435 ನೇ ಬದಕುವ ಮಾತು

 

   *ಮಲತಾಯಿ ಧೋರಣೆಯ ನಿಯಂತ್ರಣವಾಗಲಿ*

 ಬಹು ಪತ್ನಿತ್ವ ಪದ್ಧತಿಯಲ್ಲಿ ಮಲತಾಯಿ ಪಾತ್ರ ಖಳನಾಯಕಿ ಪಾತ್ರವೆಂದೇ ನಾವು ಹೇಳಬೇಕಾಗುತ್ತದೆ. ಏಕೆಂದರೆ ಆಕೆ ಯಾವುದೇ ಕಾರಣಕ್ಕೂ ತನ್ನ ಸವತಿಯ ಮಕ್ಕಳ ಸಂತೋಷ ಮತ್ತೂ ಏಳ್ಗೆಯನ್ನು ಸಹಿಸುವುದಿಲ್ಲ. ಆದೇ ರೀತಿಯಾಗಿ ಅಣ್ಣತಮ್ಮಂದಿರು ಇರುವ ಕುಟುಂಬದಲ್ಲಿ ಅಣ್ಣ ತಮ್ಮಂದಿರ ಹೆಂಡಂದಿರು ಕೂಡ ಮಲತಾಯಿ ಗುಣವನ್ನೇ ಬೆಳೆಸಿಕೊಂಡಿದ್ದನ್ನು ಅನೇಕ ಕಡೆಗೆ ನಾವು ಕಾಣುತ್ತಿರುತ್ತೇವೆ.  ಅಣ್ಣತಮ್ಮಂದಿರು ಎಷ್ಟೇ ಅನ್ನೋನ್ಯವಾಗಿದ್ದಾಗಲೂ,  ಮನೆ ಬೆಳಗುತ್ತೇವೆ ಎಂದೆಲ್ಲಾ ಬಂದಿರುವ ಪತ್ನಿಯಂದಿರು ಮನೆಯ ಒಡಕಿಗೆ ಕಾರಣರಾಗಿರುವುದಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅವಿಭಕ್ತ ಕುಟುಂಬಗಳೇ ಸಾಕ್ಷಿಗಳಾಗಿವೆ. ಇದರಲ್ಲಿ ಅಣ್ಣತಮ್ಮಂದಿರ ಪಾತ್ರ ಇಲ್ಲವೆಂದಲ್ಲ. ಒಟ್ಟಿನಲ್ಲಿ ಮನೆಯ ಒಡಕಿಗೆ  ಮಕ್ಕಳ ಮನಸ್ಸಿನ ಮೇಲೆ ಆಘಾತ  ಪರಿಣಾಮಕ್ಕೆ ಇವೆಲ್ಲವೂ ಕಾರಣವಾಗಬಲ್ಲವು.  ಆದ್ದರಿಂದ ಜವಾಬ್ದಾರಿಯುತ ಅಣ್ಣತಮಂದಿರು ಇವುಗಳನ್ನು ಬಹು ಸೂಕ್ಷ್ಮವಾಗಿ ಗಮನಿಸುತ್ತ ತಮ್ಮ  ಪತ್ನಿಯಂದಿರಲ್ಲಿರುವ ಮಲತಾಯಿ ಮನೋಭಾವನೆ ದೂರಾಗುವಂತೆ ಮಾಡಿದಾಗ ಮಾತ್ರವೇ ಸಂಬಂಧಗಳು ಉಳಿದು ಅವಿಭಕ್ತ ಕುಟುಂಬಗಳು ಜೀವಂತಿಕೆ ಉಳಿಸಿಕೊಳ್ಳಬಲ್ಲವು. ಹೊಂದಾಣಿಕೆ, ಸಮರಸ ಜೀವನ, ಒಗ್ಗಟ್ಟಿನ  ಕಾರ್ಯಸಾದನೆಗಾಗಿ  ಮಾನವೀಯತೆಯ ಗುಣ ಬೆಳೆಸಿಕೊಳ್ಳುವ ಪಣ ತೋಡೋಣ. 


        ********

ಗಣಪತಿ ಗೋ ಚಲವಾದಿ (ಗಗೋಚ)

ಬಿಎಂಟಿಸಿ ನಿರ್ವಾಹಕರು

ಮಯೂರವರ್ಮ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು

Image Description

Post a Comment

0 Comments