ವರಕವಿ ಬೇಂದ್ರೆಯವರ
ಜನ್ಮದಿನಾಚರಣೆಯ ಸವಿಸ್ಮರಣೆ ಮತ್ತು ನಮನಗಳೊಂದಿಗೆ.. ಬೇಂದ್ರೆ ಅವರ ಕವನ ಸಂಕಲನಗಳ ಶೀರ್ಷಿಕೆಗಳ ಕೂಡಿಸಿ ಬರೆದದ್ದು…ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ ತಿಳಿಸಿ.
ಒಲವೆ ನಮ್ಮ ಬದುಕು
ಎನ್ನುತ ನಲಿದರು
ಮೂಡಲ ಮನೇಲಿ ಬೆಳಕನ್ನು ಹಚ್ಚಿ
ಮತ್ತೆ ಶ್ರಾವಣ ಬಂತು ಎಂದು
ಹಾಡಿದರು
ಸಖೀ ಗೀತ ಕೂಡಿ ಉಯ್ಯಾಲೆ ಏರಿ
ಸಂದೇಶ ಕಳುಹಿಸದರು
ಮೇಘದೂತನಲ್ಲಿ ವಿನಯದಿ
ಬಾ ಹತ್ತಿರ ಎನ್ನುತ
ಕೃಷ್ಣ ಕುಮಾರಿಗೆ
ಮುಗಿಲ ಮಲ್ಲಿಗೆ ಮುಡಿಸಿ
ನಾಕುತಂತಿ ಮೀಟಿ ಮುಕ್ತಕಂಠದೀ
ಹಾಡುಪಾಡಲಿ
ಚೈತ್ರಾಲಯದಿ ಸೂರ್ಯಪಾನ
ಹೃದಯ ಸಮುದ್ರದಿ ನಮನ ಸಲ್ಲಿಸಿ
ಗಂಗಾವತಾರಣ ಧರೆಗಿಳಿಸಿ
ಜೀವಲಹರಿಗೆ ಅರಳು-ಮರಳು ಎನ್ನುವ
ಕಾಮಕಸ್ತೂರಿಯಲಿ
ಪ್ರತಿಬಿಂಬಗಳ ಮೂಡಿಸಿ
ಕನ್ನಡ ನುಡಿಯ ಹಿಮಾಲಯದೆತ್ತರ
ಏರಿಸಿ ಮೆರೆಸಿದರು.
✍️…ನಿಮ್ಮವನೆ..ರಾಜ್❣️
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments