ಇಲ್ಲಿವೆ ಅವಳ ನಗೆಯ ಮುತ್ತುಗಳ ಅನಾವರಣದ ಸಪ್ತ ಹನಿಗಳು

 "ಇಲ್ಲಿವೆ ಅವಳ ನಗೆಯ ಮುತ್ತುಗಳ ಅನಾವರಣದ ಸಪ್ತ ಹನಿಗಳು


. ಇದು ಆಗಿರಲೂ ಬಹುದು ನಿಮ್ಮದೇ ಎದೆಯಲ್ಲಿ ಅನುರಣಿಸಿದ ಸುಪ್ತ ದನಿಗಳು. ಅನುರಾಗದ ಮಧುರ ಸ್ವರಗಳ, ಒಲವಿನ ಭಾವಸಂವೇದನೆಗಳ ಖನಿಗಳು. ನಿಮ್ಮ ಕನಸಿನ ಬೆಳದಿಂಗಳ ಬಾಲೆಯ ನಗುವಿನೊಂದಿಗೆ ಸಮೀಕರಿಸುತ್ತಾ ಈ ಹನಿಗಳನ್ನು ಆಸ್ವಾಧಿಸಿ.. ಮತ್ತಷ್ಟು ಮಧುವಾದೀತು. ಮಗದಷ್ಟು ಮಧುರವೆನ್ನಿಸೀತು. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.




1. ಪರಿಣಾಮ.!


ಅವಳು ನಕ್ಕಳು

ಹಾಗೆ ಸಣ್ಣಗೆ.!

ಇವನಾದ ಹಾಗೆ

ಹಾಗೆ ತಣ್ಣಗೆ.!


****************


2. ಸ್ವಾದ.!


ಅವಳ ನಗೆಯಲ್ಲಿ ಮಿಂದೇಳುವ

ಇವನನ್ನು ಮರುಳನೆಂದಿತು ಜಗ

ಜಗಕೇನು ಗೊತ್ತು..

ಒಲವಿನ ನಗೆ ಝಳಕದ ಸೊಗ.! 


********************


3. ವಿಸ್ಮಯ.!


ಅವಳಧರದಿಂದ ಸುರಿದ

ನಗೆ ಹನಿಗಳೇ..

ಅವನೆದೆ ಚಿಪ್ಪಲ್ಲರಳಿದ

ಸ್ವಾತಿ ಮುತ್ತುಗಳು.!


******************


4. ಅಚ್ಚರಿ.!


ಅವಳು ಹೊರಳಿ

ನಕ್ಕು ನಡೆದಳು.!

ಇವನು ಅರಳಿ

ಜಗಮರೆತು ಕುಳಿತ.!


*********************


5. ಕಲ್ಪನಾತೀತ.!


ಅವಳ ನಗೆಮುತ್ತುಗಳಿಗೆ

ಕಟ್ಟಬೇಡಿ ಬೆಲೆ..

ಅದು ಅಗಣಿತ ಮೌಲ್ಯದ

ಆನಂದಾನುಭಾವ ನೆಲೆ.!


********************


6. ಬಂಧ.!


ಅವಳ ನಗುವಿಗೆ ಬಂದರೂ

ಕ್ಷಣಕಾಲ ಜ್ವರ..

ಇವನ ನಗೆ ನೆಮ್ಮದಿಗೆ 

ಇಡೀ ದಿನವೆಲ್ಲ ಬರ.!


****************


7. ಶ್ರೀಮಂತ.!


ಅವನ ಹೃದಯ

ತಿಜೋರಿಯ ತುಂಬ

ಅವಳ ನಗೆಯ

ಮುತ್ತುಗಳ ರಾಶಿ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments