ಪ್ರೀತಿಯ ಸ್ವಾಗತ

 ಪ್ರೀತಿಯ ಸ್ವಾಗತ


"""""""""""""'"""''''"""""

ಆತ್ಮೀಯರೇ,

ಹಿಂದೆ ಪೂಬಾಗಿ ,ಹೂವಿನ ಬಾಗಿ  ಎಂದೇ ಪ್ರಸಿದ್ಧವಾಗಿದ್ದ ರಾಯಬಾಗವು ಒಂದು ಅಗ್ರಹಾರವಾಗಿತ್ತು .ಅಂದರೆ, ಬ್ರಾಹ್ಮಣರ ವಸತಿ ಸ್ಥಾನವಾಗಿತ್ತು. ೧೧ನೇ ಶತಮಾನದಲ್ಲಿ ರಾಜಾದಿತ್ಯ ಎಂಬಾತ ಮೊಟ್ಟ ಮೊದಲ ಗಣಿತಶಾಸ್ತ್ರಜ್ಞ ಆಗಿದ್ದಲ್ಲದೆ ಕವಿಯೂ ಆಗಿ ಪ್ರಸಿದ್ಧಿಯನ್ನು ಪಡೆದಿದ್ದ .ಮೊದಲಿನಿಂದಲೂ ರಾಯಭಾಗವು ವಾಸ್ತು ಶಿಲ್ಪ, ಜಾನಪದ ಕಲೆ ,ಜನಪದ ಸಾಹಿತ್ಯ, ಶಿಷ್ಟ ಸಾಹಿತ್ಯ ಹಾಗೂ ಸಂಸ್ಕೃತಿಗೆ ತನ್ನದೇ ಆದ ವಿಶಿಷ್ಟತೆಯನ್ನು ಮೆರೆದು ಇಂದು ಸಾಕಷ್ಟು ಜನ ಸಾಹಿತಿ ಹಾಗೂ ಕಲಾವಿದರನ್ನು ನಾಡಿಗೆ ನೀಡಿದೆ. 

ಇಂತಹ ನಾಡಿನಲ್ಲಿ ದಿ.೧೯.೨.೨೦೨೫ ರಂದು ೮ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಕನ್ನಡ ಉಪನ್ಯಾಸಕಿ, ಸಾಹಿತಿ, ಮಹಿಳಾಪರ ಚಿಂತಕಿಯಾಗಿ ಹೋರಾಟ ಮಾಡುತ್ತ ಬಂದ ಡಾ. ರತ್ನಾ ಬಾಳಪ್ಪನವರ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸನ್ಮಾನಗೊಳ್ಳುತ್ತಿರುವುದು ನಮಗೆಲ್ಲ ತುಂಬಾ ಸಂತೋಷ .

ಕಾರಣ ,ಅರ್ಥಪೂರ್ಣವಾಗಿ ನಡೆಯಲಿರುವ ಈ ನುಡಿ ಜಾತ್ರೆಯ ಸಂಭ್ರಮದಲ್ಲಿ ಕನ್ನಡಮ್ಮನ ತೇರನ್ನು ಎಳೆಯಲು ತಾವೆಲ್ಲ ಆಗಮಿಸಿ ಶೋಭೆ ತರಬೇಕಾಗಿ ಪ್ರೀತಿಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇನೆ.

""""'""""''''""""'""""''"""""""""""""'""""'"""""""

ಶಿವಾನಂದ . ಬ. ಬೆಳಕೂಡ 

ಸಂಚಾಲಕ/ಸಂಪಾದಕ 

ಸಂಘರ್ಷ ಸಾಹಿತ್ಯಕೂಟ, ರಾಯಬಾಗ (ಬೆಳಗಾವಿ ಜಿಲ್ಲೆ)

Image Description

Post a Comment

0 Comments