*ಓದು ಓದು ಪುಸ್ತಕ*
ಓದು ಓದು ಪುಸ್ತಕ ಓದು ಜ್ಞಾನದ ತಿಳಿ ತಿಳಿಯುವುದು
ಅರಿವು ಮೂಡುವುದು ವಾಸ್ತವದ ಸತ್ಯ ಯಾವುದೆಂದು
ಅರಿತುಕೋ ಆಗಿನ ಆಗಿಹೋಗಿದ್ದ ಇತಿಹಾಸ ಏನೆಂದು
ಆಗ ಆಗಲೇ ನಿನ್ನ ನೀ ತಿದ್ದಿಕೊಳ್ಳುವ ಬುದ್ದಿ ಬರುವುದು!
ಪುಸ್ತಕದ ಪ್ರೇಮ ಸಂಬಂಧ ಬೆಳೆಸಿಕೊಳ್ಳಬೇಕು
ಸುಜ್ಞಾನದ ಸಂಪತ್ತು ದಿನ ದಿನವೂ ವೃದ್ಧಿಸಬೇಕು
ಸಮಾಜದ ಹಿತ ಕಾಳಜಿ ಬಯಸೋ ಮನ ಮಿನುಗಬೇಕು
ಪರಿಸರ ಪ್ರೀತಿಸಿ ಕಾಳಜಿ ಮಾಡುವಂತ ಮನುಷ್ಯನಾಗಬೇಕು!
ಗುರುಹಿರಿಯರ ಗೌರವಿಸಿ ಮಾರ್ಗದರ್ಶನ ಪಡೆಯಬೇಕು
ಸರ್ವರ ಹಿತ ಕಾಯುವ ಗುಣಸಂಪನ್ನನಾಗಲು ಓದಬೇಕು
ಅವರಿವರನ್ನದೆ ಅನ್ಯರ ಜೊತೆ ಅನ್ಯೋನ್ಯವಾಗಿರಬೇಕು
ಪರಿಸರ ಪರಿಸ್ಥಿತಿ ಸನ್ನಿವೇಶಕ್ಕೆ ತಕ್ಕ ಹಾಗೆ ಬದುಕಬೇಕು!
ಮನದ ಮೈಲಿಗೆ ತೊಳೆಯಲು ಮತ್ತೆ ಮತ್ತೆ ಓದುವುದು
ದೇಶ ಸುತ್ತಿ ಕೋಶ ಓದಿದರೆ ಸತ್ಯ ಮನಗಾಣುವುದು
ಶರಣರ ಸಾಹಿತ್ಯದ ಸಿಹಿಸತ್ವ ಸವಿ ಸವಿದು ಓದು
ಆಗಲೇ ಮನುಷ್ಯ ಮನುಷ್ಯರ ಮಧ್ಯೆ ಒಳ್ಳೆ ಬಾಂಧವ್ಯ ಬೆಳೆವುದು!
🐤 ಮಾರುತೇಶ್ ಮೆದಿಕಿನಾಳ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments