ಚಿತ್ರ ಹನಿಗವನ
*ಅಂತರ
*
ಬಾನಾಡಿಗೂ ಮೀನಿಗೂ ನೆಡುವ ಅಂತರ
ಶರಧಿಯ ಅಲೆಗಳ ಏರು ಉಬ್ಬರ
ಆದರೂ ಸೆಳೆಯುತಿಹುದು ಪ್ರೀತಿ ಹತ್ತಿರ
ಇಬ್ಬರ ಮಿಲನವು ಜಲಕೆ ಬೇಸರ
ನೀರನು ತೊರೆದರೆ ಮೀನಿಗೆ ಮೃತ್ಯು
ವಾರಿದಿಯನು ಅಪ್ಪಿದರೆ ಖಗಕೆ ಕುತ್ತು
ಆದರೂ ಸೆಳೆಯುತಿವೆ ಕಣ್ಣೋಟ ಹೊತ್ತು
ಸಾರುತಿದೆ ಚಿತ್ರವು ಪ್ರೇಮವನು ಹೊತ್ತು
ಗೊರೂರು ಜಮುನ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments