ನಮಸ್ತೇ,
ಮಾನ್ಯರೇ, ನನ್ನ ೨೩ ನೆಯ ಕೃತಿ ಹಾಗೂ ಐದನೆಯ ಪತ್ತೆದಾರಿ ಕಾದಂಬರಿ *ಶೆಡ್ಡಿನಲ್ಲಿ ಮಾಡಿದ ಷಡ್ಯಂತ್ರ* ಸಧ್ಯದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ.
ಕಾಲೇಜ್ ಒಂದರಲ್ಲಿ ಶಿಕ್ಷಕಿ ಯಾಗಿದ್ದ ಸುರಸುಂದರಿ ಜಸ್ಮಿತಾಳನ್ನು ನೋಡಿದ ಚಲನಚಿತ್ರ ನಿರ್ಮಾಪಕನು ಅವಳನ್ನು ಸಿನಿಮಾದಲ್ಲಿ ನಟಿಸಲು ಕೇಳಿಕೊಂಡು ಮುಂಗಡವಾಗಿ ಹಲವು ಲಕ್ಷ ರೂಪಾಯಿ ಹಾಗೂ ಲಂಬಾರ್ಗಿನಿ ಕಾರನ್ನು ಕೊಡುತ್ತಾನೆ.
ಬೆಂದಕಾಳೂರಿಗೆ ಶೂಟಿಂಗ್ ಗೆ ಬಂದ ಜಸ್ಮಿತಾಳು ಚಿನ್ನಾಭರಣಗಳ ವ್ಯಾಪಾರಿ ಹಾಗೂ ಅತಿ ಶ್ರೀಮಂತ ಗಗನೇಶ್ ನನ್ನು ಬುಟ್ಟಿಗೆ ಹಾಕಿಕೊಳ್ಳುವಳು.
ಪಳನಿಯಪ್ಪನು ಜಸ್ಮಿತಾಳು ತನ್ನಿಂದ ದೂರ ಸರಿದುದನ್ನು ತಿಳಿದು, ಕೊಟ್ಟ ಹಣವನ್ನು ಮರಳಿಸಲು ಕೇಳಿದಾಗ ಅವಳು ಗಗನೇಶ್ ನ ಸಲಹೆಯಂತೆ ಬೆಂದಕಾಳೂರಿನ ಶೆಡ್ ಒಂದಕ್ಕೆ ಕರೆಸಿ,ಅಲ್ಲಿರುವ ಗೂಂಡಾಗಳ ಸಹಾಯದಿಂದ ಚಿತ್ರಹಿಂಸೆ ಕೊಟ್ಟು ಅವನನ್ನು ಕೊಲ್ಲಿಸುವಳು.
ಗಗನೇಶನ ಹೆಣವನ್ನು ತನ್ನ ಸಹಾಯಕರಿಂದ ಲಂಬಾರ್ಗಿನಿ ಕಾರಿನಲ್ಲಿ ಬೆಡಗು ಜಿಲ್ಲೆಯ ಕುಂಟಿಕೊಪ್ಪ ಸಮೀಪದ ರಮ್ಯ ಎಸ್ಟೇಟ್ ನ ಬಳಿಗೆ ತಂದು ಅರ್ಧಂಬರ್ಧ ಸುಟ್ಟುಹಾಕಿ ವಾಪಾಸ್ ಮರಳುವಾಗ ಅವಳ ಕಾರು ಸಣ್ಣ ಅಪಘಾತವಾಗಿ ಮೈಸೂರಿನ ಗ್ಯಾರೇಜ್ ಗೆ ಹೋಗುತ್ತದೆ.
ಪತ್ತೆದಾರ ರಾಮನಾರಾಯಣ ಹಾಗೂ ಪೋಲಸ್ ವರಿಷ್ಠ ಕೃಷ್ಣಪ್ರಸಾದ್ ಈ ವಿಷಯದಲ್ಲಿ ತನಿಖೆಯನ್ನು ಕೈಗೊಂಡು ಅಪರಾಧಿಗಳನ್ನು ಸೆರೆ ಹಿಡಿದು ಕಂಬಿ ಎಣಿಸುವಂತೆ ಮಾಡುವರು.
ಅಪರಾಧಿಗಳು ಮಾಡಿದ ಬರ್ಬರ ಕೃತ್ಯವನ್ನು ಭೇದಿಸಿ ಅವರ ಬಂಧನವನ್ನು ಪತ್ತೆದಾರರು ಹೇಗೆ ಮಾಡಿದರು ಎನ್ನುವ ರೋಮಾಂಚಕ ಕಾದಂಬರಿಯಿದು.
ನಿಮ್ಮ ಪ್ರತಿಗಳನ್ನು ಮುಂಗಡವಾಗಿಯೇ ಕಾಯ್ದಿರಿಸಿಕೊಳ್ಳುವುದು.
ಪುಸ್ತಕದ ಲೋಕಾರ್ಪಣೆಯ ದಿನಾಂಕ ಹಾಗೂ ಸ್ಥಳವನ್ನು ಸಧ್ಯದಲ್ಲಿಯೇ ತಿಳಿಸಲಾಗುವುದು.
*ಕಿಗ್ಗಾಲು ಎಸ್ ಗಿರೀಶ್*
ಮೂರ್ನಾಡು
೧೨-೦೨-೨೦೨೫
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments