* ಐತಿಹಾಸಿಕ ಸ್ವಾಭಿಮಾನದ ಯುದ್ಧ ೦೧-೦೧-೧೮೧೮"*

 *"ಐತಿಹಾಸಿಕ ಸ್ವಾಭಿಮಾನದ ಯುದ್ಧ ೦೧-೦೧-೧೮೧೮"* 



ಅದೊಂದು ಐತಿಹಾಸಿಕ ಇತಿಹಾಸ ನಮ್ಮನ್ನು ಇಂದು ತಲೆ ಎತ್ತಿ ಎದೆ ಮುಂದೆ ತರಿಸಿ ಸ್ವಾಭಿಮಾನದಿಂದ ಬದುಕುವಂತಹ ನೈಜ ಘಟನೆಯನ್ನು ಭಾರತೀಯರಿಗೆ ಪರಿಚಯಿಸಿದ ಮಹಾನ್ ಮಾನವತಾವಾದಿ, ಸ್ವಾಭಿಮಾನಿ ಸಾರಥಿ, ರಾಷ್ಟ್ರನಾಯಕರಾದ, ಬೃಹತ್ ಲಿಖಿತ  ಸಂವಿಧಾನದ ಪಿತಮಹಾರಾದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ನಮ್ಮದೊಂದು ನೀಲ್ ಸಲಾಮ್... 

ನೀಲ್ ಸಲಾಮ್... 

ನೀಲ್ ಸಲಾಮ್...


ಭಾರತದ ಇತಿಹಾಸದಲ್ಲಿ ಈ ಮಣ್ಣಿನ ಮೂಲನಿವಾಸಿಗಳಾದ ನಮ್ಮ ಚರಿತ್ರೆಯು ಹಲವಾರು ಕ್ರಾಂತಿಗಳಿಂದ ನಾಂದಿ ಹಾಡಿದೆ  ಮತ್ತು ಇತಿಹಾಸದಿಂದ ಮರೆ ಮಾಚಿದ ಎಷ್ಟೋ ಕದನಗಳು ಇತಿಹಾಸದ ಪುಟಗಳಲ್ಲಿ ಕೈ ಬಿಟ್ಟು ಹೋಗಿರುವ ಘಟನೆಗಳನ್ನು ಇನ್ನು ಬೆಳಕಿಗೆ ತರುವಂತಹ ಪ್ರಯತ್ನಗಳು ನಡೆಯುತ್ತಿವೆ. 


"ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲಾರರು" ಎಂಬ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರ ಈ ಒಂದು ಮಾತು ನಮ್ಮನ್ನು ಸ್ವಾಭಿಮಾನದ ಹೋರಾಟವಾದ ಭೀಮಾ ಕೋರೆಂಗಾವ್ ಇತಿಹಾಸವನ್ನು ಅರಿಯಲು ಅಂಬೇಡ್ಕರ್ ರವರು ಸಾಕ್ಷಿಯಾಗಿ ನಮಗೆಲ್ಲ ಇತಿಹಾಸವನ್ನು ಉಣಬಡಿಸಿದವರಾಗಿದ್ದಾರೆ. 


ಕ್ರಿ.ಪೂರ್ವ ಮತ್ತು ಕ್ರಿ.ಶಕದವರೆಗೂ ಭಾರತ ದೇಶವನ್ನು ಒಂದಲ್ಲ ಒಂದು ರೀತಿಯಲ್ಲಿ ರಾಜರುಗಳು ದಂಡೆತ್ತಿ ಬಂದು ಆಳ್ವಿಕೆಯನ್ನು ಮಾಡುತ್ತಾ ಬರುತ್ತಿದ್ದರು ದೇಶದಲ್ಲಿರುವ ಸಂಪತ್ತುಗಳನ್ನ ದೋಚಿಕೊಂಡು ಹೋಗುತ್ತಿದ್ದರು ಆದರೆ ಈಸ್ಟ್ ಇಂಡಿಯಾ ಕಂಪನಿ ಮತ್ತು ಪೇಶ್ವೆಗಳ ಆಳ್ವಿಕೆಯಲ್ಲಿ ಭಾರತದಲ್ಲಿದ್ದ ಎಷ್ಟೋ ಮೂಲ ನಿವಾಸಿಗಳ ತಮ್ಮೆಲ್ಲ ಸ್ವಾವಲಂಬಿ ಬದುಕಿನ ಹಕ್ಕುಗಳನ್ನು ಕಿತ್ತುಕೊಂಡು ಅವರುಗಳ ಜೀವನವನ್ನು ಮನ ಇಚ್ಛೆಯಂತೆ ಕ್ರೌರ್ಯದಿಂದ ಉಡುವ ಬಟ್ಟೆ, ತಿನ್ನುವ ಅನ್ನ, ಬದುಕುವ ನೀತಿಗಳಿಂದ, ಭೂಮಿಯನ್ನು ಹೊಂದದಂತ,  ಶಿಕ್ಷಣದಿಂದ ದೂರವಿರುವಂತ  ಮನುಷ್ಯರನ್ನು ಪ್ರಾಣಿಗಳಿಗಿಂತ ಕಡೆಯಾಗಿ ಕಾಣುವ ಆಡಳಿತ ನಡೆಸಿಕೊಂಡು ಬರುತ್ತಿದ್ದ ಆ ಕಾಲದಲ್ಲಿ ಪೇಶ್ವೆಗಳ ಎರಡನೇ ಬಾಜಿರಾಯ ಸುಮಾರು 28000 (ಇಪ್ಪತ್ತೆಂಟು ಸಾವಿರ)  ಪೇಶ್ವೆಗಳ ಸೈನ್ಯದ ಗುಂಪನ್ನು ಹೊಂದಿದ್ದು ಇವರ ವಿರುದ್ಧ ಸಮರ ಸಾರಿದ ಸ್ವಾಭಿಮಾನಕ್ಕಾಗಿ ಪಣತೊಟ್ಟ ಸಿದ್ದನಾಕನ  ಮಹಾರ್ ಸೈನ್ಯವಾದ ಕೇವಲ 500 (ಐದು ನೂರು) ಜನರ ಪಡೆ ಹೊಂದಿದ್ದ ಬಲಿಷ್ಠವಾದ ಸ್ವಾಭಿಮಾನ ತುಂಬಿರುವ ಕೆಚ್ಚೆದೆಯ ನಾಯಕರಿಗೂ ಪೇಶ್ವೆಗಳ ದೌರ್ಜನ್ಯಕ್ಕೆ ತುತ್ತಾಗಿದ್ದವರ ವಿರುದ್ಧ ನಡೆದಂತ  ಯುದ್ಧದಲ್ಲಿ

