ರಾಯಬಾಗ :*ಪಟ್ಟಣದ ಶಿಕ್ಷಣ ಪ್ರಸಾರಕ ಮಂಡಳ ಸಂಸ್ಥೆಯ ನರ್ಸಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ದೀಪ ಬೆಳಗಿಸುವುದು ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭ*


 ರಾಯಬಾಗ :*ಪಟ್ಟಣದ ಶಿಕ್ಷಣ ಪ್ರಸಾರಕ ಮಂಡಳ ಸಂಸ್ಥೆಯ ನರ್ಸಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ದೀಪ ಬೆಳಗಿಸುವುದು ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭ*

  

ಶುಕ್ರವಾರ ದಿನಾಂಕ ೨೭-೦೨-೨೦೨೬ ರಂದು ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ದೀಪ ಬೆಳಗಿಸುವುದು ಮತ್ತು ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ  ಬ್ಯಾರಿಸ್ಟರ್ ಶ್ರೀ ಅಮರಸಿಂಹ ಪಾಟೀಲ್  ಚೇರ್ಮನರು ಶಿಕ್ಷಣ ಪ್ರಸಾರಕ ಮಂಡಳ, ರಾಯಬಾಗ, ಮತ್ತು ಮುಖ್ಯ ಅತಿಥಿಗಳಾಗಿ  ಪ್ರೊಫೆಸರ್ ಹಜರತ್ ಅಲಿ ಪಾನಾರಿಪ್ರಾಚಾರ್ಯರು ಅಂಕಲಿ ನರ್ಸಿಂಗ್ ಕಾಲೇಜ ಅವರು ಆಗಮಿಸಿದ್ದರು. ಹಜರತ್ ಅಲಿ ಸರ್ ಅವರು ಮಾತನಾಡಿ ಅಮರಸಿಂಹ ಪಾಟೀಲ್ ಅವರು ಗ್ರಾಮೀಣ ಮತ್ತು ಕಡುಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ಆಗಲಿ ಎಂದು ಅವರು ಸಂಸ್ಥೆಯಗಳನ್ನು  ಮುನ್ನನಡಿಸುತ್ತಿದ್ದಾರೆ ಎಂದು ಹೇಳಿದರು.


ಸಮಾರಂಭದಲ್ಲಿ ಮಾತನಾಡಿದ ಅಮರಸಿಂಹ ಪಾಟೀಲ ಅವರು ರಾಯಬಾಗ ತಾಲೂಕಿನ ನರ್ಸಿಂಗ್ ವಿದ್ಯಾರ್ಥಿಗಳು ಇಲ್ಲಿ ಉತ್ತಮ ಶಿಕ್ಷಣವನ್ನು ಪಡೆದುಕೊಂಡು ಸಮಾಜಕ್ಕೆ ಒಳ್ಳೆಯ ಆರೋಗ್ಯ ಸೇವೆಗಳನ್ನು ನೀಡುತ್ತಾರೆ ಎಂದು ಅವರು ಸಮಾರಂಭದಲ್ಲಿ ಹೇಳಿದರು.


ಈ ಸಮಾರಂಭದಲ್ಲಿ ನರ್ಸಿಂಗ್ ಕಾಲೇಜ್ ಎಲ್ಲ ಉಪನ್ಯಾಸಕರಾದ ಕಿರಣ್ ಮೇತ್ರಿ, ವಿಜಯಲಕ್ಷ್ಮಿ ಪೂಜಾರಿ, ರೋಹಿತ್ ಕುರಾಡೆ ಮತ್ತು ಅಶ್ವತ್ ಚಿಕ್ಕೋಡಿಕರ್ ಮತ್ತು  ಎಮ್ ಎಲ್ ಸಿಂಗೆ ಸರ್ ಅವರು ಮತ್ತು ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಉಪಸ್ತಿತರಿದ್ದರು


ವರದಿ : ವಿಲಾಸ್ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments