*ಭಾವಗೀತೆ*
*ಹೊಸತನ*
ನೆನಪಿನಂಗಳದ ತೋಟದಲ್ಲಿ
ನಿನ್ನ ನಗೆಯೆಂಬ ಹೂವರಳಿದೆ
ಸವಿ ಭಾವನೆಗಳ ಮೇಳದಲ್ಲಿ
ಎನೋ ಹೊಸತನದ ಕಂಪಿದೆ ....
ತನುಮನದ ಕಣಕಣದಲ್ಲೂ
ನೀನೇ ತುಂಬಿರುವೆ ಗೆಳತಿ
ಹೃದಯದ ಪ್ರತಿ ಬಡಿತದಲ್ಲೂ
ನೀನಲ್ಲವೇನೇ ನನ್ನುಸಿರಿನ ಒಡತಿ
ಪ್ರೇಮವೆಂಬ ಜೇನ ಕಡಲಲ್ಲಿ
ಮಿಂದು ಒಂದಾಗೋಣ ಮನ ಅರ್ಪಿಸಿ
ಸಂಸಾರವೆಂಬ ಸಂಕೋಲೆಯಲ್ಲಿ
ಬಂಧಿಗಳಾಗೋಣ ಒಲವಿಂದ ರಮಿಸಿ
*ಅಶೋಕ ಬೇಳಂಜೆ*

.gif)

.gif)


0 Comments