ಬದುಕು

 "ಇದು ಬದುಕನ್ನು ಬದುಕುವ ಬೆರಗಿನ ಕವಿತೆ. ಬದುಕಿನ ಬೆರಗನು ಬಯಲಾಗಿಸುವ ಬೆಳಕಿನ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಬಾಳ ಸತ್ಯಗಳ ಅನಾವರಣವಿದೆ. ಅರಿತು ಅರ್ಥೈಸಿದಷ್ಟೂ ಬೆಳಕಿನ ತತ್ವ ಸತ್ವಗಳ ರಿಂಗಣವಿದೆ. " ಬದುಕು' ಚಿಂತಿಸುತ್ತಾ ಕುಳಿತರೆ ಜಟಿಲ ನಾಮಪದ. ನಗುತ್ತಾ ನಡೆವವರಿಗೆ ಸರಳ ಕ್ರಿಯಾಪದ. ಏನಂತೀರಾ..?"- ಎ.ಎನ್.ರಮೇಶ್. ಗುಬ್ಬಿ.


ಬದುಕು


.!            


ಗೆಳತಿ ಯೋಚಿಸಿದಂತಲ್ಲ ಬದುಕು

ಧರತಿ ಯಾಚಿಸಿದಂತೆ ಬದುಕು

ವಿಧಿ ಯಾದಿ ಸೂಚಿಸಿದಂತೆ ಬದುಕು

ವಿಧಾತ ವಾಚಿಸಿದಂತಿಲ್ಲಿ ಬದುಕು.!


ಎಣಿಸಿದಂತಿಲ್ಲ ಇಲ್ಲಿನ ಬದುಕು

ಜೀವ ದೈವ ಋಣಿಸಿದಂತೆ ಬದುಕು

ಕಾಲ ಅನುರಣಿಸಿದಂತೆ ಬದುಕು.!

ಯೋಗ ರಿಂಗಣಿಸಿದಂತೆ ಬದುಕು.!


ಫಲಾಫಲ ಕರುಣಿಸಿದಂತೆ ಬದುಕು

ರಾಗ ದ್ವೇಷ ಮಣಿಸಿದಂತೆ ಬದುಕು

ಭಾವ ಬಂಧ ತಣಿಸಿದಂತೆ ಬದುಕು

ಪಂಚಭೂತ ಉಣಿಸಿದಂತೆ ಬದುಕು.!


ಸುಮ್ಮನೇತಕೆ ಚಡಪಡಿಕೆ ಎಲ್ಲದಕು?

ವೃಥಾ ಬೇಡದ ಹಪಹಪಿಕೆ ಎದಕು.?

ಆ ಭಗವಂತ ಬರೆದಂತೆ ಬದುಕು.!

ಅವನೆ ಕಾರಣ ಸಕಲ ಸಂಪದಕು.!!


ಎ.ಎನ್.ರಮೇಶ್. ಗುಬ್ಬಿ.

Image Description

Post a Comment

0 Comments