತಿಗೆಯನು ನೀಡಿ
ಅಂಧಕರಿಗೆ ಬೆಳಕಾಗಿ ಕಂಡರಿಸಿದ...
ಭೀಭತ್ಸ, ಭಯಾನಕ ಆಚರಣೆಗಳ
ವಿರುದ್ಧ ಪ್ರತಿಭಟಿಸಿ
ಅರವಿನ ಪರಧಿಯನು ಹಾಸಿದ...
ವ್ಯಷ್ಟಿಯ ಬಗ್ಗೆ ಚಿಂತಿಸದೆ
ಸಮಷ್ಟಿಯ ಕಲ್ಯಾಣಕ್ಕೆ ಹೋರಾಡಿ
ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿ
ಅಪ್ಪಟ ಹೊಳೆಯುವ ಪುತ್ಥಳಿಯಾದ...
ಮಲ ಹೊರುವ ಕಾಯಕವನು ತಪ್ಪಿಸಿ
ಬಹಿಷ್ಕಾರ ಒಡಲಿನಿಂದ ಹೊರಬಂದು
ಅಸಮಾನತೆಯನು ತೊಲಗಿಸಿ
ಸಮಾನತೆಯ ಸಂದೇಶ ಸಾರಿದ...
ಜ್ಞಾನದ ಕಿರೀಟವನು ಮುಡಿಗೆರಿಸಿಕೊಂಡು
ದಮನಿತರ ದನಿಯಾಗಿ
ದಲಿತರ ಬಾಳಿನ
ಆಶಾಕಿರಣವಾಗಿ
ಉಜ್ವಲ ಭವಿಷ್ಯವನು ರೂಪಿಸಿದ...
ಡಾ. ತ್ರಿವೇಣಿ ಬನಸೋಡೆ
ಅತಿಥಿ ಉಪನ್ಯಾಸಕಿ
ಕರಾಅಮವಿವಿ
ವಿಜಯಪುರ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
1 Comments
Hi read your writing its good keep going
ReplyDelete