ನ್ಯಾ.ನಾಗಮೋಹನ್ ದಾಸ್ ವರದಿ ಸಂಪೂರ್ಣ ಅವೈಜ್ಞಾನಿಕ, ತಿರಸ್ಕರಿಸಲು ಕರೆ: ಜ್ಞಾನಪ್ರಕಾಶ್ ಸ್ವಾಮೀಜಿ

 ನ್ಯಾ.ನಾಗಮೋಹನ್ ದಾಸ್ ವರದಿ ಸಂಪೂರ್ಣ ಅವೈಜ್ಞಾನಿಕ, ತಿರಸ್ಕರಿಸಲು ಕರೆ: ಜ್ಞಾನಪ್ರಕಾಶ್ ಸ್ವಾಮೀಜಿ



ನ್ಯಾ.ನಾಗಮೋಹನ್ ವರದಿ ತಿರಸ್ಕಾರಕ್ಕಾಗಿ ನಾಳೆ ಧರಣಿ

 25ರಂದು ಪ್ರತಿಭಟನೆ


ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ: ಬಲಗೈ ಒಕ್ಕೂಟ


ಬೆಂಗಳೂರು:ಮಾ.25: ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ.ನಾಗಮೋಹನ್ ದಾಸ್ ಆಯೋಗವು ನೀಡಿರುವ ವರದಿಯು ಅವೈಜ್ಞಾನಿಕ, ದೋಷಪೂರಿತ ಹಾಗೂ ಪಕ್ಷಪಾತದಿಂದ ಕೂಡಿರುವುದರಿಂದ ವರದಿಯನ್ನು ತಿರಸ್ಕರಿಸಿ ಮರು ಸಮೀಕ್ಷೆ ನಡೆಸಲು ನಿನ್ನೆ ಸಂಜೆ ನಡೆದ ಪ್ರೆಸ್‌ಕ್ಲಬ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಮಾ.25ರಂದು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದೆ. ವರದಿ ತಿರಸ್ಕಾರ ಮತ್ತು ರೋಸ್ಟರ್ ಪದ್ಧತಿಯಲ್ಲಿ ಆಗಿರುವ ಅನ್ಯಾಯದ ವಿರುದ್ದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.


ಇಲ್ಲಿ ಮುಖ್ಯವಾಗಿ ನಮ್ಮ ಬಲಗೈ ಸಮುದಾಯದ ಜನಸಂಖ್ಯೆಯನ್ನು ಅಲೆಮಾರಿ ಗುಂಪಿಗೆ ಸೇರಿಸುವುದು ಹಾಗೂ ಆದಿಕರ್ನಾಟಕ, ಆದಿ-ದ್ರಾವಿಡ ಮತ್ತು ಆದಿ-ಆಂಧ್ರ ಸಮುದಾಯಗಳ ಅಂಕಿ-ಅಂಶಗಳನ್ನು ತಪ್ಪಾಗಿ ವರ್ಗೀಕರಿಸುವ ಮೂಲಕ ತಾರತಮ್ಯ ಮಾಡಲಾಗಿದೆ ಎಂದರು.


ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ನೌಕರರು ಹಾಗೂ ಸಾಮಾನ್ಯ ಕ್ಷೇತ್ರಗಳಲ್ಲಿ ಗೆದ್ದ ಜನಪ್ರತಿನಿಧಿಗಳನ್ನು ಮೀಸಲಾತಿ ಲೆಕ್ಕಾಚಾರದಲ್ಲಿ ಪರಿಗಣಿಸಿರುವುದು ವರದಿಯ ವರದಿಯ ಬಹುದೊಡ್ಡ ಲೋಪ ಎಂದು ಒಕ್ಕೂಟದ ಪರವಾಗಿ ಸ್ವಾಮೀಜಿ ಆರೋಪಿಸಿದರು.


ಸುಪ್ರೀಂಕೋರ್ಟ್ ತೀರ್ಪಿನಂತೆ ಆಯಾ ರಾಜ್ಯಗಳು ಪರಿಶಿಷ್ಟ ಜಾತಿಯ ಎಲ್ಲಾ ಉಪ ಜಾತಿಗಳಿಗೂ ಪ್ರಾತಿನಿಧ್ಯ ಸಿಗುವಂತೆ ನಿಖರ ಅಂಕಿ-ಅಂಶಗಳ ಆಧಾರದ ಮೇಲೆ ಒಳಮೀಸಲಾತಿ ನೀಡಬೇಕಿತ್ತು. ಆದರೆ, ರಾಜ್ಯ ಸರ್ಕಾರ ರಚಿಸಿದ್ದ ನ್ಯಾ.ನಾಗಮೋಹನ್ ದಾಸ್ ಆಯೋಗ ಕೇವಲ ಒಂದು ಜಾತಿ ಓಲೈಸಲು ದುರುದ್ದೇಶಪೂರಿತ ವರದಿ ನೀಡಿದೆ ಎಂದು ಬಲಗೈ ಒಕ್ಕೂಟ ಆರೋಪಿಸಿದೆ.


ಸಂಚಾಲಕರಾದ ಶ್ರೀ ಸಿದ್ದಯ್ಯ ಐಎಎಸ್‌ (ನಿವೃತ್ತ) ಮಾತನಾಡಿ, ಒಳಮೀಸಲಾತಿಯು 101 ಜಾತಿಗಳಿಗೆ ಸಮಾನವಾಗಿ ಹಂಚಿಕೆಯಾಗುವ ದೃಷ್ಟಿಯಿಂದ ಪ್ರಮಾಣ ಹೆಚ್ಚಾಗಬೇಕಾದ್ದುದ್ದು, ಅನಿವಾರ್ಯವಾಗಿರುತ್ತದೆ. ಆದರೆ, 101 ಜಾತಿಗಳ ಪೈಕಿ 1 ಜಾತಿಯ ಒತ್ತಡಕ್ಕೆ ಸರಕಾರ ಮಣಿದು ಶೇ.15+3ರ ಮೀಸಲಾತಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ಮುಂದಾದರೆ, ಬಲಗೈ ಸಮುದಾಯಗಳ ಪ್ರತಿರೋಧವನ್ನು ರಾಜ್ಯ ಸರಕಾರವು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಇದೇ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀ ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ್, ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಸಂಚಾಲಕರಾದ ಶ್ರೀ ಸಿದ್ದಯ್ಯ ಐಎಎಸ್‌ (ನಿವೃತ್ತ), ಶ್ರೀಮತಿ ವಾಣಿ ಶಿವರಾಂ, ನಿವೃತ್ತ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಟಿ.ಆರ್. ಶಿವರಾಮು ಹಾಗೂ ಶ್ರೀ ಶಿವಣ್ಣ ಕನಕಪುರ, ನಾಗೇಶ್ ರಾವ್, ಡಾ. ಮೀನಾಕ್ಷಿ, ಮತ್ತಿತರರು ರಾಜ್ಯ ಮುಖಂಡರು ಉಪಸ್ಥಿತರಿದ್ದರು.


ಕೋಟ್1:

ಸುಪ್ರೀಂಕೋರ್ಟ್ ತೀರ್ಪಿನಂತೆ ಆಯಾ ರಾಜ್ಯಗಳು ಪರಿಶಿಷ್ಟ ಜಾತಿಯ ಎಲ್ಲಾ ಉಪ ಜಾತಿಗಳಿಗೂ ಪ್ರಾತಿನಿಧ್ಯ ಸಿಗುವಂತೆ ನಿಖರ ಅಂಕಿ-ಅಂಶಗಳ ಆಧಾರದ ಮೇಲೆ ಒಳಮೀಸಲಾತಿ ನೀಡಬೇಕಿತ್ತು. ಆದರೆ, ರಾಜ್ಯ ಸರ್ಕಾರ ರಚಿಸಿದ್ದ ನ್ಯಾ.ನಾಗಮೋಹನ್ ದಾಸ್ ಆಯೋಗ ಕೇವಲ ಒಂದು ಜಾತಿ ಓಲೈಸಲು ದುರುದ್ದೇಶಪೂರಿತ ವರದಿ ನೀಡಿದೆ.

- ಶ್ರೀ ಶ್ರೀ ಶ್ರೀ ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ್, 

ಅಧ್ಯಕ್ಷರು, ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟ.


ಕೋಟ್ 2:

101 ಜಾತಿಗಳ ಪೈಕಿ 1 ಜಾತಿಯ ಒತ್ತಡಕ್ಕೆ ಸರಕಾರ ಮಣಿದು ಶೇ.15+3ರ ಮೀಸಲಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಲು ಮುಂದಾದರೆ, ಬಲಗೈ ಸಮುದಾಯಗಳ ಪ್ರತಿರೋಧವನ್ನು ರಾಜ್ಯ ಸರಕಾರವು ಎದುರಿಸಬೇಕಾಗುತ್ತದೆ.

-  ಶ್ರೀ ಸಿದ್ದಯ್ಯ ಐಎಎಸ್‌ (ನಿವೃತ್ತ),

ರಾಜ್ಯ ಸಂಚಾಲಕರು, ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟ


ಫೋಟೋ ಕ್ಯಾಪ್ಷನ್:

ನಗರದ ಪ್ರೆಸ್ ಕ್ಲಬ್ ಸುದ್ದಿಗೋಷ್ಠಿಯಲ್ಲಿ ಅವೈಜ್ಞಾನಿಕವಾಗಿರುವ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಸಮಿತಿ ವರದಿಯನ್ನು ತಿರಸ್ಕರಿಸಬೇಕು ಎಂದು ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಶ್ರೀ ಶ್ರೀ ಶ್ರೀ ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ, ಸಿದ್ದಯ್ಯ ಐಎಎಸ್‌ (ನಿವೃತ್ತ), ಶ್ರೀಮತಿ ವಾಣಿ ಶಿವರಾಂ, ಟಿ.ಆರ್. ಶಿವರಾಮು ಹಾಗೂ ಶ್ರೀ ಶಿವಣ್ಣ ಕನಕಪುರ ಮತ್ತಿತರರು ಮಾತನಾಡಿದರು.


ವರದಿ :ಡಾ.ವಿಲಾಸ್ ಕಾಂಬಳೆ

ದೇಹ ದಾನಿಗಳ ಗ್ರಾಮ 

ಶೇಗುಣಶಿ

Image Description

Post a Comment

0 Comments