ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ: ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಕರೆ

 ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ: ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಕರೆ



ಇದೇ ಮಾರ್ಚ್ 25ರಂದು ಒಳ ಮೀಸಲು ರಹಿತ ಹಳೆ ಮೀಸಲು ಜಾರಿಗಾಗಿ ಒತ್ತಾಯಿಸಿ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜನೆ: ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಕರೆ



ಬೆಂಗಳೂರು: ಮಾ.22: ರಾಜ್ಯ ಸರ್ಕಾರ ನೇಮಕ ಮಾಡಿದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗವು ನೀಡಿರುವ ವರದಿಯು ಅವೈಜ್ಞಾನಿಕ ದೋಷಪೂರಿತ ಹಾಗೂ ಪಕ್ಷಪಾತದಿಂದ ಒಳಮಿಸಲಾತಿ ನೀತಿ, ಆಯೋಗದ ವರದಿ ಹಾಗೂ ರೋಸ್ಟರ್ ವ್ಯವಸ್ಥೆಗಳ ವಿರೋಧವಾಗಿ ಈ ವರದಿಯನ್ನು ತಿರಸ್ಕರಿಸಿ ಮರು ಸಮೀಕ್ಷೆ ನಡೆಸಲು ಇದೇ ಬುಧವಾರ 25ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ (ದಿನಾಂಕ 25.03.2026)  ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶ್ರೀ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಇಂದು ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಪತ್ರಿಕಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳಿಗೆ ಅನ್ಯಾಯವಾಗುತ್ತಿದ್ದು, ಪರಿಶಿಷ್ಟ ಜಾತಿಗಳ ಒಳಮಿಸಲಾತಿ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳು ಅವೈಜ್ಞಾನಿಕವಾಗಿದೆ‌. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕಸದಸ್ಯ ಆಯೋಗದ ವರದಿ ಅಪೂರ್ಣವಾಗಿದ್ದು, ಸಮೀಕ್ಷೆ ಸರಿಯಾದ ರೀತಿಯಲ್ಲಿ ನಡೆದಿಲ್ಲ ಎಂಬ ಆಕ್ಷೇಪವನ್ನು ಹಲವಾರು ಸಂಘಟನೆಗಳು ವ್ಯಕ್ತಪಡಿಸಿದ್ದರೂ, ಅದನ್ನು ಪರಿಗಣಿಸದೆ ವರದಿ ಸಲ್ಲಿಸಲಾಗಿದೆ. ಇದೊಂದು ಒಳ ಮೀಸಲಾತಿಯಲ್ಲಿ ಬಲಗೈ ಹಾಗೂ ಮತ್ತಿತರ ಸಮುದಾಯದಗಳಿಗೆ ಮರಣ ಶಾಸನವಾಗುತ್ತದೆ. ರೋಸ್ಟರ್ ಬಿಂದುಗಳ ವಿಷಯದಲ್ಲಿ ಉಂಟಾಗಿರುವ ಅತಿ ಹೆಚ್ಚಾಗಿ ಗೊಂದಲಗಳ ಇದರ ಬಗ್ಗೆ ಸವಿವರವಾಗಿ ಪತ್ರಿಕಾಗೋಷ್ಠಿಯಲ್ಲಿ ಕರೆಯಲಾಗಿದೆ.


ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಸಂಚಾಲಕರಾದ ಶ್ರೀ ಸಿದ್ದಯ್ಯ ಐಎಎಸ್‌ (ನಿವೃತ್ತ), ಶ್ರೀ ಸಂಪತ್ ರಾಜ್, ಮಾಜಿ ಮಾಹಾಪೌರರು, ಬಿಬಿಎಂಪಿ ಬೆಂಗಳೂರು, ಶ್ರೀ ಪುರುಷೋತ್ತಮ್, ಮಾಜಿ ಮಾಹಾಪೌರರು ಮೈಸೂರು, ಅಧ್ಯಕ್ಷರಾದ ಶ್ರೀ ನಾಗೇಶ್ ರಾವ್, ಕರ್ನಾಟಕ ರಾಜ್ಯ ಮಾಲಾ ಮಹಾಸಭಾ, ಶ್ರೀಮತಿ ವಾಣಿ ಶಿವರಾಂ ಹಾಗೂ ಶ್ರೀ ಶಿವಣ್ಣ ಬಿ, ಕನಕಪುರ, ರಾಜ್ಯದ ವಿವಿಧ ಕಡೆಯ ರಾಜ್ಯ ಮುಖಂಡರು ಮತ್ತಿತರರು ಭಾಗವಹಿಸುವವರು.


ವರದಿ : ಡಾ. ವಿಲಾಸ ಕಾಂಬಳೆ 

ದೇಹ ದಾನಿಗಳ ಗ್ರಾಮ 

ಶೇಗುಣಶಿ

Image Description

Post a Comment

0 Comments