ಗಗನ ಕುಸುಮ (ಕಾದಂಬರಿ) ಸಂಚಿಕೆ-೬೭
ಹಿಂದಿನ ಸಂಚಿಕೆಯಲ್ಲಿ
ಗುರಿರಾಜನನ್ನು ಕೊಲೆ ಮಾಡಿದ್ದ ಅವನ ಹೆಂಡತಿ ಹಾಗೂ ಸ್ನೇಹಿತ ಇಬ್ಬರಿಗೂ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿರುತ್ತದೆ
ಕಥೆಯನ್ನು ಮುಂದುವರೆಸುತ್ತಾ
ರಮೇಶ ದೇಸಾಯಿಯು ಎಲ್ಲದರಲ್ಲೂ ತಪ್ಪಿಸಿಕೊಳ್ಳುತ್ತಿರುವುದರಿಂದ ಇನ್ಸ್ ಪೆಕ್ಟರ್ ಗೆ ದೊಡ್ಡ ತಲೆನೋವಾಗಿದ್ದು ತಾನು ಮಾಡಿದ ಪ್ಲಾನ್ ಎಲ್ಲವೂ ಉಲ್ಟಾ ಆಗುತ್ತಿದೆಯೆಂದು ಚಿಂತಿಸುತ್ತಿರುವಾಗ
ದಫೇದಾರರು ಯಾವುದೋ ಕಡತಕ್ಕೆ ಸಹಿ ತೆಗೆದುಕೊಳ್ಳಲು ಬಂದು ಏನ್ ಸಾರ್ ಯಾವುದೋ ಗಾಢವಾದ ಯೋಚನೆಯಲ್ಲಿದ್ದೀರಲ್ಲಾ ಎನ್ನಲು
ಅದೇ ರೀ ರಮೇಶ ದೇಸಾಯಿ ಏನು ತಪ್ಪು ಮಾಡಿದ್ದರೂ ಅವನನ್ನು ಹಿಡಿಯಲು ಆಗುತ್ತಿಲ್ಲವೆಂದು ಯೋಚನೆಯಾಗಿದೆ
ಆ ದಿನ ಗುರಿರಾಜನನ್ನು ಬಿಡಬಾರದಿತ್ತು ಸಾರ್
ಮೇಲಿನವರ ಒತ್ತಡದಿಂದ ಬಿಟ್ಟೆ ಅದೂ ಹೋಗಲೀ ಅವನು ಇಷ್ಟು ಬೇಗ ಸಾಯುತ್ತಾನೆಂದು ಯಾರಿಗೆ ಗೊತ್ತಿತ್ತು ದೆಫೇದಾರ್ರೇ?
ಸಾರ್ ಇನ್ನೂ ಕಾಲ ಮಿಂಚಿಲ್ಲ ಗುರಿರಾಜು ಜೊತೆಗೆ ಇನ್ನಿಬ್ಬರು ಇದ್ದರೆಂದು ರಘುರಾಂರವರ ಕೆಲಸಗಾರರು ಹೇಳಿದ್ದರಲ್ಲಾ ಅವರನ್ನು ಪತ್ತೆ ಮಾಡಿದರೆ?
ಅವರನ್ನು ಗುರುತಿಸುವವರು ಯಾರಿದ್ದಾರೆ?
ಗುರಿರಾಜನ ಸ್ನೇಹಿತನನ್ನೇ ವಿಚಾರಣೆ ಮಾಡಿದರೆ ಬಾಯಿ ಬಿಡಬಹುದು ಸಾರ್
ಆಯ್ತು ನಡೆಯಿರಿ ಎನ್ನುತ್ತಾ ಗುರಿರಾಜನಿದ್ದ ಸೆಲ್ ಗೆ ಹೋಗಿ ಗುರಿರಾಜನಿಗೆ ನಿನ್ನ ಜೊತೆ ಇನ್ನೂ ಎಷ್ಟು ಜನರಿದ್ದಾರೆಂದು ಗದರಿಸಿ ಕೇಳಲು
ಯಾರೂ ಇಲ್ಲಾ ಸಾರ್ ಎನ್ನುತ್ತಾನೆ
ಸುಳ್ಳು ಹೇಳಬೇಡ
ನಾನು ನಿಜ ಹೇಳುತ್ತಿದ್ದೇನೆ ಸಾರ್ ಎನ್ನಲು
ವಿಷದ ಬಾಟಲ್ ಮೇಲಿದ್ದ ಬೆರಳುಗಳ ಗುರ್ತು ನಿನ್ನ ಬೆರಳುಗಳಿಗೆಮ್ಯಾಚ್ ಆಗುತ್ತಿಲ್ಲಾ ಬೇರೆ ಯಾರಾದರೂ ನಿನ್ನ ಸ್ನೇಹಿತ ಇದ್ದು ಆ ದಿನ ಗುರಿರಾಜನಿಗೆ ವಿಷ ಹಾಕಿದ್ದಾನೆಂಬ ಅನುಮಾನವಿದೆ ಎನ್ನುತ್ತಾ ದಫೇದಾರರ ಕಡೆ ತಿರುಗಿ ಕಣ್ಣು ಮಿಟಿಕಿಸುತ್ತಾರೆ
ಇದನ್ನು ಗಮನಿಸದ ಮರಿಯಪ್ಪ ಬೇರೆ ಯಾರೂ ಇಲ್ಲಾ ಸಾರ್ ಎಂದಾಗ
ಹಾಗಾದರೆ ನೀನೇ ವಿಷ ಹಾಕಿದ್ದೀಯೆಂದು ನಿನಗೇ ಜೈಲು ಫಿಕ್ಸ್ ಆಗುತ್ತದೆ ಬೇರೆ ಯಾರಿದ್ದಾರೆಂದು ಹೇಳು ನೀನು ಬಚಾವಾಗುತ್ತೀಯಾ ಎನ್ನುತ್ತಾರೆ
ಓ ಹೌದಾ ಸಾರ್ ನಾನು ತಪ್ಪಿತಸ್ತನಲ್ಲನೆಂದು ಬಿಡುಗಡೆ ಮಾಡ್ತಾರಾ ?
ನೀನು ಕೊಲೆಗಾರನೆಂದು ಪ್ರೂವ್ ಆಗದಿದ್ದರೆ ಬಿಡುತ್ತಾರೆ
ಸಾರ್ ಹಾಗಾದರೆ ಹೇಳುತ್ತೇನೆ ಸಾರ್ ಆ ಬಡ್ಡಿಮಗ ನನ್ನ ಸ್ನೇಹಿತ ಗುರಿರಾಜ ಹೇಳಿದ್ದನ್ನು ಚಾಚೂ ತಪ್ಪದೆ ಮಾಡುತ್ತಿದ್ದ ಸಾರ್
ಯಾರವನು?
ತಂಗವೇಲು ಸಾರ್
ನಿನಗೆ ರಮೇಶದೇಸಾಯಿ ಗೊತ್ತಾ?
ಸಾರ್ ಹೆಸರು ಮಾತ್ರ ಗೊತ್ತು ಆದರೆ ಅವರನ್ನು ನಾನು ನೋಡೇ ಇಲ್ಲಾ ಸಾರ್
ಅವರ ಹೆಸರು ನಿನಗೆ ಹೇಗೆ ಗೊತ್ತು?
ಏನಾದರೂ ಡೀಲ್ ಇದ್ದರೆ ರಮೇಶ ದೇಸಾಯಿ ಗುರಿರಾಜನಿಗೆ ನೀಡುತ್ತಿದ್ದರು ಅವನು ನಮಗೆ ಹೇಳಿ ಕೆಲಸ ಮಾಡಿಸುತ್ತಿದ್ದ
ಹಾಗಾದರೆ ನೀನು ಇನ್ನೊಬ್ಬ ಸ್ನೇಹಿತ ತಂಗವೇಲು ಗುರಿರಾಜ್ ಜೊತೆ ಸೇರಿಕೊಂಡು ರಮೇಶ ದೇಸಾಯಿಯವರ ಫಾರ್ಮ ನಲ್ಲಿ ರಘುರಾಂಗೆ ಹೊಡೆದ್ರಾ?
ಇಲ್ಲಾ ಸಾರ್ ನಾನು ಅವತ್ತು ಅವನಜೊತೆಗೆ ಹೋಗಿರಲಿಲ್ಲ
ಏನಾದರೂ ಸುಳ್ಳು ಹೇಳಿದರೆ ಗೊತ್ತಲ್ಲಾ?
ಇಲ್ಲಾ ಸಾರ್ ನಾನು ಹೇಳುತ್ತಿರುವುದು ನಿಜ
ಹಾಗಾದರೆ ಇನ್ನೊಬ್ಬ ನಿನ್ನ ಸ್ನೇಹಿತ ತಂಗವೇಲು ಎಲ್ಲಿರುತ್ತಾನೆ?
ಸಾರ್ ಅವನು ಮೈಸೂರು ರೋಡಿನಲ್ಲಿರುತ್ತಾನೆಂದು ಅವನ ಮನೆಯ ವಿಳಾಸ ಹೇಳಲು
ಇನ್ಸ್ ಪೆಕ್ಟರ್ ಸೀದಾ ಅವನ ಮನೆಗೆ ಬಂದು ಅವನನ್ನು ವಿಚಾರಣೆ ಮಾಡಿದಾಗ
ಅವನೂ ಸಹ ರಮೇಶ ದೇಸಾಯಿ ಯಾರೆಂದು ಗೊತ್ತಿಲ್ಲಾ ಸಾರ್ ಎಂದು ಮರಿಯಪ್ಪ ಹೇಳಿದ್ದನ್ನೇ ಹೇಳಲು
ಛೇ….. ಇವನಿಗೂ ರಮೇಶ ದೇಸಾಯಿಗೂ ವ್ಯವಹಾರವಿಲ್ಲ ಇವನಿಗೆ ರಮೇಶ ದೇಸಾಯಿ ಸುಪಾರಿ ಕೊಟ್ಟಿರುವನೆಂದು ಪ್ರೂವ್ ಮಾಡಲು ಆಗುವುದಿಲ್ಲವೆಂದು ಇವನೇ ಹೊಡೆದಿದ್ದರೂ ಯಾರೂ ನೋಡಿಲ್ಲ ಬಲವಂತ ಮಾಡಿ ಬಾಯಿ ಬಿಡಿಸಿದರೂ ಇವನೊಬ್ಬನಿಗೆ ಶಿಕ್ಷೆಯಾಗಬಹುದು ಆದರೂ ರಮೇಶ ದೇಸಾಯಿ ತಪ್ಪಿಸಿಕೊಳ್ಳುತ್ತಾನೆಂದುಕೊಂಡು ಅವನನ್ನು ಠಾಣೆಗೆ ಎಳೆದುಕೊಂಡು ಬಂದು ಎಫ್ ಐಆರ್ ಹಾಕಿ ಕೋರ್ಟಿಗೆ ಹಾಜರುಪಡಿಸಿದಾಗ
ಅವನಿಗೂ ನ್ಯಾಯಾಂಗ ಬಂಧನವಾಗುತ್ತದೆ
ಛೇ ಇದರಲ್ಲೂ ರಮೇಶ ದೇಸಾಯಿ ತಪ್ಪಿಸಿಕೊಂಡ. ಇವನ ಮೇಲೆ ಯಾವುದೇ ಕೇಸ್ ಹಾಕದಹಾಗಾಯ್ತೆಂದು ಇನ್ಸ್ ಪೆಕ್ಟರ್ ಗೆ ಬೇಸರವಾಗಿರುತ್ತದೆ.
