ಸಾಕಪ್ಪ ಸಾಕಯ್ಯೋ ಸುಳ್ಳು!!*

 *ಸಾಕಪ್ಪ ಸಾಕಯ್ಯೋ ಸುಳ್ಳು!!*


ಸಾಕಪ್ಪ ಸಾಕಯ್ಯೋ ಸುಳ್ಳು ಸ್ನೇಹಿತರ ಸಹವಾಸ 

ಕೆಟ್ಟ ಚಟಕಚ್ಚಿ ಹಾಳು ಮಾಡುತೈತೆ ಸಂಗದೋಷ

ಬಂಧು-ಬಳಗದಾಗ ಆಗಾಗ ನಡೆವುದು ಮೋಸ

ಯಾರಾದರಿರಲಿ ಎಲ್ಲರ ಜೊತೆ ಎಚ್ಚರದಿಂದಿರಬೇಕು ಬಹುಶಃ!


ನಮ್ಮ ಸುತ್ತ ಮುತ್ತ ಸಂಚರಿಸುತ್ತವೆ ದ್ರೋಹ ಮೋಸ 

ಯಾರ ಮೇಲೂ ಇಡಲಾರದಂತಾಗಿದೆ ನಂಬಿಕೆ ವಿಶ್ವಾಸ 

ಭಾವನಾತ್ಮಕ ಸಂಬಂಧಗಳ ಉಳಿಸಿಕೊಳ್ಳುವುದೇ ಹರಸಾಹಸ 

ಅತಿಸ್ವಾರ್ಥಿಗಳ ಬುದ್ದಿಗೆ ಮಾತ್ರ ಬೇಕಾದಷ್ಟು ಅವಕಾಶ!


ಜಾಣತನ ಜೋಪಾನ ಜತನದಿಂದ ಪಾರಾಗಬೇಕು 

ನಯವಂಚಕರಿಂದ ನಾಜೂಕಾಗಿ ದೂರವಾಗಬೇಕು 

ಹಗಲು ದರೋಡೆ ನಡೆದಿದೆ ಜಾಗೃತರಾಗಬೇಕು 

ನಮ್ಮ ಸುತ್ತ ನಿತ್ಯ ನಟಿಸುವವರ ಬಗ್ಗೆ ಅರಿತು ಬದುಕು! 


ಒನಪು ವೈಯಾರ ಚಿತ್ತಾರಕ್ಕೆ ಮನ ಮರುಳಾಗಬಾರದು 

ಕಾಡುವ ಕಲ್ಪನಾ ಲೋಕದೊಳಗೆ ತೇಲಾಡಬಾರದು 

ತಾಳ್ಮೆ ಇಲ್ಲದೆ ತಿಳಿಗೇಡಿಯಾಗಿ ತೊಳಲಾಡಬಾರದು 

ಸ್ನೇಹ ಪ್ರೀತಿ ವಿಶ್ವಾಸಗಳ ಬಗ್ಗೆ ನೋಡು ತಿಳಿ ತಿಳಿದು!

🐤 ಮಾರುತೇಶ್ ಮೆದಿಕಿನಾಳ

Image Description

Post a Comment

0 Comments