ದ್ವಿತೀಯ ಪಿ ಯು ಸಿ: ಕು. ಸಂಜನಾ ಮಾಳಿ ಕಾಲೇಜಿಗೆ ಪ್ರಥಮ ರ‍್ಯಾಂಕ್:* *ಗೌರವ ಸಮ್ಮಾನ*

 *ದ್ವಿತೀಯ ಪಿ ಯು ಸಿ:             ಕು. ಸಂಜನಾ ಮಾಳಿ ಕಾಲೇಜಿಗೆ ಪ್ರಥಮ ರ‍್ಯಾಂಕ್:*            *ಗೌರವ ಸಮ್ಮಾನ*




ರಾಯಬಾಗ:ತಾಲೂಕಿನ ಹಾರೂಗೇರಿ ಪಟ್ಟಣದ ಶಿಕ್ಷಣ ಪ್ರಸಾರಕ ಮಂಡಳಿಯ ಹಾ. ವಿ ಸಂಯುಕ್ತ ಪದವಿ ಪೂರ್ವ ಮಹಾ ವಿದ್ಯಾಲಯದ ದ್ವಿತೀಯ ಪಿ ಯು ಸಿ ಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕು. ಸಂಜನಾ ಲಕ್ಷ್ಮಣ ಮಾಳಿ  600 ಕ್ಕೆ 572 ಅಂಕಗಳನ್ನು ಸಂಪಾದಿಸಿ (95.33% ) ಮಹಾವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ  ಪಡೆದು ಅಪೂರ್ವ ಸಾಧನೆ ಮಾಡಿದ್ದಾರೆ.


 ಹಾ. ವಿ. ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಕೆ ಎಸ್ ಕಾಂಬಳೆ ಅವರು ಕು. ಸಂಜನಾ ಮಾಳಿ ಅವರ ತೋಟದ ಮನೆಗೆ ನಿನ್ನೆ ತೆರಳಿ ಅಪೂರ್ವ ಸಾಧಕಿ ಕು. ಸಂಜನಾ ಅವರಿಗೆ ಹೂ ಮಾಲೆ ಹಾಕಿ ಶಾಲು ಹೊದಿಸಿ ಸತ್ಕರಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ವಾಣಿಜ್ಯ ವಿಷಯದ ಉಪನ್ಯಾಸಕ  ಪ್ರೊ ಕೆ ಎಸ್ ಭಜಂತ್ರಿ ಹಾಗೂ ಕು. ಸಂಜನಾ ಮಾಳಿ ಅವರ ಪಾಲಕರು ಉಪಸ್ಥಿತರಿದ್ದರು.


ಕು. ಕಾರ್ತಿಕ ಲಾಳಿ ಕಲಾ ವಿಭಾಗದಲ್ಲಿ 600 ಕ್ಕೆ 566 ಅಂಕಗಳನ್ನು ( 94.33%) ಹಾಗೂ ಕು. ಪ್ರೀತಿ. ಶಂ. ನಾಗರಾಳೆ ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 554 ಅಂಕಗಳನ್ನು (92.23%) ಗಳಿಸಿ ಅತ್ಯುತ್ತಮ ಸಾಧಕರಾಗಿ ಹೊರಹೊಮ್ಮಿದ್ದಾರೆ. 


ಕು. ಲಕ್ಷ್ಮಿ ಹಾಲಾಣಿ (ಇತಿಹಾಸ ) ಕು. ಪ್ರತಿಭಾ ಮಂಟೂರೆ (ಇತಿಹಾಸ) ಕು. ಕಾವೇರಿ ಸೈದಾಪುರ ವ್ಯವಹಾರ (ಅಧ್ಯಯನ ) ಕು.ಆದಿತ್ಯ ಲ. ಧರ್ಮಟ್ಟಿ (ಶಿಕ್ಷಣ ಶಾಸ್ತ್ರ) ಕು. ಲಕ್ಷ್ಮಿ ದಳವಾಯಿ( ಶಿಕ್ಷಣ ಶಾಸ್ತ್ರ) ಹಾಗೂ ರಾಧಾ. ಶ್ರೀ. ಮಾಂಗ ಅವರು ನೂರಕ್ಕೆ ನೂರು ಅಂಕಗಳನ್ನು ಗಳಿಸಿ ಸಾಧನೆಯ ವಿಶಿಷ್ಟ ಹೆಜ್ಜೆ ಗುರುತುಗಳನ್ನು ಮೂಡಿಸಿ ಗಮನ ಸೆಳೆದಿದ್ದಾರೆ.

ಸಾಧನೆ ತೋರಿದ ಈ ಎಲ್ಲ  ವಿದ್ಯಾರ್ಥಿಗಳನ್ನು  ಸಂಸ್ಥೆಯ ಆಡಳಿತ ಮಂಡಳಿಯ ಚೇರಮನ್ ಬ್ಯಾರಿಸ್ಟರ್ ಅಮರಸಿಂಹ ಪಾಟೀಲ, ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಎಸ್ ಎಸ್ ಶಿಂಗಾಡಿ ಹಾಗೂ ಮಹಾವಿದ್ಯಾಲಯದ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ಅಭಿಮಾನದಿಂದ ಅಭಿನಂದಿಸಿರುವರು.


ವರದಿ:ಡಾ. ಜಯವೀರ ಎ.ಕೆ.

       ಖೇಮಲಾಪುರ

Image Description

Post a Comment

0 Comments