ರುಕ್ಮೀಣಿ ಬಸಪ್ಪ ಪಾಂಡರೆ ಅವರಿಗೆ ಪಿಹೆಚ್ ಡಿ ಗೌರವ

 ರುಕ್ಮೀಣಿ ಬಸಪ್ಪ ಪಾಂಡರೆ ಅವರಿಗೆ

 ಪಿ ಹೆಚ್ ಡಿ ಗೌರವ



ರಾಯಬಾಗ :  ರಾಯಬಾಗ ಪಟ್ಟಣದ ಎಸ್ ಪಿ ಎಮ್ ಕಲಾ, ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಕು. ರುಕ್ಮೀಣಿ ಪಾಂಡರೆ ಅವರು ಬಿ. ಆರ್. ದರೂರ ಸಂಶೋಧನಾ ಮಾನ್ಯತಾ ಕೇಂದ್ರದ ಮೂಲಕ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ  ವಿಭಾಗಕ್ಕೆ, * ಗಡಿಭಾಗದ ಸೃಜನೇತನರ ಸಾಹಿತ್ಯದಲ್ಲಿ ಕನ್ನಡಪ್ರಜ್ಞೆ*  ( ಕರ್ನಾಟಕ- ಮಹಾರಾಷ್ಟ್ರ ಪ್ರದೇಶ ಅನುಲಕ್ಷಿಸಿ )ವಿಷಯದ ಸಂಶೋಧನಾ ಪ್ರಬಂಧವನ್ನು ಮಹಾಲಿಂಗಾಪುರದ ಕೆ ಎಲ್ ಇ ಶಿಕ್ಷಣ ಸಂಸ್ಥೆಯ ಸಹಪ್ರಾಧ್ಯಾಪಕರಾದ ಡಾ. ಅಶೋಕ  ನರೋಡೆ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಸಂಶೋಧನಾ  ಮಹಾ ಪ್ರಬಂಧಕ್ಕೆ ಪಿ ಹೆಚ್ಡಿ ಪದವಿ  ನೀಡಲಾಗಿದೆ.

ಇವರಿಗೆ ಸಂಸ್ಥೆಯ  ಚೇರ್ಮನ್ ರಾದ  ಸನ್ಮಾನ್ಯ ಶ್ರೀ ಬ್ಯಾರಿಸ್ಟರ್ ಅಮರಸಿಂಹ  ಅಣ್ಣಾ ವ. ಪಾಟೀಲ್, ಅಧ್ಯಕ್ಷರಾದ ತ್ರಿಕಾಲ್ ಅಣ್ಣಾ ಅ. ಪಾಟೀಲ್,ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಶಶಿಕಲಾ ಶಿಂಗಾಡಿ, ಆಡಳಿತ ಮಂಡಳಿಯ ಸರ್ವ ಸದಸ್ಯರು ಮತ್ತು ಪ್ರಾಚಾರ್ಯರಾದ ಶ್ರೀ  ಐ ಎಸ್ ಗೋಕಾಕ, ಪದವಿ ಮಹಾವಿದ್ಯಾಲಯದ ಭೋದಕ,ಭೋದಕೇತರ ಸಿಬ್ಬಂದಿ ವರ್ಗದವದರು ಅಭಿನಂದಿಸಿದ್ದಾರೆ.


ವರದಿ :ಡಾ. ವಿಲಾಸ್ ಕಾಂಬಳೆ

ಹಾರೂಗೇರಿ

Image Description

Post a Comment

0 Comments