ರಾತ್ರಿ ಹನ್ನೊಂದು ಗಂಟೆ ಸಮಯ
ಸಂಜಯ ಮಲಗಿದ್ದರೂ ನಿದ್ದೆ ಬಂದಿರುವುದಿಲ್ಲ. ಇದೇನು ಎಷ್ಟು ದಿನವಾದರೂ ಗಗನ ಮದುವೆಯ ವಿಚಾರವನ್ನು ಹೇಳುತ್ತಿಲ್ಲ ಪ್ರಾಜೆಕ್ಟ್ ಬಗ್ಗೆಯೂ ಮಾತನಾಡುತ್ತಿಲ್ಲವೆಂದು ತಾನೇ ಫೋನ್ ಮಾಡಿದಾಗ
ನನ್ನ ತಂದೆಯು ಯಾವುದೋ ಕೆಲಸದಲ್ಲಿ ತುಂಬಾ ಬ್ಯುಸಿ ಇದ್ದಾರೆ ಒಂದೆರಡು ದಿನ ಟೈಮ್ ಕೊಡು ಸಂಜಯ್ ನಿನಗೆ ಗುಡ್ ನ್ಯೂಸ್ ಕೊಡುತ್ತೇನೆಂದು ಗಗನ ಹೇಳಿದಾಗ
ಗಗನಾ ಡಿಯರ್ ಇನ್ನೂ ಎಷ್ಟು ದಿನಾ ವೈಟ್ ಮಾಡಬೇಕು?
ಸ್ವಲ್ಪ ದಿನಾ ಅಷ್ಚೇ ನಿಮ್ಮಪ್ಪನ ಜೊತೆ ಮಾತನಾಡಿಸುತ್ತೇನೆ
ಅಯ್ಯಯ್ಯೋ ಬೇಡಾ ಬೇಡಾ ನನ್ನಪ್ಪ ಇದಕ್ಕೆ ಒಪ್ಪುವುದೇ ಇಲ್ಲಾ ಗಗನಾ ….
ಹಾಗಾದರೇನು ಮಾಡುವುದು?
ನೀನೇ ಇದಕ್ಕೆ ಉಪಾಯ ಮಾಡಬೇಕು ಗಗನಾ
ಒಂದು ಕೆಲಸ ಮಾಡು ನೀನೇ ನನ್ನಪ್ಪನ ಬಳಿ ಮಾತನಾಡು
ಇದು ಅದಕ್ಕಿಂತ ಡೇಂಜರ್ ಎನಿಸುತ್ತದೆ
ಕೆಲಸವಾಗಬೇಕಾದರೆ ಧೈರ್ಯ ತೆಗೆದುಕೊಳ್ಳಬೇಕು ಸಂಜಯ್
ಎಷ್ಟೇ ಧೈರ್ಯವಿದ್ದರೂ ಹುಲಿ ಬಾಯಲ್ಲಿ ಕೈ ಇಡು ಎಂದರೆ ಆಗುತ್ತದಾ?
ಓ ಹೋ ನಮ್ಮಪ್ಪ ನಿನಗೆ ಹುಲಿಯಂತೆ ಇದ್ದಾರಾ? ನಮ್ಮಪ್ಪ ತುಂಬಾ ಒಳ್ಳೆಯವರು ಮಗಳ ಮದುವೆ ಆದರೆ ಸಾಕೆಂದು ತವಕಿಸುತ್ತಿದ್ದಾರೆ. ನಾನು ಒಂದೆರಡು ದಿನ ಬಿಟ್ಟು ನಮ್ಮಪ್ಪ ಫ್ರೀ ಆದಾಗ ನಿನಗೆ ಹೇಳುತ್ತೇನೆ ನೀನು ಫೋನ್ ಮಾಡಿ ಸೂಕ್ಷ್ಮವಾಗಿ ವಿಚಾರ ಹೇಳು
ಅವರ ಮಾತಿನ ವೈಖರಿ ನೋಡಿಕೊಂಡು ಮುಂದುವರೆಯುವಿಯಂತೆ ಎನ್ನಲು
ಹೋಗಲೀ ನನಗೆ ನಿನ್ನ ನೋಡದೆ ತುಂಬಾ ಬೇಸರವಾಗಿದೆ ನಾಳೆ ಸಿಗುತ್ತೀಯಾ?
