ಜನ ಗಣ ಮನ*


 *ಎಲ್ಲಾ ಭಾರತೀಯ ಬಾಂಧವರಿಗೆ 76 ನೇ ಗಣ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು*🙏🙏🌹🌹🙏🙏


*ಜನ ಗಣ ಮನ* 


ರಾಷ್ಟ್ರ ಪಕ್ಷಿ ನವಿಲಿ ನಂತೆ

ಗರಿಗೆದರಿ ಕುಣಿಯುತಿದೆ

ರಾಷ್ಟ್ರದ ಜನ ಗಣ ಮನ 

ಈ ಗಣ ರಾಜ್ಯೋತ್ಸವದ ದಿನ.


ಸ್ವಾತಂತ್ರ್ಯ ತಂದು ಕೊಟ್ಟಿತು 

ಹಕ್ಕಿಯಂತೆ ಹಾರಾಡಲು 

ಸಂವಿಧಾನ ಕಡಿವಾಣ ಹಾಕಿತು 

ನೀತಿಯಿಂದ ಜೀವಿಸಲು.


ನಮ್ಮ ಭಾವನೆಗಳಿಗೆ ನಾವೇ 

ಗಡಿ ಹಾಕಿ ನಡೆಯಲು 

ದೇಶ ವಿದೇಶದೋಳು ನಾವೇ 

ಮಾದರಿಯ ನಾಗರೀಕರು.

 

ದೇವರಿಗಿಂತ ದೇಶ ದೊಡ್ಡದೆಂದು 

ಕರ್ತವ್ಯ ನಿಭಾಯಿಸುವ

ಯಾರಿಗೂ ಚ್ಯುತಿ ಬಾರದಂತೆ 

ಹಕ್ಕುಗಳ ಅನುಭವಿಸುವ


ದೇಶಭಕ್ತಿ ನಮ್ಮ ಶಕ್ತಿ 

ಎಂದು ಜಗಕೆ ತೋರುವ

ಭಾರತ ಮಾತಾ ಕೀ ಜೈ 

ಎಂದು ಕೂಗಿ ಹೇಳುವ.


         ✍️ಡಾ. ಮಹೇಂದ್ರ ಕುರ್ಡಿ

Image Description

Post a Comment

0 Comments