ಹಗಲು ರಾತ್ರಿ ನಿರಂತರವಾಗಿ ಯುದ್ಧಮಾಡಿ ಗೆದ್ದ ಮಹಾರ್ ಸೈನಿಕರ ಇತಿಹಾಸವೇ ಭೀಮಾ ಕೋರೆಂಗಾವ್. 

ಯುದ್ದದಿಂದ ರಕ್ತ ಚರಿತ್ರೆಯನ್ನು ಬರೆದಂತಹ ಇತಿಹಾಸದ ದಿನವಾದ ಅಂದಿನ ೦೧-೦೧-೧೮೧೮ ರ ಇತಿಹಾಸದ ಮಹಾ ಪುರುಷರಿಗೆ ಇಂದು ನಾವೆಲ್ಲರೂ ೨೦೭ ರ ವರ್ಷದ  ನಮನಗಳನ್ನು ಸಲ್ಲಿಸೋಣ ಹಾಗೂ ಯುದ್ಧ ಗೆದ್ದಂತಹ ಸಂಭ್ರಮಾಚರಣೆಯನ್ನು ಭಾರತದ ಪ್ರತಿಯೊಬ್ಬ ಮೂಲ ನಿವಾಸಿಯು ಆಚರಿಸುವಂತ ದಿನವು ಇದಾಗಿದೆ. 


ಇಂತಹ ಇತಿಹಾಸ ಇರುವಂತಹ ನಮ್ಮ ಭಾರತದ ದೇಶದಲ್ಲಿ ಧರ್ಮ ಜಾತಿ ಕುಲ ಮತ ಎಂದು ಪಿಂಗಡಿಸಿ  ಮನುಷ್ಯರನ್ನು ಮನುಷ್ಯರಂತೆ ಕಾಣದೆ ಎಲ್ಲರನ್ನೂ ಒಡೆದು ಆಳುವಂತಹ ಸಮಾಜ ನಮ್ಮ ಕಣ್ಣಮುಂದೆ ಕಾಣುತ್ತಿದೆ.


ಪ್ರತಿ ವರ್ಷವೂ ಜನವರಿ ಒಂದನೇ ತಾರೀಕಿನಂದು ಹೊಸವರುಷದ ದಿನದ ವಿಷಯವಾಗಿ ಹಲವಾರು ಬಗೆ ಬಗೆಯ ರೀತಿಯಲ್ಲಿ ಆಚರಣೆ ಸಂಭ್ರಮದ  ಕಾರ್ಯಕ್ರಮ ನಡೆಯುತ್ತದೆ ಆದರೆ ಇಷ್ಟು ದೊಡ್ಡ  ಇತಿಹಾಸವನ್ನು ಹೊಂದಿರುವ ನಮ್ಮ ಭಾರತ ಮೋಜು ಮಸ್ತಿಗಳಲ್ಲಿ ಮುಳುಗಿ ಹೋಗಿದೆ. 

ಸ್ವಾಭಿಮಾನ ಚರಿತ್ರೆಯ ಇತಿಹಾಸ ಸೃಷ್ಟಿಸಿದ ಮಹಾ ಪುರುಷರ ಆದರ್ಶಗಾಳಿ ನಮಗೆಲ್ಲ ದಾರಿ ದೀಪವಾಗಲಿ ಭಾರತ ದೇಶವು ಏಳಿಗೆಯನ್ನು ಸಾಧಿಸಲಿ.

ಹಳೆ ವರುಷ ಏನೇ ಆಗಿರಲಿ

ಹೊಸ ವರ್ಷದ ಒಳ್ಳೆಯದನ್ನೇ ಕೊಡಲಿ ಶುಭಾಶಯಗಳು... 

____ಪೈ.ರಾ.ಮ.ಮಾದು - ಸಿದ್ದಯ್ಯನಪುರ.

Image Description

Post a Comment

0 Comments