ಓಕೆ ಮಾಮೂಲೀ ಎಂಜಿ ರೋಡ್ ಗೆ ಬಾ ನಾನೂ ಶಾಪಿಂಗ್ ಗೆ ಹೋಗಬೇಕು
ನೀನು ಎಂಜಿ ರೋಡ್ ಶಾಪಿಂಗ್ ಎಂದಿದ್ದಕ್ಕೆ ಜ್ಞಾಪಕ ಬಂತು ಅಂದು ನಾನು ಖರೀದಿಸಿದ ಬಟ್ಟೆಗಳನ್ನು ಕುಸುಮಳಿಗೆ ಕೊಡಲು ಆಗಲೇ ಇಲ್ಲಾ ಛೇ ಎನ್ನಲು
ಎಂತಹ ಕೆಲಸ ಮಾಡಿದೆ ನೀನು? ಗಂಡ ಕೊಡಿಸಿದ ಕಡೆಯ ಸೀರೆ ಎಂದು ಕಡೇವರೆಗೂ ಜ್ಞಾಪಕ ಇಟ್ಟುಕೊಂಡಿರುತ್ತಿದ್ದಳು ಪಾಪ ಆ ನೆನಪಿನ ಭಾವನೆಯಿಂದ ವಂಚಿತಳಾದಳು
ಹೋಗಲೀ ಏನೂ ಮಾಡುವುದಕ್ಕೆ ಆಗುವುದಿಲ್ಲ ನಿನಗೇ ಕೊಡುತ್ತೇನೆ ಗಂಡ ಕೊಡಿಸಿದ ಮೊದಲನೇ ಸೀರೆ ಎಂದು ನೀನೇ ಜ್ಞಾಪಕ ಇಟ್ಟುಕೋ? ಆ ಸೀರೆ ನಿನಗೆ ಎಂದು ಬರೆದಿದೆಯೇನೋ
ಅದೂ ಅದೂ…..
ಹೇಳು ಗಗನಾ…..ಪರವಾಗಿಲ್ಲಾ
ನಾನು ಈಗ ಹೇಳುವುದಿಲ್ಲಾ….. ಸಮಯ ಬಂದಾಗ ಕೊಡುವಿಯಂತೆ
ಆ ಸಮಯ ಬೇಗ ಬರುವಂತೆ ನೀನೇ ಮಾಡಬೇಕು
ಅದು ಹೇಗೆ ಸಂಜಯ್?
ನೀನು ಎಂದಾದರೂ ನಮ್ಮ ಮದುವೆ ವಿಚಾರವನ್ನು ನಿನ್ನ ತಂದೆಗೆ ಹೇಳಿದ್ದೀಯಾ?
ನನ್ನ ಮದುವೆ ಮಾಡುವುದೇ ನಮ್ಮಪ್ಪನಿಗೆ ಚಿಂತೆಯಾಗಿದೆ ನೀನು ಯಾರನ್ನು ಒಪ್ಪುತ್ತೀಯೋ ಬೇಗ ಹೇಳಮ್ಮಾ ತಕ್ಷಣ ಮದುವೆ ಮಾಡುತ್ತೇನೆ ಎಂದಿದ್ದಾರೆ
ಹೌದಾ ಸೂಕ್ಷ್ಮವಾಗಿ ಹೇಳು ಅವರಿಂದ ಏನು ಉತ್ತರ ಬರುತ್ತದೋ ನೋಡಿಕೊಂಡು ಕನ್ಫರ್ಮ್ ಮಾಡು
ನೀನೇನೂ ಯೇಚಿಸಬೇಡ ಸಿಹಿ ಸುದ್ದಿ ಕೊಡುತ್ತೇನೆಂದಾಗ
ಓ ಆಗಬಹುದು ಗಗನಾ ಎಂದು ಹೇಳಿ ಫೋನ್ ಕಟ್ ಮಾಡಿ ಇನ್ನೂ ಎಷ್ಟು ದಿನ ಬೇಕೋ ಎಂದು ಬೇಸರದಿಂದ ಫೋನ್ ಕಟ್ ಮಾಡಿ ಮಲಗುತ್ತಾನೆ.
ಮುಂದುವರೆಯುತ್ತದೆ
ಡಾ. ಎನ್ ಮುರಳೀಧರ್
ವಕೀಲರು ಹಾಗೂ ಸಾಹಿತಿ
ನೆಲಮಂಗಲ

.gif)

.gif)


0 Comments