*ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಸ್ಮರಣೆ*

 *ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಸ್ಮರಣೆ*


"""""""""""'''''''''''''''''''''''''''''''''''''''''''''''''''''''''''''''''''''''''''"""''''''''''''''''''''''''''

ಮನೆಯ ಮಾಣಿಕ್ಯ ದೀಪ್ತಿಗಳಾಗಿ ಗೌರವದ ಕುಟುಂಬಕ್ಕೆ ಜ್ಯೋತಿಗಳು ಹೆಣ್ಣು ಮಕ್ಕಳು, 

ಸಮಾಜದಲ್ಲಿ ಹಡೆದವರ ಗೌರವ ಪ್ರತಿಷ್ಠೆಗಳಿಗೆ ಭರವಸೆಯ ಕುಸುಮಗಳು,


ಗುರುಹಿರಿಯರ ಮಾತಿಗೆ ತಲೆ ಬಾಗುವ ಹೆಮ್ಮೆಯ ಭರತ ಮಾತೆಯ ಮಕ್ಕಳು,

ಆದರ್ಶ ಸಮಾಜದ ಶ್ರೇಯೋಭಿವೃದ್ಧಿಗೆ ನಿತ್ಯ ದುಡಿವ ಶ್ರಮಜೀವಿಗಳು,


ಬದುಕು ಭವಿಷ್ಯಗಳಲಿ  ಹಲವು ಕನಸುಗಳ ಹೊತ್ತ ಪೋರರಿಗೆ ವಿದ್ಯೆ ದಾರೀದೀಪ,

ಆದರ್ಶ ನಾರಿಯಾಗಿ ತ್ಯಾಗಮಯಿ ಸಮಾಜದಲ್ಲಿ ಪ್ರಜ್ವಲಿಸುವ ಪ್ರತಿರೂಪ,


ಕುಟುಂಬದ  ಪತಿಯ ಸಹದರ್ಮಿಣಿಯಾಗಿ ಸಮಾಜ ಸೇವೆಗೆ ಆದರ್ಶದ ಮಾನಿನಿ,

ದುಡಿವ ಛಲದಿಂದ ಹತ್ತು ಹಲವು ಕ್ಷೇತ್ರಗಳಲ್ಲಿ ಸರ್ವಸ್ವವನ್ನು ತ್ಯಾಗ ಮಾಡುವ ಯಶಸ್ವಿನಿ,


ಸಮಾಜದ ಅವಿಭಾಜ್ಯ ಅಂಗವಾಗಿರುವ ಸ್ತ್ರೀಯರನ್ನು ಗೌರವಿಸೋಣ,

ಈ ಹೆಣ್ಣು ಮಕ್ಕಳ ದಿನದಂದು ಅವರ ಆರೋಗ್ಯ ಸೌಖ್ಯಗಳಿಗೆ ಕಟಿಬದ್ಧರಾಗೋಣ,

*•••••••••••••••••••••••••••••••••••••••••••*

ನಿಮ್ಮ ಆತ್ಮೀಯ ಶಿಕ್ಷಕ ಮಿತ್ರ :-

*ಕೈವಲ್ಯಸಾಹಿತಿ-ಬೋ.ಪಾ.ವೆಂಕಟೇಶ್, ಬೋಧನಹೊಸಹಳ್ಳಿ*

Image Description

Post a Comment

0 Comments