ಚಿತ್ರಕವನ
*ಹೋರಾಡುವಳು*
ಬಹು ಕಷ್ಟ ನಷ್ಟಗಳ ಕಡಿದಾದ
ದಾರಿಯಲಿ ಸಾಗುತಲಿದೆ ಜೀವನ
ಕಡು ಬಡತನವಿದ್ದರೂ ಬರಿದಾಗದು
ತಾಯಿಯ ಮಮತೆಯ ಸಾಂತ್ವನ
ಮಗುವು ಮಡಿಲಲಿದ್ದರೆ ನೋವುಗಳ
ಕಂದನ ಮೊಗವ ನೋಡುತ್ತ ಮರೆವಳು
ಗಟ್ಟಿಯಾಗು ಮಗೂವೇ ನಿ ಎಂದೆನ್ನುತ
ಶ್ರಮದ ಬೇವರ ಹನಿ ನೆನೆದು ನಲಿವಳು
ಬದುಕು ಒಂದು ಬವಣೆಯಾದರೂ
ಜವಾಬ್ದಾರಿ ಬದುಕಲಿ ಸ್ಪೂರ್ತಿಯು
ತನಗಾಗಿ ಅಲ್ಲದಿದ್ದರೂ ನನ್ನದೆಂಬ ಜೀವಕ್ಕೆ
ನೆಲೆ ಕಾಣಿಸಲು ಹೋರಾಡುವಳಿವಳು
ತನ್ನದದೆಷ್ಟೇ ನೋವಿನ ಭಾರವಿದ್ದರೂ
ತೋರಿಸಲಾರಲೆಂದೂ ಮಕ್ಕಳ ಮೇಲೆ
ತಾನೆಲ್ಲರ ಬಳಿ ಇರಲಾರೆನೆಂದೇ ತಾಯಿಯನು
ಎಲ್ಲರ ಬಳಿ ಕಳುಹಿಸಿದ ಇದುವೇ ದೇವರ ಲೀಲೆ
*ಅಶೋಕ ಬೇಳಂಜೆ*

.gif)

.gif)


0 Comments