ಇದು ಯುಗಯುಗದಲ್ಲೂ ಸ್ತ್ರೀ ಎಂಬ ಶಕ್ತಿಗೆ, ಪುರುಷನೆಂಬ ಚೈತನ್ಯ ಹೇಳಿರುವ, ಹೇಳಲೇಬೇಕಿರುವ ಕವಿತೆ. ಅನಂತ ಅಕ್ಕರೆ, ವಾತ್ಸಲ್ಯ, ಆಸ್ಥೆಗಳೊಂದಿಗೆ ನಿತ್ಯ ನಿರಂತರ ಬುವಿಯನ್ನು, ಬದುಕುಗಳನ್ನು ಸಲಹುತ್ತಿರುವ ಹೆಣ್ಣೆಂಬ ಮಮತಾಮಯಿಗೆ, ಷರತ್ತುಗಳೇ ಇಲ್ಲದ ಹೃದಯದ ತುಂಬು ಪ್ರೀತಿಯೊಂದೆ ಸಾರ್ವಾಕಾಲಿಕ ಶ್ರೇಷ್ಟ ಉಡುಗೊರೆ. ಏನಂತೀರಾ.?" - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಅನುರಾಗ.!
ಗೆಳತಿ ನಾ ನಗುತ
ನಿನ್ನ ನಗಿಸುವುದಲ್ಲ ಪ್ರೀತಿ
ನಿನ್ನ ನಗಿಸುತ್ತಾ
ನಾ ನಗುವುದು ಪ್ರೀತಿ.!
ಗೆಳತಿ ನಿನ್ನ ಕಣ್ಣೀರೊರೆಸಿ
ಸಂತೈಸುವುದಲ್ಲ ಒಲವು
ನೀ ಕಣ್ಣೀರು ಹರಿಸದಂತೆ
ಸಂಭಾಳಿಸುವುದು ಒಲವು.!
ನಿನ್ನ ಹಾಡಿಗೆ ತಲೆದೂಗಿ
ಮಲಗುವುದಲ್ಲ ಅನುರಾಗ
ನಾ ಹಾಡುತ್ತಾ ತಟ್ಟಿ ನಿನ್ನ
ಮಲಗಿಸುವುದು ಅನುರಾಗ.!
ನನ್ನ ಹೆಜ್ಜೆಯ ಹಿಂದೆ ನಿನ್ನ
ಕರೆದೊಯ್ಯುವುದಲ್ಲ ಪ್ರೇಮ.!
ನಿನ್ನ ಹೆಜ್ಜೆಗೆ ಹೆಜ್ಜೆಬೆರೆಸಿ
ಜೊತೆ ನಡೆವುದೇ ಪ್ರೇಮ.!
ಗೆಳತಿ ಹಗಲಿರುಳು ನಿನ್ನ
ನೆನೆಯುವುದಲ್ಲ ಪ್ರೀತಿ
ಅನವರತ ಅವಿರತ ನಿನ್ನ
ಮರೆಯದಂತಿರುವುದು ಪ್ರೀತಿ.!
ಬದುಕೆಲ್ಲ ನಿನಗಾಗಿ
ಕಾಯುತ್ತ ಇರುವುದಲ್ಲ ಒಲವು
ನಿನಗಾಗಿ ಕಾಯುತ್ತಲೇ
ಬದುಕಿ ಬಿಡುವುದು ಒಲವು.!
ಎ.ಎನ್.ರಮೇಶ್. ಗುಬ್ಬಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments