*ಪ್ರೇಮ ಬೆಸುಗೆ*
ಜೀವಭಾವ ಬೆಸೆದುಕೊಂಡು
ಹಿತವ ತಂದೆ ಬಾಳಿಗೆ|
ನೋವ ಮರೆಸಿ ನಗೆಯ ತರಿಸಿ
ಮುದವ ಕೊಟ್ಟೆ ಬದುಕಿಗೆ||
ಇಂಪುದನಿಯ ಚೈತ್ರಗಾನ
ಹಾಡಿ ಮನಸು ಸೆಳೆದಿಹೆ|
ತಂಪನೆರೆದು ಬೆಂದ ಮನಕೆ
ಸಗ್ಗ ಸುಖವ ನೀಡಿಹೆ||
ಬಾಳ ಹಾದಿಯಲ್ಲಿ ನೀನು
ಬೆಳ್ಳಿ ಕಿರಣ ಚಂದ್ರಮ|
ತೋಳು ಬಳಸಿ ಬಳಿಯಲಿರಲು
ಹೃದಯದಲ್ಲಿ ಸಂಭ್ರಮ||
ಜನುಮ ಜನುಮ ಬಂಧವಿದುವೆ
ಪ್ರೇಮ ಬೆಸುಗೆ ಬಂಧುರ|
ತನುವಿನಲ್ಲಿ ಪುಳಕ ತಂದೆ
ಇನಿದು ಮಾತು ಸುಂದರ||
*ಅಶ್ವತ್ಥನಾರಾಯಣ*
*ಮೈಸೂರು*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments