ಹಕ್ಕಿಗೆ ರಕ್ಕೆ ಇಟ್ಟವರ್ಯಾರು ಹಾರುವ ಹಕ್ಕಿಯ ರಕ್ಕೆ ಬಿಡಿಸಿದವರ್ಯಾರು 1

 ಹಕ್ಕಿಗೆ ರಕ್ಕೆ ಇಟ್ಟವರ್ಯಾರು ಹಾರುವ ಹಕ್ಕಿಯ ರಕ್ಕೆ ಬಿಡಿಸಿದವರ್ಯಾರು 1


ಹಕ್ಕಿಗೆ ಹಾರಡಬೇಕೆಂದು ಹೇಳಿದವರ್ಯಾರು

ಹಕ್ಕಿ ಹಾರಿದರೆ ಮತ್ತಷ್ಟು ಸುಂದರ ಮಾಡಿದವರ್ಯಾರು II


ಹಾರುವ ಹಕ್ಕಿಯ ನೋಡೆಂದು ಹೇಳಿದವರ್ಯಾರು

ಹಾರವ ಹಕ್ಕಿಗೆ ವಿಶಾಲ ರಸ್ತೆ ನಿರ್ಮಿಸಿದವರ್ಯಾರು |

ಹಕ್ಕಿಹಾರುತಿದೆ ಎಂದು ಉಳಿದ ಜೀವಿಗಳಪಕ್ಕಕ್ಕೆ ಸರಿಸಿದವರ್ಯಾರು

ಹಕ್ಕಿ ಹಾರಲು ಮೇಲೆ ಆಕಾಶ ಕೆಳಗೆ ಸಾಗರ ಇಟ್ಟವರ್ಯಾರು II


ಹಕ್ಕಿಗೆ ಎರಡೇ ರಕ್ಕೆ ಕೊಟ್ಟವರ್ಯಾರು

ಹಕ್ಕಿಗೆ ಎರಡೇ ಕಾಲು ಸಾಕೆಂದು ಹೇಳಿದವರ್ಯಾರು |

ಹಕ್ಕಿಹಾರುವಾಗ ಅದರ ದೇಹ ಹಗುರ ಮಾಡಿದವರ್ಯಾರು

ಹಾರುವ ಹಕ್ಕಿಗೆ ಸ್ವಚ್ಛಂದ ಮನಸ್ಸು ಕೊಟ್ಟವರ್ಯಾರು II


ಹಕ್ಕಿಗೆಮನೆ ಕಟ್ಟುವ ಕೌಶಲ್ಯ ಕಲಿಸಿದ ಶಿಲ್ಪಿ ಯಾರು

ಹಕ್ಕಿಗೆ ಆಹಾರ ಬೆಳೆದ ಯೋಗಿ ಯಾರು |

ಹಕ್ಕಿ,ಗೆ ಸುಂದರ ಬಣ್ಣ ಬಳಿದ ಕಲಾವಿದ ಯಾರು

ಹಕ್ಕಿಗೆ ರಾಗ ಕಲಿಸಿದ ಸಂಗೀತಗಾರ ಯಾರು II


ನಮ್ಮ ಬೇಂದ್ರೆಯವರ ಹಕ್ಕಿಹಾರುತಿದೆ ನೋಡಿದಿರಾ..... II


✍️ಜೆಕೆ ಬಸವರಾಜು ಜಯಪುರ🌱7353564902

Image Description

Post a Comment

0 Comments