*ಗಣರಾಜ್ಯೋತ್ಸವದ ಶುಭಾಶಯಗಳೊಂದಿಗೆ*
*೫೦೧ನೇ*.
✍️ *ಬದುಕುವ ಮಾತು*🙏
*"ಪ್ರಜೆಗಳು ಪ್ರಭುತ್ವ ಹೊಂದುವಂತಾಗಲಿ
"*.
*ಈ ದೇಶದ ಸಂಪತ್ತು, ಸವಲತ್ತುಗಳು ಎಲ್ಲಾ ಪ್ರಜೆಗಳಿಗೂ ಸಮಾನವಾಗಿ ಸಿಗಬೇಕೆಂದು ಬಯಸಿದವರು ಡಾ. ಬಿ.ಆರ್. ಅಂಬೇಡ್ಕರ್ ವರು. ಆ ನಿಟ್ಟಿನಲ್ಲಿಯೇ ಅವರು ತಮ್ಮ ಜೀವನಪೂರ್ತಿ ಹೋರಾಟ ಮಾಡುತ್ತಾ ಬಂದರಲ್ಲದೆ ಸಂವಿಧಾನದಲ್ಲಿಯೂ ಎಲ್ಲರಿಗೂ ಸೌಲಭ್ಯ ಸಿಗುವಂತೆ ಕಾನೂನು ಮಾಡಿದ್ದಾರೆ ಕೂಡ. ಅಷ್ಟೇ ಅಲ್ಲದೆ ಆಳುವವರು, ಅಧಿಕಾರಿಗಳು ಶ್ರದ್ದೆ, ಪ್ರಾಮಾಣಿಕದಿಂದ ಸಂವಿಧಾನದಲ್ಲಿರುವ ನಿಯಮದಂತೆ ಆಳ್ವಿಕೆ ಮಾಡಿ ದೇಶದ ಸಮಸ್ತ ಪ್ರಜೆಗಳಿಗೂ ನ್ಯಾಯ ಒದಗಿಸಿರಿ ಎಂದು ಸಲಹೆ ನೀಡಿದ್ದಾರೆ. ಜೊತೆಗೆ ಸಂವಿಧಾನದಲ್ಲೂ ನಿಯಮ ಅಳವಡಿಸಿದ್ದಾರೆ. ಈ ಮೂಲಕ ಅವರು ಈ ದೇಶದ ಪ್ರತಿಯೊಬ್ಬರಿಗೂ ಸಾಮಾಜಿಕ ಆರ್ಥಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸವಲತ್ತು, ಸಮಾನತೆ ಸಿಗಬೇಕೆಂದು ಕನಸು ಕಂಡರು. ಅಂತಹ ಸಂವಿಧಾನ ಜಾರಿಗೆ ಬಂದದ್ದು ೧೯೫೦ ಜನವರಿ ೨೬. ಅಂದರೆ ಇಂದಿನ ದಿನವೇ. ಆದರೆ ಮೋಸ ವಂಚನೆ ದುರಾಡಳಿತದ ಮೂಲಕ ಕೆಲವೇ ಕೆಲವು ಕಪಿ ಮುಷ್ಟಿಗಳ ಕೈಯಲ್ಲಿ ಇಂದೀಗೂ ಸಂಪತ್ತು,ಅಧಿಕಾರಗಳು ಪ್ರಾಪ್ತವಾಗಿವೆ. ಮತ್ತೂ ಆಗುತ್ತಿವೆ ಕೂಡ..? ಆದ್ದರಿಂದ ಪ್ರಬುದ್ಧರು, ಪ್ರಾಮಾಣಿಕ ಹೋರಾಟಗಾರರು, ಚಿಂತಕರಾದವರು ಹೀಗೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡಿ, ಸಂಪತ್ತು ಸಾಮಾಜಿಕ ನ್ಯಾಯ ಸೇರಿದಂತೆ ಎಲ್ಲಾ ಸವಲತ್ತುಗಳು ಪ್ರಜೆಗಳಿಗೆಲ್ಲ ಸಿಗುವಂತೆ ಪ್ರಯತ್ನ ಮಾಡಬೇಕಿದೆ . ಮತ್ತೂ ನಿಜವಾಗಿಯೂ ಪ್ರಜೆಗಳೇ ಪ್ರಭುಗಳಾದ ದಿನವನ್ನಾಗಿ ಗಣರಾಜ್ಯೋತ್ಸವ ಆಚರಿಸಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕಿದೆ*.
*************
ಗಣಪತಿ ಚಲವಾದಿ (ಗಗೋಚ)
ಬಿ.ಎಮ್.ಟಿ.ಸಿ.ನಿರ್ವಾಹಕರು,
ಮಯೂರವರ್ಮ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments